ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್-2 ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ

Social Share

ಬೆಂಗಳೂರು,ನ.11- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಸ್ತರಣೆಯ ಭಾಗವಾಗಿ ನಿರ್ಮಿಸಲಾಗಿದ್ದ ಟರ್ಮಿನಲ್-2ನ್ನು ಪ್ರಧಾನಿ ನರೇಂದ್ರಮೋದಿ ಇಂದು ಲೋಕಾರ್ಪಣೆಗೊಳಿಸಿದರು.

ಭಾರತದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಒಂದಾಗಿರುವ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಕೆಐಎಎಲ್‍ನ್ನು ವಿಸ್ತರಣೆ ಮಾಡಲಾಗಿದೆ.
ಟರ್ಮಿನಲ್ 2, ಎರಡನೇ ರನ್‍ವೇ, ಮಲ್ಟಿಮೋಡಲ್ ಸಾರಿಗೆ ಕೇಂದ್ರ, ಪ್ರವೇಶ ರಸ್ತೆಗಳ ವಿಸ್ತರಣೆ ಮತ್ತು ಆಂತರಿಕ ರಸ್ತೆ ಮೂಲ ಸೌಕರ್ಯವನ್ನು ಒಳಗೊಂಡಿದೆ.

ಎರಡನೇ ಟರ್ಮಿನಲ್‍ನ್ನು ಎರಡು ಹಂತದಲ್ಲಿ ಅಭಿವೃದ್ಧಿ ಮಾಡಲಾಗಿದ್ದು, ಮೊದಲನೇ ಹಂತದಲ್ಲಿ 25 ಮಿಲಿಯನ್ ಪ್ರಯಾಣಿಕರು ಮತ್ತು ಎರಡನೇ ಹಂತದಲ್ಲಿ 45 ಮಿಲಿಯನ್ ಪ್ರಯಾಣಿಕರನ್ನು ನಿರ್ವಹಣೆ ಮಾಡಲಿದೆ.

ನಿರ್ಮಾಣದ ಗುತ್ತಿಗೆಯನ್ನು ಲಾರ್ಸೇನ್ ಆಂಡ್ ಟರ್ಬೊ ಕಂಪನಿಗೆ ಕೊಡಲಾಗಿದೆ. ಯೋಜನೆಯ ವಾಸ್ತು ವಿನ್ಯಾಸವನ್ನು ಸ್ಕಿಡ್‍ಮೋರ್, ಓವಿಂಗ್ಸ್ ಮತ್ತು ಮೆರಿಲ್ ಮಾಡಿದ್ದಾರೆ. ಯೋಜನೆಯು ಪ್ರಮುಖವಾಗಿ ತಾಂತ್ರಿಕತೆಯ ನೈಪುಣ್ಯತೆ, ಟರ್ಮಿನಲ್‍ನೊಳಗೆ ಉದ್ಯಾನವನ, ಪರಿಸರ ನಿರ್ವಹಣೆ ಮತ್ತು ಕರ್ನಾಟಕದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಒಳಗೊಂಡಿದೆ. ಟರ್ಮಿನಲ್ 2 ಹೊಸ ಮಲ್ಟಿ-ಲೆವೆಲ್ ಕಾರ್ ಪಾರ್ಕಿಂಗ್ ಪ್ರದೇಶ ಮತ್ತು ಮಲ್ಟಿ ಮೋಡಲ್ ಟ್ರಾನ್ಸ್‍ಪೆÇೀರ್ಟ್ ಹಬ್ ಒಳಗೊಂಡಿದೆ.

ಮುಂಬೈ-ಗೋವಾ ಹೆದ್ದಾರಿಯ ಸೇತುವೆ ಕೆಳಗೆ ಸ್ಪೋಟಕ ಪತ್ತೆ

ಬೆಂಗಳೂರು ಸಿಟಿಯಿಂದ ಮೆಟ್ರೋ ಸಂಪರ್ಕವನ್ನು ಒಳಗೊಂಡಿದೆ. ಟರ್ಮಿನಲ್‍ನೊಳಗೆ ಒಳಾಂಗಣ ಉದ್ಯಾನವನ ಇದ್ದು, ಜಲಪಾತ ಮತ್ತು ಸಣ್ಣ ಸಣ್ಣ ಕೊಳಗಳು ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಟರ್ಮಿನಲ್‍ನಿಂದ ಹೊರಗಿನ ಪರಿಸರ ಕಣ್ಣುಂಬಿಕೊಳ್ಳುವಂತೆ ಪಾರದರ್ಶಕವಾಗಿ ನಿರ್ಮಾಣ ಮಾಡಲಾಗಿದೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬೃಹತ್ ವಿಸ್ತರಣೆಗೆ 13 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿದೆ. ಎರಡನೇ ಟರ್ಮಿನಲ್‍ನ ಮೊದಲ ಹಂತವು 25 ಮಿಲಿಯನ್ ಪ್ರಯಾಣಿಕರನ್ನು ಸೇರಿಸಿದರೆ, ಎರಡನೇ ಹಂತವು 20 ಮಿಲಿಯನ್ ಪ್ರಯಾಣಿಕರನ್ನು ಸೇರಿಸುತ್ತದೆ.

