‘ಒಂದು ದೇಶ ಒಂದು ಸಮವಸ್ತ್ರ’ ಸಿದ್ಧಾಂತ ಪ್ರತಿಪಾಡಿಸಿದ ಪ್ರಧಾನಿ ಮೋದಿ

Social Share

ನವದೆಹಲಿ,ಅ.28- ನಕಲಿ ಸುದ್ದಿಗಳನ್ನು ಹಂಚುವ ಮುನ್ನ ನೂರು ಬಾರಿ ಯೋಚಿಸಬೇಕು. ಜನರಿಗೆ ಸುದ್ದಿ ಮತ್ತು ಸಂದೇಶಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಆಧುನಿಕ ತಂತ್ರಜ್ಞಾನದ ವ್ಯವಸ್ಥೆಯನ್ನು ಒದಗಿಸುವ ಅಗತ್ಯವಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಹರಿಯಾಣದಲ್ಲಿ ನಡೆಯುತ್ತಿರುವ ವಿವಿಧ ರಾಜ್ಯಗಳ ಗೃಹ ಸಚಿವರ ಸಮಾವೇಶವನ್ನು ಉದ್ದೇಶಿಸಿ ವಚ್ರ್ಯುವಲ್ ಮೂಲಕ ಮಾತನಾಡಿದ ಅವರು, ಒಂದು ದೇಶ ಒಂದು ಸಮವಸ್ತ್ರ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ.

ಒಂದು ಸಣ್ಣ ಸುಳ್ಳು ಮಾಹಿತಿ ಅಥವಾ ಸುದ್ದಿ ಇಡೀ ದೇಶಾದ್ಯಂತ ದೊಡ್ಡ ಸಂಘರ್ಷಕ್ಕೆ ಕಾರಣವಾಗಬಹುದು. ಈ ನಿಟ್ಟಿನಲ್ಲಿ ಜನರನ್ನು ಜಾಗೃತಗೊಳಿಸುವ ಅಗತ್ಯವಿದೆ. ಯಾವುದೇ ಮೂಲದಿಂದಾದರೂ ಸುದ್ದಿ ಬಂದಾಗ ಅದನ್ನು ಮತ್ತೊಬ್ಬರಿಗೆ ಕಳುಹಿಸುವ ವೇಳೆ ನೂರು ಬಾರಿ ಯೋಚಿಸಬೇಕು ಎಂದು ಸಲಹೆ ನೀಡಿದ್ದಾರೆ.

ವಿಜಯೇಂದ್ರಗೆ ಸಿಎಂ ಸ್ಥಾನ ಸಿಗಲೆಂದು ಅಶ್ವಮೇಧ ಯಾಗ

ಜನರಿಗೆ ಸುಳ್ಳುಸುದ್ದಿಗಳನ್ನು ಪರಿಶೀಲಿಸುವ ವ್ಯವಸ್ಥೆಗಳು ಇರಬೇಕು. ನಿರಂತರವಾಗಿ ಇಂಟರ್‍ನೆಟ್‍ನಲ್ಲಿ ತೊಡಗಿಸಿಕೊಳ್ಳುವವರಿಗೆ ಮಾಹಿತಿಯ ಅರಿವು ಇರುತ್ತದೆ. ಆದರೆ, ಅಪರೂಪಕ್ಕೆ ಸಾಮಾಜಿಕ ಜಾಲತಾಣಗಳನ್ನು ಬಳಸುವವರು ತಪ್ಪು ಮಾಹಿತಿಗಳನ್ನು ನಂಬುವ ಸಾಧ್ಯತೆಗಳಿರುತ್ತವೆ. ಈ ರೀತಿಯ ತೊಂದರೆಗಳನ್ನು ನಿವಾರಿಸಲು ತಂತ್ರಜ್ಞಾನ ದೊಡ್ಡ ಪಾತ್ರ ವಹಿಸಲಿದೆ. ಸ್ಮಾರ್ಟ್ ವ್ಯವಸ್ಥೆ ಸ್ಮಾರ್ಟ್ ಕಾನೂನಿಗಾಗಿ ಸ್ಮಾರ್ಟ್ ತಂತ್ರಜ್ಞಾನ ಅಗತ್ಯವಿದೆ ಎಂದು ಹೇಳಿದರು.

ಬಂದೂಕು ಹಿಡಿದ ನಕ್ಸಲಿಯರು ಮತ್ತು ಪೆನ್ನಿನೊಂದಿಗೆ ಜೋಡಿತವಾದ ನಕ್ಸಲ್‍ವಾದಗಳು ಇವೆ. ನಮ್ಮ ಸರ್ಕಾರ ಸುದೀರ್ಘ ಕಾಲದಿಂದಲೂ ಈ ಕ್ಷೇತ್ರದ ಮೇಲೆ ನಿಗಾ ಇಟ್ಟಿದೆ. ಎಲ್ಲಾ ರೀತಿಯ ನಕ್ಸಲ್ ವಾದಗಳನ್ನು ಹತ್ತಿಕ್ಕಲಾಗಿದೆ. ಯುವಕರನ್ನು ದಾರಿ ತಪ್ಪಿಸಲಾಗುತ್ತಿತ್ತು.

ನವರಂಗಿ ಆಟವಾಡಲು ಹೋಗಿ ಪೊಲೀಸ್ ಅತಿಥಿಯಾದ ಬಾಲಿವುಡ್ ನಿರ್ಮಾಪಕ

ನಕ್ಸಲ್ ಪೀಡಿತ ಪ್ರದೇಶಗಳ ಮೇಲೆ ನಿಗಾ ವಹಿಸಿದ ಬಳಿಕ ಎಡಪಂಥೀಯ ಪ್ರೇರಿತ ಚಟುವಟಿಕೆಗಳು ತಮ್ಮ ವ್ಯಾಪ್ತಿಯನ್ನು ಬೌದ್ಧಿಕ ವಲಯದ ಮೇಲೆ ಪ್ರಭಾವ ಬೀರಲು ವಿಸ್ತರಣೆಯಾಗಿದೆ. ಇದು ಸಮುದಾಯಗಳು ಮತ್ತು ಸರ್ಕಾರದ ಪ್ರಕ್ರಿಯೆಗಳ ನಡುವೆ ಅಂತರವನ್ನು ಹೆಚ್ಚಿಸುವ ಹುನ್ನಾರವಾಗಿದ್ದು, ಭವಿಷ್ಯದಲ್ಲಿ ದೊಡ್ಡ ಅಪಾಯವನ್ನೂ ಎದುರಿಸಬೇಕಾಗಿತ್ತು. ಆದರೆ, ಸರ್ಕಾರದ ಸಕಾಲಿಕ ಕ್ರಮದಿಂದ ಸುಧಾರಣೆಯಾಗಿದೆ ಎಂದು ಹೇಳಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ವಿವಿಧ ರಾಜ್ಯಗಳ ಗೃಹ ಸಚಿವರು ಈ ಸಮಾವೇಶದಲ್ಲಿ ಭಾಗವಹಿಸಿದ್ದರು.

Articles You Might Like

Share This Article