ನವದೆಹಲಿ, ಜ.23- ನೇತಾಜಿ ಸುಭಾಷ್‍ಚಂದ್ರಬೋಸ್ ಅವರ 125ನೆ ಜನ್ಮದಿನೋತ್ಸವದಂದು ಪ್ರಧಾನಿ ನರೇಂದ್ರ ಮೋದಿ ಅವರು ಗೌರವ ನಮನ ಸಲ್ಲಿಸಿದ್ದಾರೆ.ದೇಶಕ್ಕೆ ಬೋಸ್ ಅವರು ನೀಡಿರುವ ಸ್ಮರಣೀಯ ಕೊಡುಗೆಗೆ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುತ್ತಾನೆ ಎಂದು ಮೋದಿ ಹೇಳಿದ್ದಾರೆ.
ಆಜಾದ್ ಹಿಂದ್ ಫೌಜ್‍ನ ಸಂಸ್ಥಾಪಕರಾದ ಬೋಸ್ ಅವರ ಜನ್ಮದಿನಾಚರಣೆ ನಿಮಿತ್ತ ತಮ್ಮ ಸರ್ಕಾರ ಘೋಷಣೆ ಮಾಡಿರುವ ಪರಾಕ್ರಮ ದಿವಸದ ಸಂದರ್ಭದಲ್ಲಿ ಮೋದಿ ಜನತೆಗೆ ಶುಭ ಕೋರಿದ್ದಾರೆ.ಮೋದಿ ಅವರು ಇಂದು ಸಂಜೆ ಇಂಡಿಯಾ ಗೇಟ್ ಬಳಿ ಬೋಸ್ ಅವರ ಹಾಲೋಗ್ರಾಂ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ.
# ಬಾಳಾಠಾಕ್ರೆ ನೆನಪು ಚಿರಂತನ:
ಶಿವಸೇನಾ ಧುರೀಣ ಬಾಳಾಠಾಕ್ರೆ ಅವರ 96ನೆ ಜನ್ಮದಿನವಾದ ಇಂದು ಮೋದಿ ಅವರು ಗೌರವನಮನ ಸಲ್ಲಿಸಿದ್ದ, ಠಾಕ್ರೆ ಜನನಾಯಕನಾಗಿ ಎಂದೆಂದಿಗೂ ಸ್ಮರಣೀಯರಾಗಿರುತ್ತಾರೆ ಎಂದು ಹೇಳಿದ್ದಾರೆ.
ಕಟ್ಟಾ ಹಿಂದುತ್ವವಾದಿ ನಾಯಕರಾಗಿದ್ದ ಬಾಳಾಠಾಕ್ರೆ ಅವರು 1926ರಲ್ಲಿ ಜನಿಸಿದ್ದರು. ಬಿಜೆಪಿಯೊಂದಿಗೆ ದೀರ್ಘಕಾಲ ಮಿತ್ರಪಕ್ಷವಾಗಿದ್ದ ಶಿವಸೇನೆಯನ್ನು ಠಾಕ್ರೆ ಸ್ಥಾಪಿಸಿದ್ದರು. 2019ರಲ್ಲಿ ಉಭಯ ಪಕ್ಷಗಳ ಮೈತ್ರಿ ಮುರಿದುಬಿದ್ದಿತು. ಠಾಕ್ರೆ ಅವರು 2012ರಲ್ಲಿ ವಿವಶರಾದರು.
