ಕರ್ನಾಟಕದ ಅಭಿವೃದ್ಧಿಯಗೆ ಡಬಲ್ ಇಂಜಿನ್ ಸರ್ಕಾರ ಅನಿವಾರ್ಯ: PM ಮೋದಿ

Social Share

ಶಿವಮೊಗ್ಗ,ಫೆ.27- ಡಬಲ್ ಇಂಜಿನ್ ಸರ್ಕಾರದಿಂದ ಕರ್ನಾಟಕ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದು, ವಿಕಾಸದ ಅಭಿಯಾನವು ಇನ್ನಷ್ಟು ಮುಂದೆ ಸಾಗಬೇಕಾದರೆ ನಾವು ಜೊತೆಗೆ ಸಾಗಬೇಕಾಗಿದೆ ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಬೇಕೆಂದು ರಾಜ್ಯದ ಜನತೆಗೆ ಕರೆ ಕೊಟ್ಟರು.

ಕೇಂದ್ರ ಮತ್ತು ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಅಧಿಕಾರದಲ್ಲಿದ್ದರೆ ಆಗುವ ಅನುಕೂಲಗಳ ಬಗ್ಗೆ ತಮ್ಮ ಭಾಷಣದಲ್ಲಿ ಉಲ್ಲೇಖ ಮಾಡಿದ ಅವರು, ಕರ್ನಾಟಕದ ಅಭಿವೃದ್ಧಿಯ ಪಥ ಸಾಗಬೇಕಾದರೆ ಬಿಜೆಪಿ ಅನಿವಾರ್ಯ ಎಂಬುದನ್ನು ಸೂಚ್ಯವಾಗಿ ಹೇಳಿದರು.

ಕನ್ನಡದಲ್ಲೇ ಭಾಷಣ ಆರಂಭಿಸಿದ ಅವರು ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ, ಜೈ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ ಎಂದು ರಸ ಋಷಿ ರಾಷ್ಟ್ರಕವಿ ಕುವೆಂಪು ಅವರನ್ನು ಉಲ್ಲೇಖಿಸಿ ಮಾತನಾಡಿದ್ದು ವಿಶೇಷವಾಗಿತ್ತು.

ಸಿಸೋಡಿ ಬಂಧನ ವಿರೋಧಿಸಿ ದೇಶಾದ್ಯಂತ ಆಪ್ ಪ್ರತಿಭಟನೆ

ಇಲ್ಲಿನ ಸೋಗಾನೆ ಸಮೀಪ ನೂತನವಾಗಿ ನಿರ್ಮಿಸಿದ್ದ ಬಹುನಿರೀಕ್ಷಿತ ವಿಮಾನ ನಿಲ್ದಾಣ ಲೋಕಾರ್ಪಣೆ ಹಾಗೂ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಮೋದಿ ತಮ್ಮ 20 ನಿಮಿಷದ ಭಾಷಣದಲ್ಲಿ , ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡುವುದನ್ನು ಮರೆಯಲಿಲ್ಲ.

2014ರ ಹಿಂದೆ ವಿಮಾನಯಾನ ಕಾಂಗ್ರೆಸ್ ಪಕ್ಷಕ್ಕೆ ಬಿಸ್ನೆಸ್ ನಡೆಸಲು ಸೀಮಿತವಾಗಿತ್ತು. ನಮ್ಮ ಸರ್ಕಾರ ಅಕಾರಕ್ಕೆ ಬಂದ ಮೇಲೆ ಸಣ್ಣಪುಟ್ಟ ನಗರಗಳಲ್ಲೂ ವಿಮಾನ ನಿಲ್ದಾಣಗಳನ್ನು ನಿರ್ಮಿಸುತ್ತಿದ್ದೇವೆ. ದೇಶದಲ್ಲಿ ಕಳೆದ 9 ವರ್ಷಗಳ ಅವಯಲ್ಲಿ 74 ವಿಮಾನ ನಿಲ್ದಾಣಗಳನ್ನು ನಿರ್ಮಿಸಿದ್ದೇವೆ. ಹವಾಪಿ ಚಪ್ಪಲಿ ಹಾಕುವವನು ಕೂಡ ವಿಮಾನದಲ್ಲಿ ಪ್ರಯಾಣಿಸಬೇಕೆಂಬುದು ನಮ್ಮ ಉದ್ದೇಶವಾಗಿತ್ತು. ಇದಕ್ಕಾಗಿ ಕಡಿಮೆ ದರದಲ್ಲಿ ಟಿಕೆಟ್ ನೀಡುತ್ತಿದ್ದೇವೆ ಎಂದು ಹೇಳಿದರು.

