ಕುಲ ಕುಲವೆಂದು ಹೊಡೆದಾಡದಿರಿ : ಮೋದಿ ಭಾಷಣದ ಹೈಲೈಟ್ಸ್

Social Share

ಬೆಂಗಳೂರು,ನ.11-ಡಬಲ್ ಇಂಜಿನ್ ಸರ್ಕಾರದಿಂದ ನವಭಾರತ ನಿರ್ಮಾಣ ಮತ್ತಷ್ಟು ಬಲಿಷ್ಠಗೊಳ್ಳಲಿದೆ ಎಂದು ಪ್ರಧಾನಿ ನರೇಂದ್ರಮೋದಿ ಪ್ರತಿಪಾದಿಸಿದ್ದಾರೆ. ಬೆಂಗಳೂರಿಗೆ ಆಗಮಿಸಿದ ಅವರು ಹಲವು ಅಭಿವೃದ್ಧಿ ಕಾಮಗಾರಿಗಳಲ್ಲಿ ಭಾಗವಹಿಸಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಕೆಂಪೇಗೌಡರ ಪ್ರಗತಿ ಪ್ರತಿಮೆ ಅನಾವರಣದ ಮೂಲಕ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ,ಇಂದು ರಾಜ್ಯ ಮತು ರಾಷ್ಟ್ರಕ್ಕೆ ಉತ್ತಮ ಸಂದೇಶ ನೀಡಿದ ಕನಕದಾಸರು, ಒನಕೆ ಓಬವ್ವ ಅವರ ಜನ್ಮದಿನವಾದ ಇಂದು ರಾಜ್ಯಕ್ಕೆ ಭೇಟಿ ನೀಡಿರುವುದು ಹೆಚ್ಚು ಸಂತಸ ನೀಡಿದೆ ಎಂದರು.

ಕನಕದಾಸರು ಭಕ್ತಿ ಮಾರ್ಗದಲ್ಲಿ ಕೃಷ್ಣನ ದರ್ಶನ ಪಡೆದಿರುವುದು ಆಧ್ಯಾತ್ಮಿಕ ಅನುಭಾವವಾಗಿದ್ದರೆ ಅದೇ ಕನಕದಾಸರು ಕುಲ ಕುಲವೆಂದು ಹೊಡೆದಾಡದಿರಿ ಎಂದು ಸಂದೇಶ ಸಾರಿದ್ದಾರೆ. ಭಾರತಕ್ಕೆ ಆಧ್ಯಾತ್ಮಿಕ ಮತ್ತು ಸಾಮಾಜಿಕ ಪರಂಪರೆಯ ಪ್ರಭಾವಳಿ ಅಗತ್ಯವಿದೆ ಎಂದರು.

ಆತ್ಮ ನಿರ್ಭರ್ ಭಾರತ್, ಮೇಕ್ ಇಂಡಿಯಾದಡಿ ನಿರ್ಮಿಸಿದ ವಂದೇ ಭಾರತ್ ರೈಲು ಇಂದು ಆರಂಭಗೊಂಡಿದ್ದು, ಚೆನ್ನೈನಿಂದ ನವೋದ್ಯಮಗಳ ರಾಜಧಾನಿ ಬೆಂಗಳೂರು ಮೂಲಕ ಸಾಂಸ್ಕøತಿಕ ರಾಜಧಾನಿ ಮೈಸೂರು ತಲುಪುತ್ತಿದೆ.

ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್-2 ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ

ವಿಮಾನ ನಿಲ್ದಾಣದ ಟರ್ಮಿನಲ್-2 ಉದ್ಘಾಟನೆ ಮೂಲಕ ಬೆಂಗಳೂರಿಗರ ಬಹುದಿನಗಳ ಕನಸನ್ನು ನಮ್ಮ ಸರ್ಕಾರ ಈಡೇರಿಸಿದೆ. ಹೊಸ ಟರ್ಮಿನಲ್ ಅತ್ಯಂತ ಸುಂದರ, ಭವ್ಯ, ಆಧುನೀಕರಣವಾಗಿದೆ. ಅಯೋಧ್ಯೆ, ಪ್ರಯಾಗ್‍ರಾಜ್, ಕಾಶಿ ಪ್ರವಾಸಕ್ಕೆ ಭಾರತ್ ಗೌರವ್ ಕಾಶಿ ದರ್ಶನ್ ರೈಲು ಆರಂಭವಾಗಿದೆ ಎಂದರು.

