ಕಲ್ಪತರು ನಾಡನ್ನು ವಿಶ್ವ ಮಟ್ಟಕ್ಕೆ ಕೊಂಡೋಯ್ದ ಹೆಲಿಕಾಪ್ಟರ್ ತಯಾರಿಕಾ ಘಟಕ

Social Share

ತುಮಕೂರು,ಫೆ.6- ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆ ಗೊಳಿಸಿದ ಭಾರತದ ಅತಿದೊಡ್ಡ ಎಚ್‍ಎಎಲ್ ಹೆಲಿಕಾಪ್ಟರ್ ತಯಾರಿಕಾ ಘಟಕ ಹೊಸ ಮೈಲುಗಲ್ಲು ಸ್ಥಾಪಿಸಿದ್ದು ಕಲ್ಪತರು ನಾಡನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದಿದೆ.

ಪ್ರಧಾನಿ ನರೇಂದ್ರ ಮೋದಿ ಮೊದಲನೇ ಅವಧಿಯ ಅಧಿಕಾರದಲ್ಲಿ 2016ರ ಜನವರಿ 3ರಂದು ಈ ಲಘು ಹೆಲಿಕಾಪ್ಟರ್ ತಯಾರಿಕಾ ಘಟಕ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಿ 2018 ರಿಂದಲೇ, ಲೋಹದ ಹಕ್ಕಿಗಳ ಹಾರಾಟದ ಭರವಸೆ ನೀಡಿದರು. ಆದರೆ 7 ವರ್ಷದ ಬಳಿಕ ಕಾರ್ಯಾರಂಭವಾಗುತ್ತಿದೆ. ಪ್ರಧಾನಿ ಮೋದಿ ಅವರೇ ಶಂಕುಸ್ಥಾಪನೆ ಮಾಡಿ, ಲೋಕಾರ್ಪಣೆ ಮಾಡಿರುವುದು ಹೆಗ್ಗಳಿಕೆ ಪಡೆದುಕೊಂಡಿದೆ.

614 ಎಕರೆ ಜಾಗದಲ್ಲಿ: ಬಿದರೆಹಳ್ಳಿ ಕಾವಲ್ ಬಳಿ 614 ಎಕರೆ ಜಾಗದಲ್ಲಿ ಘಟಕ ನಿರ್ಮಾಣವಾಗಿದ್ದು, 6400 ಕೋಟಿ ವೆಚ್ಚದ ಯೋಜನೆ ಇದಾಗಿದೆ. ಇಂಡೋ-ರಷ್ಯನ್ ಯೋಜನೆಯಡಿ ಕೆಎ- 226 ಟಿ ಅವಳಿ ಇಂಜಿನ್ ಹೆಲಿಕಾಪ್ಟರ್ ಮತ್ತು 3 ಟನ್ ಹೊಸ ಪೀಳಿಗೆಯ ಲೈಟ್ ವಿಟಲಿಟಿ ಹೆಲಿಕಾಪ್ಟರ್ (ಎಲ್ಲು ಎಚ್) ತಯಾರು ಮಾಡಲಿದ್ದು ಒಂದು ವರ್ಷದಲ್ಲಿ 30 ಹೆಲಿಕಾಪ್ಟರ್ ತಯಾರಾಗಲಿದೆ. 2022 ಸೆಪ್ಟೆಂಬರ್ 30 ರಂದು ಪ್ರಾಯೋಗಿಕ ಪರೀಕ್ಷೆ ನಡೆಸಿ ಯಶಸ್ವಿಯಾಗಿದೆ.

ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೈವೆ ಮಾರ್ಚ್‍ಗೆ ಉದ್ಘಾಟನೆ

ಉದ್ಯೋಗದ ಭರವಸೆ: ಎಚ್‍ಎಎಲ್ ಘಟಕವು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ವಾದಾಗ 8,300 ಮಂದಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಇದರಲ್ಲಿ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ತಾಂತ್ರಿಕ ನೈಪುಣ್ಯ ಹಾಗೂ ಕೌಶಲ ಹೊಂದಿದ ಸ್ಥಳೀಯರ ಕೊರತೆಯಿಂದ ಹೊರಗಿನವರಿಗೆ ಆದ್ಯತೆ ನೀಡುವುದು ಅನಿವಾರ್ಯ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೋಂದಣಿ ಮಾಡಿಕೊಂಡವರಿಗೆ ಮೊದಲ ಆದ್ಯತೆ ನೀಡುವುದಾಗಿ ಎಚ್‍ಎಎಲ್ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಲೈಟ್ ಯುಟಿಲಿಟಿ ಹೆಲಿಕಾಪ್ಟರ್ ನಿರ್ಮಾಣ: ಜಿಲ್ಲೆಗೆ ಇದೀಗ ಎಚ್‍ಎಎಲ್ ಘಟಕವೂ ಸೇರ್ಪಡೆಯಾಗುತ್ತಿದ್ದು, ಕೈಗಾರಿಕಾ ಹಬ್ ಆಗಿ ಬೆಳೆಯುತ್ತಿರುವ ತುಮಕೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಹೆಚ್‍ಎಎಲ್ ಘಟಕದಲ್ಲಿ ಸದ್ಯ 3 ಸಾವಿರ ಕೆಜಿ ತೂಕದ ಸ್ವದೇಶಿ ಲೈಟ್ ಯುಟಿಲಿಟಿ ಹೆಲಿಕಾಪ್ಟರ್ ನಿರ್ಮಾಣ ಮಾಡಲು ಎಚ್‍ಎಎಲ್ ಉದ್ದೇಶಿಸಿದ್ದು, ಹೆಚ್ಚಾಗಿ ಸೈನ್ಯದಲ್ಲಿ ಬಳಸಿಕೊಳ್ಳಲಾಗುತ್ತದೆ. ಇದರಲ್ಲಿ 5 -6 ಮಂದಿ ಪ್ರಯಾಣಿಸಬಹುದಾಗಿದೆ.

