ತುಮಕೂರು/ಗುಬ್ಬಿ,ಫೆ.6- ಐತಿಹಾಸಿಕ ಭಾರತದ ಅತಿದೊಡ್ಡ ಹೆಲಿಕಾಪ್ಟರ್ ತಯಾರಿಕಾ ಘಟಕ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ಅಡಿಕೆ ಹಾರ ಹಾಗೂ ಅಡಿಕೆ ಪೇಟ ತೊಡಿಸಿ ಅದ್ಧೂರಿಯಾಗಿ ಬರ ಮಾಡಿಕೊಳ್ಳಲಾಯಿತು.
ಗುಬ್ಬಿ ತಾಲ್ಲೂಕಿನ ಚಿಕ್ಕೋನಹಳ್ಳಿ ಗ್ರಾಮದ ನಟರಾಜ್ ಎಂಬುವರು 1.5 ಕೆಜಿ ತೂಕದ ಉಂಡೆ ಅಡಿಕೆಯಿಂದ ಹಾರ ಹಾಗೂ 300 ಗ್ರಾಂ ತೂಕದ ಪೇಟವನ್ನು ತಯಾರಿಸಿದ್ದಾರೆ.
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಬಿದರೆಹಳ್ಳಿ ಕಾವಲ್‍ನಲ್ಲಿ ಹೆಚ್‍ಎಎಲ್ ಹೆಲಿಕಾಪ್ಟರ್ ತಯಾರಿಕಾ ಘಟಕದ ಉದ್ಘಾಟನೆಗೆ ಇಂದು ಆಗಮಿಸಿದ ಅವರಿಗೆ ಅಡಿಕೆಯಿಂದ ತಯಾರಿಸಿದ ಪೇಟ ಹಾಗೂ ಹಾರಗಳನ್ನು ಹಾಕಿ ಸ್ವಾಗತ ಕೋರಲಾಯಿತು.
ಪ್ರಜಾಧ್ವನಿ ಯಾತ್ರೆ ಎದುರಾಳಿಗಳಲ್ಲಿ ಭಯ ಸೃಷ್ಟಿಸಿದೆ : ಡಿಕೆಶಿ
ಬಿಜೆಪಿಯಿಂದ ಬೈಕ್ ರ್ಯಾಲಿ: ಪ್ರಧಾನಿ ಆಗಮನದ ಹಿನ್ನಲೆಯಲ್ಲಿ ಬಿಜೆಪಿಯಿಂದಲೂ ಭಾರೀ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಪಕ್ಷದ ಕಾರ್ಯಕರ್ತರು ತುಮಕೂರು ಸಂಘಟನಾತ್ಮಕ ಜಿಲ್ಲೆಯಲ್ಲಿ ಶೋಭಾಯಾತ್ರೆ ಮತ್ತು ಬೈಕ್ ರ್ಯಾಲಿ ಹಮ್ಮಿಕೊಂಡಿದ್ದರು.
ತುಮಕೂರು ನಗರ, ಗ್ರಾಮಾಂತರ, ಗುಬ್ಬಿ, ತುರುವೇಕೆರೆ, ಚಿಕ್ಕನಾಯಕನಹಳ್ಳಿ, ಕುಣಿಗಲ್, ತಿಪಟೂರಿನ ಪದಾಧಿಕಾರಿಗಳು, ಪ್ರಮುಖರು, ಕಾರ್ಯಕರ್ತರು, ಸಾರ್ವಜನಿಕರು ರ್ಯಾಲಿಯ ಮೂಲಕ ಕಾರ್ಯಕ್ರಮದ ಸ್ಥಳ ತಲುಪಲಿದರು.