ನಾಡಪ್ರಭು ಕೆಂಪೇಗೌಡರ 108 ಅಡಿ ಜಲಾಭಿಷೇಕ ಮಾಡುವ ಅವಕಾಶ ನನಗೆ ದೊರೆತಿದ್ದು ಪುಣ್ಯ. ಭವಿಷ್ಯದ ಬೆಂಗಳೂರು ಮತ್ತು ಭಾರತದ ಸಂಪನ್ನ ವೃದ್ಧಿಗೆ ಕೆಂಪೇಗೌಡರ ಆಶಯಗಳು ಪೂರಕವಾಗಿರಲಿವೆ ಎಂದರು.
ಇಂದು ವಿಶ್ವದಲ್ಲಿ ಭಾರತದ ಪರಿಚಯದ ಸ್ವರೂಪ ಭಿನ್ನವಾಗಿದೆ. ರುಕ್ ರುಕ್ ಎಂದು ನಿಧಾನವಾಗಿ ಸಾಗುವ ಅಭಿವೃದ್ಧಿಯ ವೇಗವನ್ನು ಹಿಂದಿಕ್ಕಿ ನಮ್ಮ ಸರ್ಕಾರ ತ್ವರಿತ ಮತ್ತು ಶೀಘ್ರಗತಿಯ ವೇಗವನ್ನು ಅನುಸರಿಸುತ್ತಿದೆ.

ಇದರಿಂದ ಯುವಕರಿಗೆ ಹೊಸ ಅವಕಾಶಗಳು ಲಭ್ಯವಾಗುತ್ತಿದೆ. ಭವಿಷ್ಯಕ್ಕೆ ಭದ್ರ ಬುನಾದಿ ದೊರೆತಿದೆ. ಬೆಂಗಳೂರು ನವೋದ್ಯಮಗಳ ಅಡಿಪಾಯವಾಗಿದ್ದು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆದಿದೆ ಎಂದು ಹೇಳಿದರು.

ಇಂದು ಉದ್ಘಾಟನೆಯಾದ ವಂದೇ ಭಾರತ್ ರೈಲು ಮುಂದಿನ ದಿನಗಳಲ್ಲಿ ದೇಶದ ರೈಲಿನ ಅಭಿವೃದ್ಧಿಗೆ ಉದಾಹರಣೆಯಾಗಿದೆ. ಸುಮಾರು 400ಕ್ಕೂ ಹೆಚ್ಚು ವಂದೇ ಭಾರತ್ ರೈಲುಗಳು ದೇಶದಲ್ಲಿ ಸಂಚರಿಸಲಿವೆ ಎಂದರು.
ಪಿಎಂ ಗತಿಶಕ್ತಿ ಯೋಜನೆಯಡಿ ಸಾರಿಗೆ ವಲಯದ ಎಲ್ಲ ಮಾಧ್ಯಮಗಳನ್ನು ಜೋಡಿಸಲಾಗುತ್ತಿದೆ. ಬ್ರಾಡ್‍ಗೇಜ್ ಪರಿವರ್ತನೆ ತ್ವರಿತವಾಗಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿನ ಯಶವಂತಪುರ ಮತ್ತು ಕಂಟೋನ್ಮೆಂಟ್ ರೈಲು ನಿಲ್ದಾಣಗಳು ಆಧುನೀಕರಣಗೊಳ್ಳಲಿದೆ ಎಂದು ತಿಳಿಸಿದರು.