ಹೆಲಿಕಾಪ್ಟರ್ ಉತ್ಪಾದನ ಘಟಕ, ರನ್ ವೇ, ಆಸ್ಪತ್ರೆ, ಆಡಳಿತ ವಿಭಾಗ ಸೇರಿ ಬಹುತೇಕ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿದ್ದು, ಕೇಂದ್ರ ಸರಕಾರ ಆದೇಶ ನೀಡುತ್ತಿದ್ದಂತೆ ಉತ್ಪಾದನ ಕೆಲಸ ಪ್ರಾರಂಭವಾಗಲಿದೆ.
3-15 ಟನ್ಗಳ ವ್ಯಾಪ್ತಿಯಲ್ಲಿ 1,000 ಕ್ಕೂ ಹೆಚ್ಚು ಹೆಲಿಕಾಪ್ಟರ್ಗಳನ್ನು ತಯಾರಿಸಲು ಹೆಚ್ ಎ ಎಲ್ ಯೋಜಿಸಿದೆ, 20 ವರ್ಷಗಳ ಅವಧಿಯಲ್ಲಿ ಒಟ್ಟು ನಾಲ್ಕು ಲಕ್ಷ ಕೋಟಿ ರೂ. ವ್ಯವಹಾರವನ್ನು ಯೋಜಿಸಲಾಗಿದೆ.

ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗವನ್ನು ಸೃಷ್ಟಿಸುವುದರ ಜೊತೆಗೆ, ತುಮಕೂರು ಘಟಕವು ಅದರ ಸಿಎಸ್‍ಆರ್ ಚಟುವಟಿಕೆಗಳ ಮೂಲಕ ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿಯನ್ನು ದೊಡ್ಡ ಪ್ರಮಾಣದ ಸಮುದಾಯ ಕೇಂದ್ರಿತ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಈ ಪ್ರದೇಶದ ಜನಜೀವನದಲ್ಲಿ ಸುಧಾರಣೆಗೆ ಕಾರಣವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರಿಂದ ಶಂಕುಸ್ಥಾಪನೆಯಾದ ಹೆಲಿಕಾಪ್ಟರ್ ಘಟಕ ಈಗ ಅವರಿಂದ ಲೋಕಾರ್ಪಣೆಯಾಗುತ್ತಿರುವುದು ಐತಿಹಾಸಿಕ ಕ್ಷಣವಾಗಿದೆ. ಈ ಘಟಕ ಸ್ಥಾಪನೆಯಿಂದಾಗಿ ಸಾವಿರಾರು ಜನರಿಗೆ ಉದ್ಯೋಗ ದೊರೆಯಲಿದೆ ಎಂದು ಸಂಸದ ಜಿ.ಎಸ್. ಬಸವರಾಜು ತಿಳಿಸಿದ್ದಾರೆ.

ಪ್ರಜಾಧ್ವನಿ ಯಾತ್ರೆ ಎದುರಾಳಿಗಳಲ್ಲಿ ಭಯ ಸೃಷ್ಟಿಸಿದೆ : ಡಿಕೆಶಿ

ಏಳು ವರ್ಷಗಳ ಬಳಿಕ ಉದ್ಘಾಟನೆಯಾಗುತ್ತಿರುವ. ಹೆಚ್ ಎಎಲ್ ಉತ್ಪಾದನಾ ಘಟಕದಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಕೊಡಬೇಕು. ನಮ್ಮಲ್ಲಿ ಐಟಿಐ, ಇಂಜಿನಿಯರ್ ಸೇರಿ ಅನೇಕ ವಿದ್ಯಾಭ್ಯಾಸ ಮಾಡಿದವರಿದ್ದು ಅವರನ್ನು ಆಯ್ಕೆ ಮಾಡಿ ತರಬೇತಿ ನೀಡಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

PM Modi, inaugurate, HAL, chopper, manufacturing, unit, Tumakuru,

Articles You Might Like

Share This Article