ಗಾಂಧಿ,- ಶಾಸ್ತ್ರಿಗೆ ಪ್ರಧಾನಿ ಮೋದಿ ನಮನ

Social Share

ನವದೆಹಲಿ, ಅ.2 – ಮಹಾತ್ಮ ಗಾಂಧಿ ಅವರಿಗೆ ಗೌರವವಾಗಿ ಸ್ಮರಿಸಿ ನಮಿಸಿ ಖಾದಿ ಮತ್ತು ಕರಕುಶಲ ಉತ್ಪನ್ನಗಳನ್ನು ಎಲ್ಲರೂ ಖರೀದಿಸಿ ಎಂದು ಪ್ರಧಾನಿ ನರೇಂದ್ರ ಮೊದಿ ದೇಶದ ಜನತೆಗೆ ಕರೆ ನೀಡಿದ್ದಾರೆ. ಇದೇ ವೇಳೆ ಭಾರತದ ಎರಡನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ಪ್ರೀತಿಯಿಂದ ನೆನಪಿಸಿಕೊಂಡು ಇಂದು ಅವರ ಜನ್ಮ ವಾರ್ಷಿಕೊತ್ಸವದಲ್ಲಿ ಅವರ ಸರಳತೆ ಮತ್ತು ದೇಶ ಸೇವೆಯ ಬದ್ದತೆ ಅಜರಾಮರ ಎಂದು ಇಬ್ಬರು ಮಹನೀಯರಿಗೆ ಶ್ರದ್ಧಾಂಜಲಿ ಅರ್ಪಿಸಿ ದ್ದಾರೆ.

ಈ ಗಾಂಧಿ ಜಯಂತಿ ಇನ್ನಷ್ಟು ವಿಶೇಷವಾಗಿದೆ ಏಕೆಂದರೆ ಭಾರತವು ಆಜಾದಿ ಕಾ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ . ಅವರ ಆದರ್ಶಗಳನ್ನು ಯಾವಾಗಲೂ ಪಾಲಿಸಬೇಕು ಎಂದು . ನಾನು ನಿಮ್ಮೆಲ್ಲರನ್ನೂ ಒತ್ತಾಯಿಸುತ್ತೇನೆ ,ಖಾದಿ ಮತ್ತು ಕರಕುಶಲ ಉತ್ಪನ್ನಗಳನ್ನುಹೆಚ್ಚಾಗಿ ಖರೀದಿಸಿ ಸಂಭ್ರಮಿಸಿ ಎಂದು ಟ್ವೀಟ್ ಮಾಡಿದ್ದಾರೆ.

ನಮ್ಮ ಇತಿಹಾಸದ ಅತ್ಯಂತ ನಿರ್ಣಾಯಕ ಸಮಯದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಕಠಿಣ ನಾಯಕತ್ವವು ಯಾವಾಗಲೂ ಸ್ಮರಣೀಯವಾಗಿದೆ.ಅವರಿಗೆ ದೇಶಧ ಜನತೆ ಸದಾ ನೆನೆಯುತ್ತಾರೆ ಅವರಿಗೆ ಬಾವಪೋರ್ಣ ನಮನ ಎಂದು ಹೇಳಿ ಶಾಸ್ತ್ರಿಯವರ ಜೀವನ ಪಯಣ ಮತ್ತು ಸಾಧನೆಗಳನ್ನು ಪ್ರದರ್ಶಿಸುವ ದೆಹಲಿಯ ಪ್ರಧಾನಮಂತ್ರಿ ಸಂಗ್ರಹಾಲಯದಲ್ಲಿನ ಅವರ ಗ್ಯಾಲರಿಯಿಂದ ಕೆಲವು ಚಿತ್ರಗಳನ್ನು ಪ್ರಧಾನಿ ಹಂಚಿಕೊಂಡಿದ್ದಾರೆ.

Articles You Might Like

Share This Article