ನವದೆಹಲಿ, ಆ.30- ಪ್ರಧಾನಮಂತ್ರಿ ನರೇಂದ್ರ ಮೋದಿ ಸೆಪ್ಟಂಬರ್ 2ರಂದು ಕೇರಳದ ಕೊಚ್ಚಿನ್‍ನಲ್ಲಿ ದೇಶಿ ನಿರ್ಮಿತ ಐಎನ್‍ಎಸ್ ವಿಕ್ರಾಂತ್ ಯುದ್ಧ ವಿಮಾನಗಳನ್ನು ಹೊತ್ತೊಯ್ಯಬಲ್ಲ ಹಡಗನ್ನು ಸೇನೆಗೆ ಸಮರ್ಪಿಸಲಿದ್ದಾರೆ.
ಸೆಪ್ಟಂಬರ್ 1 ಮತ್ತು 2ರಂದು ಪ್ರಧಾನಿ ಅವರು ಕೇರಳ ಹಾಗೂ ಕರ್ನಾಟಕ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಸೆಪ್ಟಂಬರ್ 2ರಂದು ಮಂಗಳೂರಿನಲ್ಲಿ 3800 ಕೋಟಿ ರೂಪಾಯಿಗಳ ಯೋಜನೆಗಳಿಗೆ ಶಂಕುಸ್ಥಾಪನೆ ನೇರವೇರಿಸಿ, ಕೆಲವು ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.
ಸಾರ್ವಜನಿಕ ಉದ್ದಿಮೆಯಾದ ಕೇರಳದ ಕೊಚ್ಚಿನ್ ಸಿಪ್‍ಯಾರ್ಡ್ ಲಿಮಿಟೆಡ್ ನಿರ್ಮಿಸಿರುವ ದೇಶಿ ನಿರ್ಮಿತ ಹಡಗನ್ನು ಸೇವೆಗೆ ಸಮರ್ಪಿಸಲಾಗುತ್ತಿದೆ. ಈ ಮೂಲಕ ತಂತ್ರಗಾರಿಕಾ ವಲಯದಲ್ಲಿ ಸ್ವಾವಲಂಬನೆ ಸಾಧ್ಯವಾಗಲಿದ್ದು, ಸೇನೆಗೆ ವಿಕ್ರಾಂತ್ ಸೇರ್ಪಡೆ ಮೈಲಿಗಲ್ಲಾಗಲಿದೆ.
1971ರ ಯುದ್ಧದಲ್ಲಿ ಪ್ರಮುಖ ಪಾತ್ರವಹಿಸಿದ್ದ ವಿಕ್ರಾಂತ್ ಅವರ ಹೆಸರನ್ನು ಯುದ್ಧ ನೌಕೆಗೆ ನಾಮಕರಣ ಮಾಡಲಾಗಿದೆ. ನೂರಕ್ಕೂ ಹೆಚ್ಚು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ವಿಕ್ರಾಂತ್ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದವು.