ಪುದುಚೇರಿ, ಜ.12- ಇಂದಿನ ಯುವಜನರಲ್ಲಿ ಜವಾಬ್ದಾರಿಯ ಪ್ರಜ್ಞಾಯನ್ನು ಕಾಣುತ್ತಿದ್ದು , ದೇಶದ ಉಜ್ವಲ ಭವಿಷ್ಯದ ಬಗ್ಗೆ ನನ್ನ ವಿಶ್ವಾಸ ಮತ್ತಷ್ಟು ಬಲಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇಲ್ಲಿ ರಾಷ್ಟ್ರೀಯ ಯುವಜನೋತ್ಸವದ 25 ನೇ ಆವೃತ್ತಿಯನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ಮಹಿಳೆಯರ ಕಾನೂನುಬದ್ಧ ವಿವಾಹ ವಯಸ್ಸನ್ನು 21 ವರ್ಷಕ್ಕೆ ಹೆಚ್ಚಿಸುವ ತಮ್ಮ ಸರ್ಕಾರದ ಇತ್ತೀಚಿನ ನಿರ್ಧಾರವು ನಮ್ಮ ಹೆಣ್ಣುಮಕ್ಕಳ ಅಭ್ಯುದಯಕ್ಕಾಗಿ ಮತ್ತು ಅವರು ವೃತ್ತಿಜೀವನವನ್ನು ಹೊಂದಲು ಸಹಕಾರಿಯಾಗಿದೆ ಎಂದರು.
2ಕೋಟಿಗೂ ಹೆಚ್ಚು 15-18 ವರ್ಷ ವಯಸ್ಸಿನ ತರುಣರು ಉತ್ಸಾಹದಿಂದ ಲಸಿಕೆ ಪಡೆಯುತ್ತಿದ್ದಾರೆ ಇದು ದೇಶದ ಯುವಕರ ಜವಾಬ್ದಾರಿಂiಯುತ ಪ್ರಜ್ಞಾ ಎಂದು ಶ್ಲಾಘಿಸಿದರು ನಮ್ಮ ಕೋವಿಡ್ ಲಸಿಕೆ ಕಾರ್ಯಕ್ರಮದ ಯಶಸ್ಸಿನಲ್ಲಿ ಯುವಕರ ಪಾತ್ರವು ಹೆಚ್ಚಾಗಿದೆ ಎಂದರು.