ಭಾರತದಲ್ಲಿ ವಿಮಾನ ಪ್ರಯಾಣದ ಮಾರುಕಟ್ಟೆ ವಿಶ್ವದಲ್ಲೇ ಹೆಚ್ಚಾಗುತ್ತಿದೆ. ಇದಕ್ಕೆ ಅನುಗುಣವಾಗಿ ವಿಮಾನ ನಿಲ್ದಾಣಗಳನ್ನು ಹೆಚ್ಚಿಸಲಾಗುವುದು. ವಾಯು ಸಂಪರ್ಕವನ್ನು ಸುಧಾರಣೆ ಮಾಡಲಾಗುವುದು ಎಂದು ಹೇಳಿದರು.
2014ರಿಂದ ವಿಮಾನ ನಿಲ್ದಾಣಗಳ 70ರಷ್ಟು ಸಂಖ್ಯೆ ಪ್ರಸ್ತುತ ದ್ವಿಗುಣಗೊಂಡಿದ್ದು 150ರಷ್ಟು ಹೆಚ್ಚಾಗಿದೆ.

ಇದರಿಂದ ಉದ್ಯೋಗದ ಅವಕಾಶಗಳು ಹೆಚ್ಚಾಗಿವೆ. ಭಾರತೀಯರ ಮೇಲೆ ವಿಶ್ವದ ವಿಶ್ವಾಸ ಹೆಚ್ಚಾಗಿದೆ. ಅದರ ಲಾಭ ಕರ್ನಾಟಕಕ್ಕೂ ದೊರೆಯಲಿದೆ. ಕರ್ನಾಟಕ ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಮುಂಚೂಣಿಯಲ್ಲಿದ್ದು 4 ಲಕ್ಷ ಕೋಟಿಗೂ ಅಕ ಬಂಡವಾಳವನ್ನು ಆಕರ್ಷಿಸಿದೆ.

ಮನೆ ಮನೆಗೆ ಗಂಗೆ ಸೇರಿದಂತೆ ಹಲವು ಸೌಲಭ್ಯಗಳನ್ನು ಹೆಚ್ಚಿನದಾಗಿ ದೊರೆತಿವೆ. ಬಾಹ್ಯಾಕಾಶ ಮತ್ತು ವಾಯು ಕ್ಷೇತ್ರದ ಉತ್ಪಾದನಾ ವಲಯದ ಪಾಲು ದೇಶಕ್ಕೆ ರಾಜ್ಯದಿಂದ ಹೆಚ್ಚಿನದಾಗಿದೆ. ಇಲ್ಲಿ ಹೆಚ್ಚಿನ ಹೆಲಿಕಾಪ್ಟರ್‍ಗಳನ್ನು ಉತ್ಪಾದಿಸಲಾಗುತ್ತಿದೆ. ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ರಾಜ್ಯ ಮುಂದಿದ್ದು, 500ಕ್ಕೂ ಹೆಚ್ಚು ಕಂಪನಿಗಳಿವೆ. ಜೈವಿಕ ತಂತ್ರಜ್ಞಾನದಲ್ಲೂ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ಇತ್ತೀಚೆಗೆ ರಕ್ಷಣೆ, ಬಾಹ್ಯಾಕಾಶ ಕ್ಷೇತ್ರದಲ್ಲೂ ದಾಪುಗಾಲಿಟ್ಟಿದೆ ಎಂದರು.

‘ಹಿಂದೂ’ ನಂತರ ‘ಸಾಂಭಾಜಿ’ ವಿವಾದಲ್ಲಿ ಸತೀಶ್ ಜಾರಕಿಹೊಳಿ

ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರದಿಂದ ಹಲವು ಕ್ಷೇತ್ರಗಳಲ್ಲಿ ಸುಧಾರಣೆಯಾಗಿದೆ. ಭೌತಿಕ ಹಾಗೂ ಡಿಜಿಟಲ್ ಮೂಲಸೌಕರ್ಯ ಬೇರೆಯೆ ಹಂತಕ್ಕೆ ಬಡ್ತಿ ಪಡೆದಿದೆ. ಡಿಜಿಟಲ್ ಪಾವತಿ ಕಲ್ಪನಾತೀತ ವೇಗದಲ್ಲಿ ಬೆಳೆದಿದೆ. 5ಜಿ ತಂತ್ರಜ್ಞಾನ ಅವಕಾಶಗಳ ಹೆಬ್ಬಾಗಿಲನ್ನೇ ತೆರೆರಿದೆ ಎಂದರು.