ವಿಮಾನಯಾನ ಕ್ಷೇತ್ರದಲ್ಲಿ ಭಾರತ ಬಹಳಷ್ಟು ಅಭಿವೃದ್ಧಿ ಹೊಂದಿದೆ. ಹೈವೇ, ರೈಲ್ವೆಯಲ್ಲಿ ನಾವು ಯಾವ ದೇಶಗಳಿಗಿಂತಲೂ ಕಡಿಮೆ ಇಲ್ಲ. ಹಿಂದಿನ ಸರ್ಕಾರದ ಅವಯಲ್ಲಿ ದೊಡ್ಡ ನಗರಗಳಿಗೆ ವಿಮಾನ ನಿಲ್ದಾಣ ಇರುತ್ತಿತ್ತು. 2014ರ ಹಿಂದೆ ಏರ್ ಇಂಡಿಯಾ ನಕಾರಾತ್ಮಕ ಸುದ್ದಿಗಳಿಗೆ ಮುನ್ನಲೆಗೆ ಬರುತ್ತಿತ್ತು. ಈಗ ಇದು ದುಬಾರಿ ವಿಮಾನವನ್ನು ಖರೀದಿಸುವ ಮೂಲಕ ಶಕ್ತವಾಗಿದೆ ಎಂದು ಪ್ರಶಂಸಿದರು.

ಬಿಜೆಪಿ ಸರ್ಕಾರ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರಿನ ಸೌಲಭ್ಯ ನೀಡಿದೆ . ಬಿಜೆಪಿ ಸರ್ಕಾರ ಬಡವರ ಪರ ಸರ್ಕಾರವಾಗಿದೆ. ಮಹಿಳೆ, ಮಕ್ಕಳ ಕಲ್ಯಾಣ ಮಾಡುವುದೇ ಬಿಜೆಪಿ ಸರ್ಕಾರದ ಮುಖ್ಯ ಉದ್ದೇಶ ಎಂದರು.
ಅಡಿಕೆ ಮನೆಯಲ್ಲಿ ಗ್ಯಾಸ್ ಇಲ್ಲದಿರುವುದು, ನೀರಿನ ಸಮಸ್ಯೆ ನಮ್ಮ ಅಕ್ಕ-ತಂಗಿಯರಿಗೆ ಬಹಳ ತೊಂದರೆಯಾಗುತ್ತಿತ್ತು.

ನಾವೀಗ ಈ ಸಮಸ್ಯೆಯನ್ನು ದೂರ ಮಾಡುತ್ತಿದ್ದೇವೆ. ಬಿಜೆಪಿ ಸರ್ಕಾರ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರಿನ ಸೌಲಭ್ಯ ನೀಡಿದೆ. ಸ್ವತಂತ್ರ್ಯ ನಂತರದ ಭಾರತದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಗಳಿಗೆ ಬಂದಿದೆ ಎಂದು ಶ್ಲಾಘಿಸಿದರು.

ಇಡೀ ಜಗತ್ತಿನಲ್ಲಿ ಭಾರತ ಸದ್ದು ಮಾಡುತ್ತಿದೆ. ಎಲ್ಲರೂ ಭಾರತಕ್ಕೆ ಬರಲು ಉತ್ಸಾಹಕರಾಗಿದ್ದಾರೆ. ಕರ್ನಾಟಕದ ಈ ವಿಕಾಸ ಇನ್ನಷ್ಟು ವೇಗ ಪಡೆಯಲಿದೆ. ನಾವೆಲ್ಲಾ ಒಟ್ಟಿಗೆ ಮುನ್ನುಗ್ಗಬೇಕಿದೆ. ನಾವೆಲ್ಲ ಒಟ್ಟಿಗೆ ಸಾಗಬೇಕಿದೆ. ಕರ್ನಾಟಕ ಜನರ, ಶಿವಮೊಗ್ಗ ಜನರ ಕನಸು ನನಸು ಮಾಡಬೇಕಿದೆ ಎಂದರು.

ಶಿವಮೊಗ್ಗ ವಿಮಾನ ನಿಲ್ದಾಣದಿಂದ ಅಭಿವೃದ್ಧಿ ಆಗಲಿದೆ. ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಹೊಸ ರೈಲು ಮಾರ್ಗ ನಿರ್ಮಾಣವಾದರೆ ಸಾಕಷ್ಟು ಲಾಭವಾಗಲಿದೆ. ಹಾವೇರಿವರೆಗೂ ಜನರಿಗೆ ಸಂಪರ್ಕ ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಾಂಗ್ರೆಸ್‍ನವರು ಅಭಿವೃದ್ಧಿಯನ್ನು ಮಾಡಲೇ ಇಲ್ಲ. ಬಡವರ ಪರ ಬಿಜೆಪಿ ಕೆಲಸ ಮಾಡುತ್ತಿದೆ. ಶಿವಮೊಗ್ಗ ಪಶ್ಚಿಮ ಘಟ್ಟದ ಹೆಬ್ಬಾಗಿಲು. ಈ ಮಲೆನಾಡು ಭಾಗದ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಸಣ್ಣ ಸಣ್ಣ ನಗರಗಳನ್ನು ಕಾಂಗ್ರೆಸ್ ನಿರ್ಲಕ್ಷ್ಯ ಮಾಡಿತ್ತು. ಬಳಿಕ ರೈಲ್ವೆ ಮಾರ್ಗ, ಹೆದ್ದಾರಿ ಯೋಜನೆಗಳು, ಅವುಗಳ ಪ್ರಯೋಜನ ಬಗ್ಗೆ ಮೋದಿಯವರು ವಿವರಿಸಿದರು.

