ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮದಿನ, ಪ್ರಧಾನಿ ಮೋದಿ ಗೌರವ ನಮನ

Social Share

ನವದೆಹಲಿ, ಸೆ.25 -ದೀನ್ ದಯಾಳ್ ಉಪಾಧ್ಯಾಯ ಆವರು ಅಂತ್ಯೋದಯಕ್ಕೆ ಒತ್ತು ನೀಡಿ ಬಡವರ ಸೇವೆಗೆ ಸೂರ್ತಿ ಯಾಗುತ್ತಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿದ್ದಾರೆ.

ಕಳೆದ 1916ರ ಸೆ.25ರಂದು ಮಥುರಾದಲ್ಲಿ ಜನಿಸಿದ ಉಪಾಧ್ಯಾಯ ಅವರು ಆರ್‍ಎಸ್‍ಎಸ್‍ನಲ್ಲಿ ತೊಡಗಿಸಿಕೊಂಡು ಜನಸಂಘದ ಸ್ಥಾಪಕರಲ್ಲಿ ಮುಂಚೂಣಿ ಸದಸ್ಯರಲ್ಲಿ ಒಬ್ಬರಾಗಿದ್ದರು. ಬಿಜೆಪಿಯನ್ನು ಕಟ್ಟಿ ಬೆಳೆಸಿ ಹಲವಾರು ನಾಯಕರನ್ನು ಬೆಳಕಿಗೆ ತಂದರು ಎಂದು ನೆನೆದಿದ್ದಾರೆ.

ಅವರ ಸಮಗ್ರ ಮಾನವತಾವಾದಿ ಮತ್ತು ಅಂತ್ಯೋದಯ ಮೂಲಕ ಬಡವರನ್ನು ಸಮಾಜದಲ್ಲಿ ಆರ್ಥಿಕವಾಗಿ ಸಾಮಾಜಿಕವಾಗಿ ಮೇಲೆತ್ತುವ ಅವರ ತತ್ವವನ್ನು ತಮ್ಮ ಸರ್ಕಾರದ ಕಲ್ಯಾಣ ಕ್ರಮಗಳಿಗೆ ಮಾರ್ಗದರ್ಶಿ ಸೂತ್ರವೆಂದು ಮೋದಿ ಅವರು ಉಲ್ಲೇಖಿಸಿದ್ದಾರೆ.

ನಾನು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಿ ಅವರ ಜಯಂತಿಯಂದು ಅವರಿಗೆ ಗೌರವ ಸಲ್ಲಿಸುತ್ತೇನೆ ಅವರು ಅಸಾಧಾರಣ ಚಿಂತಕ ಮತ್ತು ಬುದ್ಧಿಜೀವಿ ಎಂದು ದೇಶದ ಜನ ನೆನಪಿಸಿಕೊಳ್ಳುತ್ತಾರೆ ಎಂದು ಮೋದಿ ಹೇಳಿದರು.

Articles You Might Like

Share This Article