ಈ ಹಿಂದಿನ ಸರ್ಕಾರಗಳು ಈ ವೇಗದ ಅಭಿವೃದ್ಧಿಯ ಬಗ್ಗೆ ಚಿಂತನೆ ನಡೆಸಿರಲಿಲ್ಲ ಅವರ ಆಲೋಚನಾ ಕ್ರಮಗಳು ಹಳೆಯದಾಗಿದ್ದವು. ಅತಿವೇಗ ಅಪಾಯ ಎಂದು ಅವರ ಭಾವಿಸಿದ್ದರು. ನಾವು ವೇಗವನ್ನು ಆಕಾಂಕ್ಷೆ ಮತ್ತು ಶಕ್ತಿ ವರ್ಧನೆಗೆ ಬಳಸಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.

ಬಡವರ ಮನೆ ನಿರ್ಮಾಣದಲ್ಲೂ ಕೂಡ ಹೆಚ್ಚಿನ ಪ್ರಗತಿಯಾಗಿದೆ. ಸಾರಿಗೆ ಸೌಲಭ್ಯ ಸುಧಾರಣೆಗಾಗಿ ಸರಕು ಸಾಗಾಣಿಕಾ ನೀತಿಯನ್ನು ರೂಪಿಸಿದ್ದು, ವೆಚ್ಚವನ್ನುತಗ್ಗಿಸಲಾಗಿದೆ. ಮೂಲ ಸೌಲಭ್ಯದ ಜೊತೆ ಸಾಮಾಜಿಕ ಸಂಪನ್ಮೂಲವೂ ಅಭಿವೃದ್ಧಿಯಾಗಬೇಕೆಂಬ ಸಿದ್ದಾಂತದೊಂದಿಗೆ ಡಬಲ್ ಇಂಜಿನ್ ಸರ್ಕಾರ ನಿರ್ಣಯ ಕೈಗೊಳ್ಳುತ್ತಿದೆ.

ಆಯುಷ್ಮಾನ್ ಭಾರತ್, ಕೃಷಿ ಸನ್ಮಾನ್ ಯೋಜನೆಯಡಿ ರಾಜ್ಯದ ಲಕ್ಷಾಂತರ ಜನರು ಪ್ರಯೋಜನ ಪಡೆದುಕೊಂಡಿದ್ದಾರೆ.ಸಾಂಸ್ಕøತಿಕ ಮತ್ತು ಆಧ್ಯಾತ್ಮಿಕ ಸಮ್ಮಿಳಿತದಿಂದ ಏಕ್ ಭಾರತ್ ಶ್ರೇಷ್ಠ ಭಾರತ್‍ಗೆ ಬಲ ಬಂದಿದೆ.

ಕನಕದಾಸರು ರಾಮಧಾನ್ಯ ಚರಿತೆಯಲ್ಲಿ ರಾಗಿಯನ್ನು ಪ್ರಸ್ತಾಪಿಸುವ ಮೂಲಕ ಸಿರಿಧಾನ್ಯದ ಪ್ರಾಮುಖ್ಯತೆಯನ್ನು ವಿವರಿಸಿದ್ದಾರೆ ಎಂದರು. ಕೆಂಪೇಗೌಡರ ಆಶಯದಂತೆ ಬೆಂಗಳೂರು ಅದ್ವಿತೀಯವಾಗಿ ಬೆಳೆಯಲಿದೆ. ಇದಕ್ಕೆ ಎಲ್ಲ ಸಹಕಾರ ಅಗತ್ಯ ಎಂದು ಮೋದಿ ಹೇಳಿದರು.

Articles You Might Like

Share This Article