ನವದೆಹಲಿ,ಫೆ.16- ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರವಿದಾಸ್ ಜಯಂತಿಯ ಸಂದರ್ಭದಲ್ಲಿ ಇಲ್ಲಿನ ಕರೋಲ್‍ಬಾಗ್‍ನಲ್ಲಿರುವ ಶ್ರೀ ಗುರು ರವಿದಾಸ್ ವಿಶ್ರಾಮ್‍ಧಾಮ್ ಮಂದಿರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಆಧ್ಯಾತ್ಮಿಕ ಕವಿ ರವಿದಾಸ್ ಅವರು ರಾಷ್ಟ್ರವ್ಯಾಪಿ ಅನುಯಾಯಿಗಳನ್ನು ಅದರಲ್ಲೂ ದಲಿತರ ಒಂದು ವರ್ಗದ ಅನುಯಾಯಿಗಳನ್ನು ಹೊಂದಿದ್ದಾರೆ.
ರವಿದಾಸ್ ಅವರು ಜಾತೀಯತೆ ಮತ್ತು ಅಸ್ಪೃಶ್ಯತೆಯಂತಹ ಕ್ರೂರ ಆಚರಣೆಗಳ ಮೂಲೋತ್ಪಾಟನೆಗೆ ತಮ್ಮ ಜೀವನವನ್ನೇ ಮುಡಿಪಾಗಿರಿಸಿದ್ದರು. ಜನತೆಯ ಕಲ್ಯಾಣಕ್ಕಾಗಿ ನಾನು ರವಿದಾಸ್ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದೇನೆ ಎಂದು ಮಂಗಳವಾರ ಮೋದಿ ನುಡಿದಿದ್ದರು.
ತಮ್ಮ ಸರ್ಕಾರವು ಪ್ರತಿಯೊಂದು ಹೆಜ್ಜೆ ಮತ್ತು ಯೋಜನೆಗಳಲ್ಲೂ ಗುರು ರವಿದಾಸ್ ಅವರಿಂದ ಸೂರ್ತಿಗೊಂಡಿದೆ ಎಂದು ಪ್ರಧಾನಿ ಪ್ರತಿಪಾದಿಸಿದರು.
