ಬೆಂಗಳೂರು,ಫೆ.5- ಪ್ರಧಾನಿ ನರೇಂದ್ರಮೋದಿ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ನಾಳೆ ಮತ್ತೆ ಕರ್ನಾಟಕಕ್ಕೆ ಆಗಮಿಸುತ್ತಿದ್ದು, ವಿಧಾನಸಭೆ ಚುನಾವಣೆಗೆ ಕಾರ್ಯಕರ್ತರನ್ನು ಹುರಿದುಂಬಿಸಲಿದ್ದಾರೆ. ಕಳೆದ ಒಂದು ತಿಂಗಳ ಅವಯಿಂದ ಇದು ಪ್ರಧಾನಿಗಳ ಮೂರನೇ ಭೇಟಿಯಾಗಿದೆ. ಇದೊಂದು ಸರ್ಕಾರಿ ಕಾರ್ಯಕ್ರಮವಾಗಿದ್ದರೂ ಚುನಾವಣೆಯ ಮುಂದುವರೆದ ಪ್ರಚಾರ ಎಂದೇ ಬಿಂಬಿತವಾಗಿದೆ.
ನಾಳೆ 8.20ರ ಸುಮಾರಿಗೆ ದೆಹಲಿಯಿಂದ ಹೊರಡುವ ಮೋದಿ ಅವರು ವಿಶೇಷ ವಿಮಾನದ ಮೂಲಕ 11 ಗಂಟೆಗೆ ಬೆಂಗಳೂರಿಗೆ ಆಗಮಿಸಲಿದ್ದು, 2023ರ ಐಇಡಬ್ಲ್ಯೂ ಭಾರತ ಇಂಧನ ಸಪ್ತಾಹವನ್ನು ಉದ್ಘಾಟಿಸಲಿದ್ದಾರೆ.
ಫೆಬ್ರವರಿ 6 ರಿಂದ 8 ರ ವರೆಗೆ ಐಇಡಬ್ಲ್ಯೂ ಆಯೋಜನೆಗೊಂಡಿದ್ದು, ಇದು ಭಾರತದ ಬೆಳವಣಿಗೆಯಾಗುತ್ತಿರುವ ಇಂಧನ ಪರಿವರ್ತನೆಯ ಶಕ್ತಿಕೇಂದ್ರವಾಗಿದೆ.
ಸಾಂಪ್ರದಾಯಿಕ ಮತ್ತು ಸಾಂಪ್ರದಾಯಿಕವಲ್ಲದ ಇಂಧನ ಕೈಗಾರಿಕೆ ವಲಯ, ಸರ್ಕಾರಗಳು ಮತ್ತು ಶೈಕ್ಷಣಿಕ ವಲಯದ ನಾಯಕರನ್ನು ಇದು ಒಟ್ಟಿಗೆ ತರಲಿದ್ದು, ಸವಾಲುಗಳು ಮತ್ತು ಜವಾಬ್ದಾರಿಯುತ ಇಂಧನ ಪರಿವರ್ತನೆಯ ಅವಕಾಶಗಳ ಕುರಿತು ಚರ್ಚಿಸಲಾಗುತ್ತದೆ.
ಜಗತ್ತಿನಾದ್ಯಂತ 30ಕ್ಕೂ ಹೆಚ್ಚು ಸಚಿವರ ಸಮ್ಮುಖದಲ್ಲಿ 30 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು, ಒಂದು ಸಾವಿರ ಮಳಿಗೆಗಳು, 500ಕ್ಕೂ ಹೆಚ್ಚು ಭಾಷಣಕಾರರು ಭಾರತದ ಇಂಧನ ಭವಿಷ್ಯ ಕುರಿತ ಸವಾಲುಗಳು ಮತ್ತು ಅವಕಾಶಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಜಾಗತಿಕ ತೈಲ ಮತ್ತು ಅನಿಲ ವಲಯದ ಸಿಇಒಗಳ ದುಂಡು ಮೇಜಿನ ಸಭೆಯಲ್ಲಿ ಸಂವಾದದಲ್ಲಿ ಭಾಗವಹಿಸಲಿದ್ದು, ಹಸಿರು ಇಂಧನ ಕ್ಷೇತ್ರದಲ್ಲಿ ಬಹುಹಂತದ ಉಪಕ್ರಮಗಳಿಗೆ ಚಾಲನೆ ನೀಡಲಿದ್ದಾರೆ.