ಸಂಚಾರ ಬದಲಾವಣೆ: ನೂತನ ಹೆಚ್‍ಎಎಲ್ ತಯಾರಿಕಾ ಘಟಕ ಉದ್ಘಾಟನೆಗೆ ಪ್ರಧಾನಿ ಮೋದಿ ಆಗಮನ ಹಿನ್ನೆಲೆಯಲ್ಲಿ ಗುಬ್ಬಿಯಿಂದ ಕೆಬಿಕ್ರಾಸ್ ಹಾಗೂ ಕೆಬಿ ಕ್ರಾಸ್‍ನಿಂದ ಗುಬ್ಬಿ ಕಡೆಗೆ ಸಂಚರಿಸುವ ವಾಹನ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಇಂದು ಬೆಳಗ್ಗೆ 6 ರಿಂದ ಸಂಜೆ 7 ಗಂಟೆವರೆಗೆ ವಾಹನ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ.
ಗುಬ್ಬಿ, ನಿಟ್ಟೂರು ಕಡೆಯಿಂದ ಸಂಚರಿಸುವ ವಾಹನಗಳು, ನಿಟ್ಟೂರು, ಟಿಬಿ ಕ್ರಾಸ್, ತುರುವೇಕೆರೆ ಮಾರ್ಗವಾಗಿ ಕೆಬಿ ಕ್ರಾಸ್ ಕಡೆಗೆ ಸಂಚರಿಸಬೇಕು ಮತ್ತು ಕೆಬಿ ಕ್ರಾಸ್ ಕಡೆಯಿಂದ ಬರುವ ವಾಹನಗಳು ಕೆಬಿ ಕ್ರಾಸ್, ತುರುವೇಕೆರೆ, ಟಿಬಿ ಕ್ರಾಸ್ ಮಾರ್ಗವಾಗಿ ನಿಟ್ಟೂರಿಗೆ ಸಂಚರಿಸಬೇಕು. ಮಾರ್ಗ ಬದಲಾವಣೆ ಮಾಡಿ ತುಮಕೂರು ಜಿಲ್ಲಾಧಿಕಾರಿ ವೈಎಸ್ ಪಾಟೀಲ್ ಆದೇಶಿಸಿದ್ದಾರೆ.
ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೈವೆ ಮಾರ್ಚ್‍ಗೆ ಉದ್ಘಾಟನೆ
ತುಮಕೂರಿಗೆ ಮೋದಿ ಆಗಮನ ಹಿನ್ನೆಲೆ ಗುಬ್ಬಿ ಬಳಿ ನಿರ್ಮಾಣವಾಗಿರುವ ಎಚ್‍ಎಎಲ್ ಆವರಣದಲ್ಲಿ . ಎಡಿಜಿಪಿ ನೇತೃತ್ವದಲ್ಲಿ ಪೊಲೀಸ್ ಬಿಗಿಭದ್ರತೆ ಏರ್ಪಡಿಸಲಾಗಿತ್ತು.
ಎಡಿಜಿಪಿ-1, ಐಜಿ- 1, ಎಸ್ಪಿ -7, ಡಿವೈಎಸ್ಪಿ- 20, ಪೆÇಲೀಸ್ ಇನ್ಸ್ಪೆಕ್ಟರ್-55, ಪೆÇಲೀಸ್ ಸಿಬ್ಬಂದಿ-1200, ಸಬ್ ಇನ್ಸ್ಪೆಕ್ಟರ್-150, ಹೋಮ್ ಗಾರ್ಡ್ -400, ಜಿಲ್ಲಾ ಸಶಸ್ತ್ರ ಮೀಸಲು ಪಡೆ ತುಕಡಿ- 14, ಕೆಎಸ್‍ಆರ್‍ಪಿ ತುಕಡಿ-12 ಸೇರಿದಂತೆ ಒಟ್ಟು 3 ಸಾವಿರ ಪೆÇಲೀಸರು ಬಿಗಿಭದ್ರತೆಗೆ ನಿಯೋಜಿಜಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೆÇಲೀಸ್ ಕಟ್ಟೆಚ್ಚರ ವಹಿಸಲಾಗಿತ್ತು.
PM Modi, inaugurate, HAL, chopper, manufacturing, unit, Tumakuru,