ಪ್ರಧಾನಿ ಮೋದಿ ಯೂರೋಪ್ ಪ್ರವಾಸ : 8 ವಿಶ್ವ ನಾಯಕರೊಂದಿಗೆ ಸಮಾಲೋಚನೆ

Spread the love

ನವದೆಹಲಿ,ಮೇ2- ಪ್ರಧಾನಿ ನರೇಂದ್ರಮೋದಿ ಅವರು ಮೂರು ದಿನಗಳ ಯುರೋಪ್ ಪ್ರವಾಸ ಕೈಗೊಂಡಿದ್ದು, ಈ ವರ್ಷದ ಮೊದಲ ವಿದೇಶ ಪ್ರವಾಸದಲ್ಲಿ ಡೆನ್ಮಾರ್ಕ್, ಜರ್ಮನಿ ಮತ್ತು ಫ್ರಾನ್ಸ್‍ಗೆ ಪ್ರಧಾನಿ ಭೇಟಿ ನೀಡುತ್ತಿದ್ದಾರೆ.

ಈ ವೇಳೆ ಪ್ರಧಾನ ಮಂತ್ರಿ ಅವರು ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್, ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಸೇರಿದಂತೆ ವಿಶ್ವದ ಎಂಟು ನಾಯಕರನ್ನು ಭೇಟಿಯಾಗಲಿದ್ದಾರೆ. ಯುರೋಪ್‍ಗಳ ಭೌಗೋಳಿಕ-ರಾಜಕೀಯ ಸಮತೋಲನವನ್ನು ಬದಲಿಸಿದ ಉಕ್ರೇನ್- ರಷ್ಯಾಯುದ್ಧದ ಹಿನ್ನೆಲೆಯಲ್ಲಿ ಪ್ರಧಾನಿಗಳ ಈ ಭೇಟಿ ವಿಶೇಷವೆನಿಸಿದೆ.

ಪ್ರವಾಸದ ಸಮಯದಲ್ಲಿ ಪ್ರಮುಖ ಗಮನವು ಶಕ್ತಿ, ವ್ಯಾಪಾರ ಮತ್ತು ಹಸಿರು ಅಭಿವೃದ್ಧಿಯಲ್ಲಿ ಭಾರತಕ್ಕೆ ಪೂರಕವಾಗರಲಿದೆ ಎಂದು ಹೇಳಲಾಗುತ್ತಿದೆ. ಶಾಂತಿ ಮತ್ತು ಸಮೃದ್ಧಿಗಾಗಿ ಭಾರತದ ಅನ್ವೇಷಣೆಯಲ್ಲಿ ಪ್ರಮುಖ ಸಹಚರರಾಗಿರುವ ನಮ್ಮ ಯುರೋಪಿಯನ್ ಪಾಲುದಾರರೊಂದಿಗೆ ಸಹಕಾರದ ಮನೋಭಾವವನ್ನು ಬಲಪಡಿಸಲು ನಾನು ಉದ್ದೇಶಿಸಿದ್ದೇನೆ ಎಂದು ಮೋದಿ ಹೇಳಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರಮೋದಿ ಅವರು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರೊಂದಿಗೆ ಬುಧವಾರ ಭೋಜನಕೂಟದಲ್ಲಿ ಪಾಲ್ಗೊಳ್ಳುತ್ತಿದ್ದು, ಈ ವೇಳೆ ಉಭಯ ದೇಶಗಳ ರಕ್ಷಣಾ ಸಹಕಾರ, ಸಮುದ್ರ ಪಾಲುದಾರಿಕೆ ಮತ್ತು ಇಂಡೋ-ಪೆಸಿಫಿಕ್‍ನ್ನು ಒಳಗೊಂಡಿರುವ ಭಾರತ-ಫ್ರಾನ್ಸ್ ವ್ಯೂಹಾತ್ಮಕ ಸಂಬಂಧಗಳಲ್ಲಿ ಸಕಾರಾತ್ಮಕ ಚಲನೆಯನ್ನು ದಾಖಲಿಸುವ ನಿರೀಕ್ಷೆಯಿದೆ.

Facebook Comments