ನವದೆಹಲಿ,ಜ.20- ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಡ್-19 ಸೋಂಕಿಗೆ ಒಳಗಾಗಿರುವ ಪಂಜಾಬ್ ಮಾಜಿ ಮುಖ್ಯಮಂತ್ರಿ ಮತ್ತು ಅಕಾಲಿ ನಾಯಕ ಪ್ರಕಾಶ್‍ಸಿಂಗ್ ಬಾದಲ್ ಅವರೊಂದಿಗೆ ಮಾತನಾಡಿ ಆರೋಗ್ಯ ವಿಚಾರಿಸಿದರು ಎಂದು ಸರ್ಕಾರದ ಮೂಲಗಳು ಇಂದು ತಿಳಿಸಿವೆ.
ನಿನ್ನೆ ಬಾದಲ್ ಅವರಿಗೆ ಕೋವಿಡ್ ಪಾಸಿಟಿವ್ ಬಂದಿತ್ತು. 94 ವರ್ಷ ವಯಸ್ಸಿನ ಶಿರೋಮಣಿ ಅಕಾಲಿ ದಳದ ಹಿರಿಯ ಧುರೀಣ ಬಾದಲ್ ಅವರನ್ನು ಲೂಯಾನಾದ ದಯಾನಂದ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ (ಡಿಎಂಸಿಎಚ್)ಗೆ ದಾಖಲಿಸಲಾಗಿದೆ.
