ಉತ್ತರಾಖಂಡ್ ಕ್ಯಾಪ್, ಮಣಿಪುರ ಉತ್ತರೀಯ ಧರಿಸಿ ಗಮನ ಸೆಳೆದ ಪ್ರಧಾನಿ ಮೋದಿ

Social Share

ನವದೆಹಲಿ,ಜ.26- ಪ್ರಧಾನಿ ನರೇಂದ್ರ ಮೋದಿ ಅವರು ಈ ವರ್ಷದ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಸಾಂಪ್ರದಾಯಿಕ ಉತ್ತರಾಖಂಡ್ ಟೋಪಿ(ರಾಜ್ಯ ಪುಷ್ಪವಾದ ಬ್ರಹ್ಮಕಮಲ ಚಿತ್ರ ಸಹಿತ) ಮತ್ತು ಮಣಿಪುರದ ಉತ್ತರೀಯ ಧರಿಸಿ ಗಮನ ಸೆಳೆದರು.
ಮೋದಿ ಅವರು ಕೇದಾರನಾಥದಲ್ಲಿ ಧ್ಯಾನ-ಪ್ರಾರ್ಥನೆ ನೆರವೇರಿಸುವಾಗಲೆಲ್ಲ ಬ್ರಹ್ಮ ಕಮಲವನ್ನು ಬಳಸುತ್ತಾರೆ ಎಂದು ಅಕೃತ ಮೂಲಗಳು ತಿಳಿಸಿವೆ.   ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ಸಂದರ್ಭಗಳಲ್ಲಿ ಪೇಟ, ರುಮಾಲು ಅಥವಾ ಕ್ಯಾಪ್‍ಗಳನ್ನು ವಿಭಿನ್ನವಾಗಿ ಆಯ್ಕೆ ಮಾಡಿಕೊಳ್ಳುವುದು ವಿಶಿಷ್ಟ ಸಂಗತಿ ಎನಿಸಿದೆ.

Articles You Might Like

Share This Article