ಒಟ್ಟು ಟರ್ಮಿನಲ್ ಪ್ರದೇಶವು 17 ಭದ್ರತಾ ಚೆಕ್-ಇನ್ ಲೇನ್‍ಗಳೊಂದಿಗೆ 2,55,645 ಚದರ ಮೀಟರ್ ಆಗಿರುತ್ತದೆ. ಗೇಟ್ ಲಾಂಜ್ ಆಸನದಲ್ಲಿ 5,932 ಆಸನ ಸಾಮಥ್ರ್ಯವಿರುತ್ತದೆ. ಟರ್ಮಿನಲ್ 2ನ್ನು ಒಳಗೆ ಮತ್ತು ಹೊರಗೆ ಹಚ್ಚ ಹಸಿರಿನೊಂದಿಗೆ ಹೊಂದಿಸಲಾಗಿದೆ. ಹೆಚ್ಚಿನ ಒತ್ತಡದ ಪ್ರದೇಶಗಳಲ್ಲಿ ಶಾಂತಗೊಳಿಸುವ ಉದ್ಯಾನಗಳನ್ನು ಒದಗಿಸುವ ಮೂಲಕ ಇದು ವಿವಿಧ ಹಂತಗಳಲ್ಲಿ ನವೀನ ಅನುಭವವಾಗಿದೆ.

ಪ್ರಯಾಣಿಕರ ಅನುಭವವನ್ನು ತಡೆರಹಿತವಾಗಿಸಲು ಟರ್ಮಿನಲ್-2 ನ ಪ್ರತಿಯೊಂದು ಅಂಶಕ್ಕೂ ತಂತ್ರಜ್ಞಾನವನ್ನು ಹೆಣೆಯಲಾಗಿದೆ. ಇಲ್ಲಿ ಎಲ್ಲಾ ಉನ್ನತ ಬ್ರ್ಯಾಂಡ್‍ಗಳನ್ನು ಹೊಂದಿರುವ ಇತರ ಯಾವುದೇ ವಿಮಾನ ನಿಲ್ದಾಣಕ್ಕಿಂತ ಭಿನ್ನವಾಗಿರುತ್ತದೆ. ಮಲ್ಟಿಮೋಡಲ್ ಹಬ್ ಟರ್ಮಿನಲ್ 1 ಮತ್ತು 2 ಮತ್ತು ಅದರ ಮುಂದಿನ ಹಂತ ಹೋಟೆಲ್‍ಗಳನ್ನು ಸಂಯೋಜಿಸುತ್ತದೆ.

ಚೆನ್ನೈ- ಮೈಸೂರು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಮೋದಿ ಚಾಲನೆ

ಭವಿಷ್ಯದಲ್ಲಿ ಬೆಂಗಳೂರು ಮೆಟ್ರೋ, ಬಸ್ ಸೇವೆಗಳು, ಟ್ಯಾಕ್ಸಿಗಳು ಮತ್ತು ಇತರ ಸಾರಿಗೆ ವಿಧಾನಗಳ ನಡುವೆ ವಿನಿಮಯ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಕರ್ನಾಟಕದ ಶ್ರೀಮಂತ ಇತಿಹಾಸ ಮತ್ತು ಸಂಸ್ಕೃತಿಯನ್ನು ಟರ್ಮಿನಲ್ 2ನಲ್ಲಿ ಡಿಜಿಟಲ್ ಮಾಧ್ಯಮ ಮತ್ತು ತಂತ್ರಜ್ಞಾನದ ಮೂಲಕ ವಿವಿಧ ಟಚ್ ಪಾಯಿಂಟ್‍ಗಳು, ಬ್ಯಾಗೇಜ್ ಬೆಲ್ಟ್ ಪ್ರದೇಶ ಮತ್ತು ಆಗಮನ ಹಾಲ್‍ನಲ್ಲಿ ದೊಡ್ಡದಾದ ವೀಡಿಯೊ ವಾಲ್‍ನಲ್ಲಿ ಪ್ರದರ್ಶಿಸಲಾಗುತ್ತದೆ.

ವಿಮಾನ ನಿಲ್ದಾಣದ ಬಳಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಅವರ ಜೊತೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಎ.ನಾರಾಯಣಸ್ವಾಮಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವರಾದ ವಿ.ಸೋಮಣ್ಣ, ಸಂಸದ ಮುನಿಸ್ವಾಮಿ ಮತ್ತಿತರ ಗಣ್ಯರು ಇದ್ದರು.

Articles You Might Like

Share This Article