ಮೊದಲು ಮತದಾನ, ನಂತರ ಉಪಹಾರ : ಪ್ರಧಾನಿ ಮೋದಿ ಕರೆ

Social Share

ನವದೆಹಲಿ, ಫೆ.10- ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಹಿನ್ನೆಲೆಯಲ್ಲಿ ಹಲವು ನಾಯಕರು ಶುಭ ಹಾರೈಸಿದ್ದು, ಜನತೆ ಭಯ ಬಿಟ್ಟು ಮನೆಯಿಂದ ಹೊರ ಬಂದು ಮತ ಚಲಾಯಿಸುವಂತೆ ಮನವಿ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮೊದಲು ಮತದಾನ, ನಂತರ ಉಪಹಾರ ಎಂದು ನೆನಪ್ಪಿನಲ್ಲಿಟ್ಟುಕೊಳ್ಳಿ ಎಂದಿದ್ದಾರೆ.
ಟ್ವಿಟ್ ಮಾಡಿರುವ ಪ್ರಧಾನಿ ಅವರು, ಮೊದಲ ಹಂತದ ಚುನಾವಣೆಯಲ್ಲಿ ಅರ್ಹ ಎಲ್ಲಾ ಮತದಾರರು ಉತ್ಸಾಹದಿಂದ ಕೋವಿಡ್ ನಿಯಮಗಳನ್ನು ಪಾಲನೆ ಮಾಡಿ ಮತದಾನದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದ್ದಾರೆ. ಪಹ್ಲೆ ಮತಾನ್, ಫಿರ್ ಜಲಪಾನ್ (ಮೊದಲ ಮತ, ನಂತರ ಉಪಹಾರ ಸೇವಿಸಿ) ಎಂದು ಕರೆ ನೀಡಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಟ್ವಿಟ್ ಮಾಡಿದ್ದು, ಜನರು ಮನೆಯಿಂದ ಹೊರಗೆ ಬಂದು ಮತ ಚಲಾಯಿಸಿ. ದೇಶವನ್ನು ಎಲ್ಲ ಭಯಗಳಿಂದ ಮುಕ್ತಗೊಳಿಸಿ ಎಂದು ಕರೆ ನೀಡಿದ್ದಾರೆ.
ಉತ್ತರ ಪ್ರದೇಶದ ಪಶ್ಚಿಮ ಭಾಗದ ಶಾಮ್ಲಿ, ಹಾಪುರ್, ಗೌತಮ್ ಬುದ್ಧ ನಗರ, ಮುಜಾಫರ್ನಗರ, ಮೀರತ್, ಬಾಗ್ಪತ್, ಗಾಜಿಯಾಬಾದ್, ಬುಲಂದ್ಶಹರ್, ಅಲಿಗಢ, ಮಥುರಾ ಮತ್ತು ಆಗ್ರಾ ಸೇರಿ 11 ಜಿಲ್ಲೆಗಳ 58 ವಿಧಾನಸಭಾ ಸ್ಥಾನಗಳಿಗೆ, ಬೆಳಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ.

Articles You Might Like

Share This Article