ಮುಂಬೈ, ಫೆ.10- ಇಂದು ನಗರಕ್ಕೆ ಆಗಮಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಛತ್ರಪತಿ ಶಿವಾಜಿ ಟರ್ಮಿನಸ್‍ನಲ್ಲಿ ಎರಡು ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ್ದಾರೆ. ಇದರೊಂದಿಗೆ ದಾವೋಡಿ ಬೋಹ್ರಾ ಸಮುದಾಯದ ಕಾಲೇಜಿನ ನೂತನ ಕಟ್ಟಡ, ಎರಡು ರಸ್ತೆ ಕಾರಿಡಾರ್‍ಗಳು ಮತ್ತು ವಾಹನಗಳ ಅಂಡರ್ ಪಾಸನ್ನು ಉದ್ಘಾಟಿಸಿದ್ದಾರೆ.
ಮಧ್ಯಾಹ್ನದ ವೇಳೆ ನಗರಕ್ಕೆ ಆಗಮಿಸಿದ ಪ್ರಧಾನಿ ಮೋದಿಯವರು, ಮೊದಲು ಸಿಎಸ್‍ಎಮ್‍ಟಿ – ಸೋಲಪುರ ರೈಲಿಗೆ ಚಾಲನೆ ನೀಡಿ ಬಳಿಕ ಶಿರಡಿ ಸಾಯಿನಗರವನ್ನು ಸಂಪರ್ಕಿಸುವ ರೈಲಿಗೆ ಚಾಲನೆ ನೀಡಿದರು. ಸಿಎಸ್‍ಎಮ್‍ಟಿ – ಸೋಲಪುರ ರೈಲು 455 ಕಿ.ಮೀ ದೂರವನ್ನು 6:30 ಗಂಟೆಗಳಲ್ಲಿ ತಲುಪಲಿದೆ. ಸಿಎಸ್‍ಎಮ್‍ಟಿ – ಶಿರಾಡಿ ರೈಲು 343 ಕಿ.ಮೀ ದೂರವನ್ನು 5:25 ಗಂಟೆಗಳಲ್ಲಿ ಕ್ರಮಿಸಲಿದೆ.
ಸ್ಯಾಂಕಿ ಮೇಲ್ಸೇತುವೆ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್
ವಂದೇಭಾರತ್ ರೈಲುಗಳ ದರ ಪಟ್ಟಿ ಪ್ರಕಟ: ಪ್ರಧಾನಿ ಮೋದಿ ಅವರು ನಗರದಲ್ಲಿ ಎರಡು ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡುವ ಮೊದಲೇ, ಕೇಂದ್ರ ರೈಲ್ವೇಯು ಪ್ರಯಾಣ ದರವನ್ನು ಪ್ರಕಟ ಮಾಡಿದೆ.
ಸಿಎಸ್‍ಎಮ್‍ಟಿ – ಸೋಲಪುರ ರೈಲಿನಲ್ಲಿ ಆಹಾರ ವ್ಯವಸ್ಥೆ ಹೊಂದಿರದ ಚೇರ್ ಕಾರ್‍ಗೆ ಏಕಮುಖ ಪ್ರಯಾಣ ದರ 1 ಸಾವಿರ ರೂ. ಇರಲಿದ್ದು, ಎಕ್ಸಿಕ್ಯುಟಿವ್ ಚೇರ್‍ಕಾರ್ ದರ 2,015 ಇರಲಿದೆ. ಆಹಾರ ಸೌಲಭ್ಯವಿರುವ ಸೆಕೆಂಡ್ ಕ್ಲಾಸ್ ಪ್ರಯಾಣ ದರ ಚೇರ್ ಕಾರ್‍ನಲ್ಲಿ 1300 ರೂ., ಎಕ್ಸಿಕ್ಯುಟಿವ್ ಚೇರ್‍ಕಾರ್‍ನಲ್ಲಿ 2,365 ರೂ. ಇರಲಿದೆ.
ಸಿಎಸ್‍ಎಮ್‍ಟಿ – ಶಿರಾಡಿ ರೈಲಿನಲ್ಲಿ ಆಹಾರ ವ್ಯವಸ್ಥೆ ಹೊಂದಿರದ ಚೇರ್ ಕಾರ್‍ಗೆ ಏಕಮುಖ ಪ್ರಯಾಣ ದರ 840 ರೂ. ಇರಲಿದ್ದು, ಎಕ್ಸಿಕ್ಯುಟಿವ್ ಚೇರ್‍ಕಾರ್ ದರ 1670 ರೂ. ಇರಲಿದೆ. ಆಹಾರ ಸೌಲಭ್ಯವಿರುವ ಸೆಕೆಂಡ್ ಕ್ಲಾಸ್ ಪ್ರಯಾಣ ದರ ಚೇರ್ ಕಾರ್‍ನಲ್ಲಿ 975 ರೂ., ಎಕ್ಸಿಕ್ಯುಟಿವ್ ಚೇರ್‍ಕಾರ್‍ನಲ್ಲಿ 1840 ರೂ. ಇರಲಿದೆ.
ನಾಳೆ ಮಧ್ಯರಾತ್ರಿ 12 ಗಂಟೆವರೆಗೆ ಮಾತ್ರ ಟ್ರಾಫಿಕ್ ದಂಡ ಪಾವತಿಗೆ ಅವಕಾಶ
ಸಂಜೆ 4.05 ಗಂಟೆಗೆ ಹೊರಡುವ ಸಿಎಸ್‍ಎಮ್‍ಟಿ – ಸೋಲಪುರ ರೈಲು ರಾತ್ರಿ 10.40 ಗಂಟೆಗೆ ಸೋಲಪುರ ತಲುಪಲಿದ್ದು, ಸೋಲಪುರದಿಂದ ಬೆಳಗ್ಗೆ 6.05 ಹೊರಟು ಮಧ್ಯಾಹ್ನ 12.35ರ ವೇಳೆಗೆ ಸಿಎಸ್‍ಎಮ್‍ಟಿ ತಲುಪಲಿದೆ. ಈ ಸೇವೆ ಬುಧವಾರ ಸಿಎಸ್‍ಎಮ್‍ಟಿಯಿಂದ ಮತ್ತು ಗುರುವಾರ ಸೋಲಪುರದಿಂದ ಲಭ್ಯವಿರುವುದಿಲ್ಲ.
ವಾರದ 6 ದಿನಗಳಲ್ಲಿ ಲಭ್ಯವಿರುವ ಸಿಎಸ್‍ಎಮ್‍ಟಿ – ಶಿರಾಡಿ ರೈಲು ಸೇವೆ, ಮಂಗಳವಾರ ಲಭ್ಯವಿರುವುದಿಲ್ಲ ಎಂದು ರೈಲ್ವೇ ಅಕಾರಿಗಳು ತಿಳಿಸಿದ್ದಾರೆ.
PM Modi, flag off , Vande Bharat, Express, trains, Mumbai,