ಸಾವರ್ಕರ್, ಟಿಪ್ಪು ಸಿದ್ದಾಂತದ ಮೇಲೆ ಚುನಾವಣೆ ನಡೆಯುವುದಿಲ್ಲ : ಬಿಎಸ್‌ವೈ

ಶಿವಮೊಗ್ಗ ಪಶ್ಚಿಮ ಘಟ್ಟದಲ್ಲಿ ಬರುವ ಮಲೆನಾಡಿನ ಹೆಬ್ಬಾಗಿಲು. ಇಲ್ಲಿ ನದಿ, ವನ್ಯ ಸಂಪತ್ತು ಅದ್ಭುತವಾಗಿದೆ. ಇಲ್ಲಿ ಜೋಗ್ ಜಲಪಾತ, ಆನೆಗಳ ಬಿಡಾರವೂ ಇದೆ. ಆಗುಂಬೆಯ ಸೂರ್ಯಾಸ್ತ ಯಾರು ಮರೆಯೋದಕ್ಕೆ ಸಾಧ್ಯವಿಲ್ಲ. ಗಂಗಾ ಸ್ನಾನ, ತುಂಗಾ ಪಾನ ಎಂದು ಉಕ್ತಿಯೇ ಇದೆ. ಸಿಗಂದೂರು ಚೌಡೇಶ್ವರಿ, ಕೋಟೆ ಆಂಜನೇಯ ದೇವಸ್ಥಾನವಿದೆ. ಇಲ್ಲಿಗೆ ವಿಮಾನ ಪ್ರಯಾಣದ ಸಂಪರ್ಕ ಅವಶ್ಯಕವಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣದಿಂದ ಅಭಿವೃದ್ಧಿ ಆಗಲಿದೆ. ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಹೊಸ ರೈಲು ಮಾರ್ಗ ನಿರ್ಮಾಣವಾದರೆ ಸಾಕಷ್ಟು ಲಾಭವಾಗಲಿದೆ. ಹಾವೇರಿವರೆಗೂ ಜನರಿಗೆ ಸಂಪರ್ಕ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಬ್ರಿಟಿಷರ ವಿರುದ್ದ ಹೋರಾಟ ನಡೆಸಿದ ಏಸೂರು ಬಿಟ್ಟರೂ ಈಸೂರು ಬಿಡೆವು ಎಂಬ ಘೋಷಣೆಯೊಂದಿಗೆ ಹೋರಾಟ ನಡೆಸಿದ್ದು ಇದೇ ಜಿಲ್ಲೆಯ ಜನ. ಶಿವಮೊಗ್ಗವು ಮಲೆನಾಡಿನ ಹೆಬ್ಬಾಗಿಲು. ಮಾತೆಯರ ಜೀವನ ಸುಲಭವಾಗಿಸಲು ಜಲಜೀವನ್ ಯೋಜನೆಯಡಿ ಡಬಲ್ ಇಂಜಿನ್ ಸರ್ಕಾರವು 4,43, 510 ಮನೆಗಳಿಗೆ ನಳ ಸಂಪರ್ಕ ನೀಡಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪ್ರಹ್ಲಾದ್ ಜೋಷಿ, ಸಚಿವರಾದ ಆರಗ ಜ್ಞಾನೇಂದ್ರ ವಿ.ಸೋಮಣ್ಣ, ನಾರಾಯಣಗೌಡ, ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜ್, ಸಂಸದ ಬಿ.ವೈ.ರಾಘವೇಂದ್ರ, ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್, ಮಾಜಿ ಸಚಿವ ಈಶ್ವರಪ್ಪ, ಶಾಸಕರಾದ ಕುಮಾರ್ ಬಂಗಾರಪ್ಪ ಮತ್ತಿತರರು ಉಪಸ್ಥಿತರಿದ್ದರು.

ಭಾರತದ ಅಭಿವೃದ್ಧಿಯನ್ನು ಶ್ಲಾಘಿಸಿದ ಅಮೆರಿಕಾದ ಅನಿವಾಸಿ ಭಾರತೀಯರು

ಪ್ರಧಾನಿ ಮೋದಿಯವರನ್ನು ಸಂಪ್ರದಾಯದಂತೆ ಶ್ರೀಗಂಧದಲ್ಲಿ ನಿರ್ಮಿಸಿದ್ದ ವಿಮಾನ ನಿಲ್ದಾಣ ಮಾದರಿಯನ್ನು ನೀಡಿ ಗೌರವಿಸಲಾಯಿತು. ನಂತರ ಬಿ.ಎಸ್.ಯಡಿಯೂರಪ್ಪ ಅವರಿಗೆ ಹಸಿರು ಶಾಲು ಹೊದಿಸಿ, ನೇಗಿಲು ನೀಡಿ ಖುದ್ದು ಪ್ರಧಾನಿಯವರೇ ಸನ್ಮಾನ ಮಾಡಿದರು.

PMModi, #inaugurate, #Shivamogga, #airport, #development, #projects, #Karnataka,

Articles You Might Like

Share This Article