296 ಕಿ.ಮಿ. ಎಕ್ಸ್ ಪ್ರೆಸ್ ಹೈವೆಗೆ ಪ್ರಧಾನಿ ಮೋದಿ ಚಾಲನೆ

Social Share

ಲಖ್ನೋ,ಜು.16- 14,850 ಕೋಟಿ ರೂ. ವೆಚ್ಚದ 296 ಕಿಮೀ ಉದ್ದದ ಅತ್ಯಾಧುನಿಕ ಬುಂದೇಲ್‍ಖಂಡ್ ಎಕ್ಸ್‍ಪ್ರೆಸ್‍ವೇಯನ್ನು ಪ್ರಧಾನಿ ನರೇಂದ್ರ ಮೋದಿಯವರು ಇಂದು ಉದ್ಘಾಟಿಸುತ್ತಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಬುಂದೇಲ್‍ಖಂಡ್ ಎಕ್ಸ್‍ಪ್ರೆಸ್‍ವೇ ಇಲ್ಲಿನ ಜನರಿಗಾಗಿ ಉದ್ಯೋಗದ ಆಯಾಮಗಳನ್ನು ತೆರೆಯುತ್ತದೆ ಮತ್ತು ಈ
ಪ್ರದೇಶದ ಕೈಗಾರಿಕಾ ಅಭಿವೃದ್ಧಿಯಾಗಲಿದೆ,ಇದು ಸ್ಥಳೀಯ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ ಎಂದಿದ್ದಾರೆ.

ಉದ್ಯೋಗದ ಜೊತೆಗೆ ಈ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಮತ್ತು ವ್ಯಾಪಾರದ ಅಭಿವೃದ್ಧಿಯ ಸಾಧ್ಯತೆಯನ್ನು ಸರ್ಕಾರ ಎದುರು ನೋಡುತ್ತಿದೆ ಎಂದು ಹೇಳಿದ್ದಾರೆ. 2020ರ ಫೆಬ್ರವರಿ ತಿಂಗಳಲ್ಲಿ ಈ ಅತ್ಯಾಧುನಿಕ ಬುಂದೇಲ್‍ಖಂಡ್ ಎಕ್ಸ್‍ಪ್ರೆಸ್‍ವೇಗೆ ಪ್ರಧಾನಿಗಳು ಅಡಿಪಾಯ ಹಾಕಿದ್ದರು. ಇದರಲ್ಲಿ ತ್ವರಿತ ಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವ ಮೂಲಕ ಇದೀಗ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗುತ್ತಿದೆ.

ಬುಂದೇಲ್‍ಖಂಡ್ ಎಕ್ಸ್‍ಪ್ರೆಸ್‍ವೇ ನಿರ್ಮಾಣಕ್ಕೆ 14,850 ಕೋಟಿ ರೂ. ಇದೀಗ 296 ಕಿಮೀ ಉದ್ದದ ಈ ಎಕ್ಸ್‍ಪ್ರೆಸ್‍ವೇ ಇಂದು ಲೋಕಾರ್ಪಣೆಗೊಳ್ಳುತ್ತಿದೆ.

ಚಿತ್ರಕೂಟ-ದೆಹಲಿಗೆ ಕಡಿಮೆ ದೂರ: ಬುಂದೇಲ್‍ಖಂಡ್ ಎಕ್ಸ್‍ಪ್ರೆಸ್‍ವೇ ನಿರ್ಮಾಣದೊಂದಿಗೆ ಈಗ ಚಿತ್ರಕೂಟದಿಂದ ದೆಹಲಿಯವರೆಗಿನ ದೂರವು ಕೇವಲ 6 ಗಂಟೆಗಳಲ್ಲಿ ಪೂರ್ಣಗೊಳ್ಳಲಿದೆ. ಅದೇ ಸಮಯದಲ್ಲಿ, ಬುಂದೇಲ್‍ಖಂಡ್ ಎಕ್ಸ್‍ಪ್ರೆಸ್‍ವೇ ನಿರ್ಮಾಣದಿಂದ, ಕೈಗಾರಿಕೆಗಳ ಸ್ಥಾಪನೆಯೊಂದಿಗೆ ತಮ್ಮ ಪ್ರದೇಶದಲ್ಲಿ ಮಂಡಿಗಳ ಸಂಖ್ಯೆಯು ಹೆಚ್ಚಾಗುತ್ತದೆ, ಇದರಿಂದ ಬೆಳೆಯನ್ನು ದೆಹಲಿ ಅಥವಾ ದೊಡ್ಡ ಮಂಡಿಗಳಿಗೆ ಕಡಿಮೆ ಸಮಯದಲ್ಲಿ ಸಾಗಿಸಬಹುದಾಗಿದೆ.

296 ಕಿಮೀ ಉದ್ದದ ಬುಂದೇಲ್‍ಖಂಡ್ ಎಕ್ಸ್‍ಪ್ರೆಸ್‍ವೇ: ಒಟ್ಟು 19 ಮೇಲ್ಸೇತುವೆಗಳು, 224 ಕೆಳಸೇತುವೆಗಳು, 14 ಪ್ರಮುಖ ಸೇತುವೆಗಳು, 286 ಸಣ್ಣ ಸೇತುವೆಗಳು ಮತ್ತು 4 ರೈಲ್ವೆ ಮೇಲ್ಸೇತುವೆಗಳನ್ನು ಬುಂದೇಲ್‍ಖಂಡ್ ಎಕ್ಸ್‍ಪ್ರೆಸ್‍ವೇ ನಿರ್ಮಾಣದ ಸಮಯದಲ್ಲಿ ಆರಾಮದಾಯಕ ಮತ್ತು ಸುಲಭವಾದ ಪ್ರಯಾಣಕ್ಕಾಗಿ ನಿರ್ಮಿಸಲಾಗಿದೆ. ಇದರಿಂದ 296 ಕಿ.ಮೀ ಉದ್ದದ ಎಕ್ಸ್ ಪ್ರೆಸ್ ವೇ ಅತ್ಯಂತ ಸುಲಭವಾಗಿ ದಾಟಬಹುದು.

ಎಕ್ಸ್‍ಪ್ರೆಸ್‍ವೇ ಉತ್ತರ ಪ್ರದೇಶದ ಏಳು ಜಿಲ್ಲೆಗಳ ಮೂಲಕ ಹಾದು ಹೋಗಲಿದೆ. ಪ್ರಸ್ತುತ, ಈ ಬುಂದೇಲ್‍ಖಂಡ್ ಎಕ್ಸ್‍ಪ್ರೆಸ್‍ವೇ ಚಿತ್ರಕೂಟ, ಬಂದಾ, ಮಹೋಬಾ, ಹಮೀರ್‍ಪುರ, ಜಲೌನ್, ಔರೈಯಾ ಮತ್ತು ಇಟಾವಾ ಮುಂತಾದ ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ.

Articles You Might Like

Share This Article