ಇದೇ ವೇಳೆ ಎಥಿನಾಲ್ ಮಿಶ್ರಣ ಮಾರ್ಗನಕ್ಷೆಯಡಿ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ತೈಲ ಮಾರುಕಟ್ಟೆ ಕಂಪೆನಿಗಳ 84 ಚಿಲ್ಲರೆ ಮಳಿಗೆಗಳಲ್ಲಿ ಇ-20 ಇಂಧನ ಉಪಕ್ರಮವನ್ನು ಪ್ರಾರಂಭಿಸಲಿದ್ದಾರೆ.
ಹಸಿರು ಸಾಗಣೆ ಜಾಥಾಗೆ ಚಾಲನೆ ನೀಡಲಿದ್ದು, ಈ ಜಾಥ ಹಸಿರಿರುವ ಇಂಧನ ಮೂಲಗಳಿಂದ ಚಲಿಸುವ ವಾಹನಗಳ ಪಾಲ್ಗೊಳ್ಳುವಿಕೆಗೆ ಸಾಕ್ಷಿಯಾಗಲಿದೆ ಮತ್ತು ಹಸಿರು ಇಂಧನ ಕುರಿತು ಜಾಗೃತಿ ಮೂಡಿಸಲು ನೆರವಾಗಲಿದೆ.
ಶೀಶೆ ರಹಿತ ಉಪಕ್ರಮದಡಿ ಸಮವಸ್ತ್ರಗಳನ್ನು ಬಿಡುಗಡೆ ಮಾಡಲಿದ್ದು, ಏಕ ಬಳಕೆ ಪ್ಲಾಸ್ಟಿಕ್‍ನ್ನು ಹಂತ ಹಂತವಾಗಿ ತೊಡೆದುಹಾಕಲು ಅವರ ದೂರದೃಷ್ಟಿಯ ಮಾರ್ಗದರ್ಶನದಿಂದ ಭಾರತೀಯ ತೈಲ ನಿಗಮ ಮರುಬಳಕೆಯ ಪಾಲಿಯಸ್ಟರ್ ಆರ್ ಪಿಇಟಿ ಮತ್ತು ಹತ್ತಿಯಿಂದ ಉತ್ಪಾದಿಸಿದ ಸಮವಸ್ತ್ರವನ್ನು ಚಿಲ್ಲರೆ ವಲಯ ಮತ್ತು ಎಲ್.ಪಿ.ಜಿ ವಿತರಣಾ ಸಿಬ್ಬಂದಿಗೆ ಸಮವಸ್ತ್ರವನ್ನು ವಿತರಿಸುವುದನ್ನು ಇದರಡಿ ಅಳವಡಿಸಿಕೊಳ್ಳಲಾಗಿದೆ.
ತೈಲ ನಿಮಗದ ಒಳಾಂಗಣ ಸೌರ ಅಡುಗೆ ವ್ಯವಸ್ಥೆಯ ಅವಳಿ ಕುಕ್ ಟಾಪ್ ಮಾದರಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ ಮತ್ತು ಇದರ ವಾಣಿಜ್ಯ ಚಟುವಟಿಕೆಗೆ ಚಾಲನೆ ನೀಡಲಿದ್ದಾರೆ.
ರ್ಯಾಲಿಗೆ 1,000-1,5000 ವಿದ್ಯಾರ್ಥಿಗಳನ್ನು ಕಳುಹಿಸುವಂತೆ ವಿವಿಗಳಿಗೆ ಶಿಕ್ಷಣ ಇಲಾಖೆ ಮನವಿ ಮಾಡಿಕೊಂಡಿದೆ.ರ್ಯಾಲಿಯು ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಿಂದ ಆರಂಭಗೊಂಡು ನೀಲಕಂಠ ಪಾರ್ಕಿಂಗ್ ಮೈದಾನ/ಮಾದಾವರ ಮೈದಾನದಲ್ಲಿ ಕೊನೆಗೊಳ್ಳಲಿದೆ.
ಕುತೂಹಲ ಕೆರಳಿಸಿದ ಬೊಮ್ಮಾಯಿ ಹಾಗೂ ಬಿಎಸ್‌ವೈ ದೆಹಲಿ ಪ್ರವಾಸ
ಈ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು ಕಳುಹಿಸಲು ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯಗಳು, ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ, ನೃಪತುಂಗ ವಿಶ್ವವಿದ್ಯಾಲಯ ಮತ್ತು ಯುವಿಸಿಇಗೆ ಸೂಚಿಸಿದೆ ಎಂದು ತಿಳಿದುಬಂದಿದೆ.
