ಬಿಜೆಪಿ ಕಾರ್ಯಕರ್ತರ ಜೊತೆ ಪ್ರಧಾನಿ ಸಂವಾದ

Social Share

ನವದೆಹಲಿ, ಜ.15- ಚುನಾವಣೆ ಘೋಷಣೆಯಾಗಿರುವ ಉತ್ತರ ಪ್ರದೇಶದಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ವರ್ಚುವಲ್ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ.
ಕೇಂದ್ರ ಆಯೋಗ ಉತ್ತರ ಪ್ರದೇಶ ಸೇರಿದಂತೆ ಪಂಚರಾಜ್ಯಗಳಿಗೆ ಚುನಾವಣೆ ಘೋಷಣೆ ಮಾಡಿದೆ. ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನವರಿ 15ರವರೆಗೂ ಬಹಿರಂಗ ಸಮಾವೇಶ, ರೋಡ್ ಶೋಗಳನ್ನು ನಿಷೇಧಿಸಿದೆ.
ಈ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ಅವರು ವಾರಣಾಸಿಯ ಕಾರ್ಯಕರ್ತರೊಂದಿಗೆ ಜನವರಿ 18ರಂದು ಸಂವಾದ ನಡೆಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸಾರ್ವಜನಿಕ ತಮ್ಮ ಸಲಹೆ ಸೂಚನೆಗಳನ್ನು ನಮೋ ಆಪ್ ನಲ್ಲಿ ದಾಖಲಿಸಬಹುದು ಎಂದು ಉತ್ತರ ಪ್ರದೇಶ ಬಿಜೆಪಿ ಘಟಕ ತಿಳಿಸಿದೆ.
ಚುನಾವಣೆ ಘೋಷಣೆಯಾದ ಬಳಿಕ ಇದು ಪ್ರಧಾನಿ ಅವರ ಮೊದಲ ಪ್ರಚಾರ ಕಾರ್ಯಕ್ರಮವಾಗಿದೆ. ವರ್ಚುವಲ್ ಮೂಲಕವೆ ಪ್ರಧಾನಿ ಸಂವಾದ ನಡೆಸಲಿದ್ದಾರೆ.

Articles You Might Like

Share This Article