ರಸ್ತೆ ಡಾಂಬರು ಕಿತ್ತುಬಂದರೆ ಎಂಜಿನಿಯರ್‌ಗಳಿಗೆ ಕಾದಿದೆ ಮಾರಿಹಬ್ಬ

Social Share

ಬೆಂಗಳೂರು, ನ.10- ನಾಳೆ ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರು ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅವರು ಹಾದು ಹೋಗಲಿರುವ ರಸ್ತೆಗಳಿಗೆ ಪಾಲಿಕೆ ಡಾಂಬರ್ ಹಾಕಿ ಶೃಂಗಾರ ಮಾಡುತ್ತಿದ್ದು , ಅವರು ಹೋದ ನಂತರ ಡಾಂಬರು ಕಿತ್ತು ಬಂದರೆ ಎಂಜಿನಿಯರ್‍ಗಳಿಗೆ ಕಾದಿದೆ ಗಂಡಾಂತರ.

ಕಳೆದ ಬಾರಿ ನರೇಂರ ಮೋದಿ ಆಗಮಿಸಿದಾಗ ಬೆಂಗಳೂರು ವಿಶ್ವವಿದ್ಯಾಲಯದ ಆವರಣದ ರಸ್ತೆಗಳು ಹಾಗೂ ಕೆಂಗೇರಿ ಉಪನಗರ, ಮೈಸೂರು ರಸ್ತೆಯ ಕೆಲ ರಸ್ತೆಗಳಿಗೆ ಡಾಂಬರ್ ಹಾಕಿ ಶೃಂಗಾರ ಮಾಡಲಾಗಿತ್ತು. ಆದರೆ ಅವರು ಹೋದ ಮೂರನೇ ದಿನಕ್ಕೆ ಕೆಂಗೇರಿ ಕೊಮ್ಮಘಟ್ಟ ರಸ್ತೆಯಲ್ಲಿ ಡಾಂಬರು ಕಿತ್ತು ಬಂದಿತ್ತು.

ಇನ್ನು ವಿವಿ ಆವರಣದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಕ್ಯಾಂಪಸ್ ಉದ್ಘಾಟನೆ ಮಾಡಿದ್ದು, ಕ್ಯಾಂಪಸ್ ದ್ವಾರದ ಸಮೀಪವೇ ಗುಂಡಿ ಬಿದ್ದಿತ್ತು. ಇದು ದೇಶಾದ್ಯಂತ ಭಾರಿ ಸುದ್ದಿಯಾಗಿತ್ತು. ಇದರಿಂದ ಮುಜುಗರಕ್ಕೊಳಗಾದ ಪಾಲಿಕೆ ಈ ಬಾರಿ ಎಚ್ಚೆತ್ತುಕೊಂಡು ಕಳಪೆ ಕಾಮಗಾರಿ ವಿರುದ್ಧ ಸಮರ ಸಾರಿದ್ದು,

ಬೆಂಗಳೂರಿಗರೇ ನಾಳೆ ರಸ್ತೆಗಿಳಿಯುವ ಮುನ್ನ ಇಲ್ಲಿ ಗಮನಿಸಿ

ಈ ಬಾರಿ ಮೋದಿಯವರು ಸಂಚರಿಸುವ ರಸ್ತೆಗಳಲ್ಲಿ ಕಳಪೆ ಕಂಡು ಬಂದರೆ ಎಂಜಿನಿಯರ್‍ಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತ ತುಷಾರ್ ಗಿರಿನಾಥ್ ಎಚ್ಚರಿಕೆ ನೀಡಿದ್ದಾರೆ.

ಈಗಾಗಲೇ ವಲಯವಾರು ಎಂಜಿನಿಯರ್‍ಗಳಿಗೆ ಕಡಕ್ ಸಂದೇಶ ರವಾನಿಸಿದ್ದು , ಗುಣಮಟ್ಟ ಕಾಪಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ ಬಸವರಾಜನ್ ಅರೆಸ್ಟ್

ಒಂದು ವೇಳೆ ಕಳೆದ ಬಾರಿಯಂತೆ ಡಾಂಬರು ಕಿತ್ತು ಬಂದರೆ ಎಂಜಿನಿಯರ್‍ಗಳನ್ನು ನೇರ ಹೊಣೆ ಮಾಡಿ ಶಿಸ್ತುಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

Articles You Might Like

Share This Article