ಎಚ್‍ಎಎಲ್ ಘಟಕ ಲೋಕರ್ಪಾಣೆ : ತುಮಕೂರಿನ ಗುಬ್ಬಿ ತಾಲ್ಲೂಕಿನ ಬಿದರಹಳ್ಳಿ ಕಾವಲ್ ಬಳಿ ನಿರ್ಮಿಸಿರುವ ಎಚ್‍ಎ ಎಲ್ ಘಟಕ ಲೋಕರ್ಪಾಣೆ ಮಾಡುವರು. ಇದು ಹಸಿರು ವಲಯ ಸಮರ್ಪಿತ ಹೆಲಿಕಾಪ್ಟರ್ ಕಾರ್ಖಾನೆಯಾಗಿದೆ.
ಈ ಕಾರ್ಖಾನೆಯಲ್ಲಿ ಲಘು ಯುದ್ಧ ಹೆಲಿಕಾಪ್ಟರ್ ಎಲ್‍ಸಿಎಚ್ ಇತರೆ ಹೆಲಿಕಾಪ್ಟರ್‍ಗಳ ಉತ್ಪಾದನೆಯನ್ನು ಸಹ ವಿಸ್ತರಿಸಲಾಗುತ್ತದೆ ಮತ್ತು ಭಾರತೀಯ ಬಹುಪಾತ್ರದ ಹೆಲಿಕಾಪ್ಟರ್‍ಗಳು ಐಎಂಆರ್ ಎಚ್ ಅಲ್ಲದೇ ದುರಸ್ತಿ ಮತ್ತು ಒಟ್ಟಾರೆ ಎಲ್ ಸಿಎಚ್, ಎಲ್ ಯುಎಚ್, ನಾಗರಿಕ ಎಎಲ್ ಎಚ್ ಮತ್ತು ಐಎಂಆರ್ ಎಚ್ ಹೆಲಿಕಾಪ್ಟರ್ ಗಳನ್ನು ಭವಿಷ್ಯದಲ್ಲಿ ಉತ್ಪಾದಿಸಲಾಗುವುದು.
ಬರುವ ದಿನಗಳಲ್ಲಿ ನಾಗರಿಕ ಎಲ್‍ಯುಎಚ್‍ಗಳನ್ನು ಉತ್ಪಾದಿಸುವ ಸಾಮಥ್ರ್ಯವನ್ನು ಈ ಕಾರ್ಖಾನೆ ಹೊಂದಿದೆ. ಮುಂದಿನ 20 ವರ್ಷಗಳಲ್ಲಿ ಎಚ್‍ಎಎಲ್ ತುಮಕೂರಿನಲ್ಲಿ 3ರಿಂದ 15 ಟನ್ ಸಾಮಥ್ರ್ಯದ 1000 ಕ್ಕೂ ಹೆಚ್ಚು ಹೆಲಿಕಾಪ್ಟರ್‍ಗಳನ್ನು ಉತ್ಪಾದಿಸುವ ಗುರಿ ಹೊಂದಿದೆ. ಈ ವಲಯದಲ್ಲಿ 6000 ಕ್ಕೂ ಹೆಚ್ಚು ಜನರಿಗೆ ಉದ್ಯೋಗ ದೊರೆಯಲಿದೆ.
ಇದೇ ವೇಳೆ ತುಮಕೂರು ಕೈಗಾರಿಕಾ ಪ್ರದೇಶಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮದಡಿ ತುಮಕೂರಿನಲ್ಲಿ ಮೂರು ಹಂತಗಳಲ್ಲಿ 8484 ಎಕರೆ ಪ್ರದೇಶದಲ್ಲಿ ಮೂರು ಹಂತಗಳ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಇದು ಚೆನ್ನೈ ಬೆಂಗಳೂರು ಕೈಗಾರಿಕಾ ಕಾರಿಡಾರ್ ನ ಭಾಗವಾಗಿದೆ.
ತುಮಕೂರಿನ ಚಿಕ್ಕನಾಯಕನಹಳ್ಳಿ ಮತ್ತು ತಿಪಟೂರಿನಲ್ಲಿ ಜಲ್ ಜೀವನ್ ಅಭಿಯಾನದ ಯೋಜನೆಗಳಿಗೆ ಪ್ರಧಾನಮಂತ್ರಿ ಅವರು ಶಿಲಾನ್ಯಾಸ ನೆರವೇರಿಸಲಿದ್ದಾರೆ. ತಿಪಟೂರಿನ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಯನ್ನು 430 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ.
ಚಿಕ್ಕನಾಯಕನಹಳ್ಳಿಯ 147 ಜನವಸತಿ ಪ್ರದೇಶಗಳಿಗೆ 115 ಕೋಟಿ ರೂ. ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.
