ನವದೆಹಲಿ, ಜ.23 ವಸಾಹತುಶಾಹಿ ಆಳ್ವಿಕೆಗೆ ಉಗ್ರ ಪ್ರತಿರೋಧ ಒಡ್ಡಿ ಪರಾಕ್ರಮ ತೋರಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದಂದು ಇಡೀ ದೇಶ ಸ್ಮರಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನೇತಾಜಿ ಅವರ ಆಲೋಚನೆಗಳಿಂದ ಆಳವಾಗಿ ಪ್ರಭಾವಿತರಾಗಿ, ನಾವು ಭಾರತಕ್ಕಾಗಿ ಅವರ ದೃಷ್ಟಿಕೋನವನ್ನು ಸಾಕಾರಗೊಳಿಸಲು ಕೆಲಸ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.
ಇಂದು, ಪರಾಕ್ರಮ್ ದಿವಸ್ ಆಚರಿಸಲಾಗುತ್ತಿದೆ ನಾನು ನೇತಾಜಿ ಸುಭಾಸ್ ಚಂದ್ರ ಬೋಸ್ ಅವರಿಗೆ ಗೌರವ ಸಲ್ಲಿಸುತ್ತೇನೆ ಮತ್ತು ಭಾರತದ ಇತಿಹಾಸಕ್ಕೆ ಅವರ ಅಪ್ರತಿಮ ಕೊಡುಗೆಯನ್ನು ಸ್ಮರಿಸಿಕೊಳ್ಳುತ್ತೇನೆ ಎಂದು ಮಹಾನ್ ನಾಯಕನಿಗೆ ಟ್ವೀಟ್ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಭಾರತೀಯ ಕುಸ್ತಿ ಸಂಸ್ಥೆಯ ಸಾಮಾನ್ಯಸಭೆ ರದ್ದು
ಆಜಾದ್ ಹಿಂದ್ ಫೌಜ್ ಸಂಸ್ಥಾಪಕರ ಜನ್ಮದಿನದ ನೆನಪಿಗಾಗಿ 2021 ರಲ್ಲಿ ಈ ದಿನವನ್ನು ಕೇಂದ್ರಸರ್ಕಾರ ಪರಾಕ್ರಮ್ ದಿವಸ್ ಎಂದು ಘೋಷಿಸಿತ್ತು.
Subhas Chandra Bose, Netaji, Jayanti, PM Modi,