ಈ ಗ್ರೀನ್‍ಫೀಲ್ಡ್ ಹೆಲಿಕಾಪ್ಟರ್ ಕಾರ್ಖಾನೆಯು 615 ಎಕರೆ ಪ್ರದೇಶದಲ್ಲಿದೆ. ದೇಶದ ಎಲ್ಲಾ ಹೆಲಿಕಾಪ್ಟರ್ ಅವಶ್ಯಕತೆಗಳಿಗೆ ಒಂದೇ-ಕಡೆ (ಒನ್ ಸ್ಟಾಪ್) ಪರಿಹಾರ ಒದಗಿಸುವ ದೃಷ್ಟಿಕೋನದಲ್ಲಿ ಇದನ್ನು ಯೋಜಿಸಲಾಗಿದೆ.
ಇದು ಭಾರತದ ಅತಿದೊಡ್ಡ ಹೆಲಿಕಾಪ್ಟರ್ ತಯಾರಿಕಾ ಸೌಲಭ್ಯವಾಗಿದೆ ಮತ್ತು ಆರಂಭದಲ್ಲಿ ಲಘು ಬಳಕೆಯ ಹೆಲಿಕಾಪ್ಟರ್‍ಗಳನ್ನು (ಎಲ್ ಯು ಎಚ್) ತಯಾರಿಸುತ್ತದೆ.
ನಾಳೆ ತ್ರಿಪುರದಲ್ಲಿ ಅಮಿತ್ ಶಾ ಚುನಾವಣಾ ರ‍್ಯಾಲಿ
ಎಲ್‍ಯುಎಚ್ ಸ್ಥಳೀಯವಾಗಿ ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಿದ 3-ಟನ್ ವರ್ಗದ, ಒಂದು ಇಂಜಿನ್ ಹೊಂದಿರುವ ವಿವಿಧೋದ್ದೇಶ ಬಳಕೆಯ ಹೆಲಿಕಾಪ್ಟರ್ ಆಗಿದೆ. ಆರಂಭದಲ್ಲಿ ಈ ಕಾರ್ಖಾನೆಯು ವರ್ಷಕ್ಕೆ ಸುಮಾರು 30 ಹೆಲಿಕಾಪ್ಟರ್‍ಗಳನ್ನು ತಯಾರಿಸುತ್ತದೆ ಮತ್ತು ಹಂತ ಹಂತವಾಗಿ ಇದರ ತಯಾರಿಕಾ ಸಾಮಥ್ರ್ಯ ವರ್ಷಕ್ಕೆ 60 ಮತ್ತು ನಂತರ 90ಕ್ಕೆ ಹೆಚ್ಚಿಸಬಹುದು. ಮೊದಲ ಎಲ್‍ಯುಎಚ್‍ನ್ನು ಹಾರಾಟ ಪರೀಕ್ಷೆಗೆ ಒಳಪಡಿಸಲಾಗಿದೆ ಮತ್ತು ಬಿಡುಗಡೆಗೆ ಸಿದ್ಧವಾಗಿದೆ.
ಹೆಲಿ-ರನ್‍ವೇ, ಫ್ಲೈಟ್ ಹ್ಯಾಂಗರ್, ಅಂತಿಮ ಜೋಡಣೆ ಪ್ರದೇಶ, ನಿರ್ಮಾಣ ಜೋಡಣೆ ಪ್ರದೇಶ, ಏರ್ ಟ್ರಾಫಿಕ್ ಕಂಟ್ರೋಲ್ ಮತ್ತು ವಿವಿಧ ಸಂಬಂತ ಸೇವಾ ಸೌಲಭ್ಯಗಳ ಸ್ಥಾಪನೆಯೊಂದಿಗೆ, ಕಾರ್ಖಾನೆಯು ಸಂಪೂರ್ಣವಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ಕಾರ್ಖಾನೆಯು ಅದರ ಕಾರ್ಯಾಚರಣೆಗಳಿಗಾಗಿ ಅತ್ಯಾಧುನಿಕ ಇಂಡಸ್ಟ್ರಿ 4.0 ಮಾನದಂಡದ ಉಪಕರಣಗಳು ಮತ್ತು ತಂತ್ರಗಳನ್ನು ಹೊಂದಿದೆ.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ರಕ್ಷಣಾ ಸಚಿವಾಲಯದ ಹಿರಿಯ ಅಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿರುತ್ಥಾರೆ.
#PMModi, #visit, #Karnataka, #inaugurate, #IndiaEnergyWeek,