ಅಹಮದಾಬಾದ್, ಮಾ.9- ಅಂತರ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಕ್ರಿಕೆಟ್ ಈಗ ರಾಜತಾಂತ್ರಿಕತೆಯಾಗಿ ಬೆಳೆದಿದ್ದು, ವಿದ್ಯಾರ್ಥಿಗಳಿಗೂ ಕ್ರಿಕೆಟ್ ಮೈದಾನದಲ್ಲಿನ ಕೆಲವು ಸಂಗತಿಗಳು ಸೂರ್ತಿದಾಯಕವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಐಸಿಸಿ ಅಯೋಜನೆಯ 2ನೇ ವಿಶ್ವ ಟೆಸ್ಟ್ ಚಾಂಪಿಯನ್‍ಷಿಪ್ ಟೂರ್ನಿಯ ಫೈನಲ್ ಹಂತ ತಲುಪಲು ನಿರ್ಣಾಯಕವಾಗಿರುವ ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯ ಅಂತಿಮ ಹಾಗೂ 4ನೇ ಟೆಸ್ಟ್ ಪಂದ್ಯವನ್ನು ಮೋದಿ, ಆಸ್ಟ್ರೇಲಿಯಾದ ಪ್ರಧಾನಿ ಅಂಥೋನಿ ಅಲ್ಬನೆಸೆ ಅವರೊಂದಿಗೆ ಅಹಮದಾಬಾದ್‍ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯವನ್ನು ನೇರವಾಗಿ ವೀಕ್ಷಿಸುವ ಮೂಲಕ ಪ್ರೇಕ್ಷಕರಿಂದ ಮೆಚ್ಚುಗೆಗೆ ಪಾತ್ರರಾದರು.
ಈ ನಡುವೆ ನರೇಂದ್ರ ಮೋದಿ ಅವರು 2016ರಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ವೇಳೆ ನ್ಯೂಜಿಲೆಂಡ್‍ನ ಪ್ರಧಾನಿಯಾಗಿದ್ದ ಜಾನ್ ಕೇಯೊಂದಿಗೆ ನಡೆದಿದ್ದ ಪತ್ರಿಕಾಗೋಷ್ಠಿಯಲ್ಲಿ ನರೇಂದ್ರ ಮೋದಿ ಅವರು ಭಾರತೀಯ ಬ್ಯಾಟ್ಸ್‍ಮನ್‍ಗಳ ಆಕ್ರಮಣಕಾರಿ ಆಟ ವಿದ್ಯಾರ್ಥಿಗಳಿಗೆ ಸೂರ್ತಿದಾಯಕವಾಗಿರುತ್ತದೆ ಎಂದು ಹೇಳಿರುವ ಹೇಳಿಕೆಯೂ ವೈರಲ್ ಆಗಿದೆ.
ಪಾಕ್ ಮೇಲೆ ದಾಳಿಗೆ ಸಜ್ಜಾಗಿದೆ ಭಾರತ : ಅಮೆರಿಕ ಗುಪ್ತಚರ ಇಲಾಖೆ ಎಚ್ಚರಿಕೆ
ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವೆ ನಡೆಯುತ್ತಿರುವ ಕ್ರಿಕೆಟ್ ಪಂದ್ಯದಿಂದ ಎರಡು ದೇಶಗಳು ರಾಜತಾಂತ್ರಿಕವಾಗಿ ಉತ್ತಮ ಸಂಬಂಧವೊಂದಲು ಕಾರಣವಾಗುತ್ತದೆ ಎಂದು ಮೋದಿ ಹೇಳಿದ್ದರು.
ಕ್ರಿಕೆಟ್ ಎರಡು ದೇಶಗಳ ಸಂಬಂಧಗಳನ್ನು ಪ್ರತಿಬಿಂಬಿಸುತ್ತದೆ. ಬ್ಯಾಟಿಂಗ್ ಪಿಚ್‍ನಲ್ಲಿ ರಕ್ಷಣಾತ್ಮಕ ಆಟವಾಡಿದರೆ ರನ್ ಹೊಳೆ ಹರಿಸಲು ದಾರಿ ಆಗುತ್ತದೆ, ಅದೇ ರೀತಿ ಫೀಲ್ಡಿಂಗ್‍ನಲ್ಲಿ ಕಾರ್ಯತಂತ್ರ ರೂಪಿಸಿದರೆ ರನ್‍ಗಳನ್ನು ಸುಲಭವಾಗಿ ತಡೆಯಬಹುದು' ಎಂದು ನರೇಂದ್ರ ಮೋದಿ ಹೇಳಿದ್ದರು.
ಮಾಲ್ಡೀವ್ಸ್ ಅಧ್ಯಕ್ಷರಿಗೆ ಬ್ಯಾಟ್ ಗಿಫ್ಟ್ ನೀಡಿದ್ದ ಮೋದಿ: 2019ರಲ್ಲೂ ಕೂಡ ಪ್ರಧಾನಿ ನರೇಂದ್ರ ಮೋದಿ ಅವರು ಮಾಲ್ಡೀವ್ಸ್‍ಗೆ ಭೇಟಿ ನೀಡಿದ್ದ ವೇಳೆ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೋಹಿಲ್ ಅವರಿಗೆ 2019ರ ಅಂಡರ್ 19 ವಿಶ್ವಕಪ್ ಗೆದ್ದಿದ್ದ ಆಟಗಾರರ ಸಹಿಯುಳ್ಳ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡುವ ಮೂಲಕ ಕ್ರಿಕೆಟ್ ಮೂಲಕ ಎರಡು ದೇಶಗಳ ಸಂಬಂಧ ಮತ್ತಷ್ಟು ಸದೃಢಗೊಳ್ಳುತ್ತದೆ ಎಂದ ಆಶಾಭಾವನೆಯನ್ನು ವ್ಯಕ್ತಪಡಿಸಿದ್ದರು.
“ಪ್ರಭಾವಿಗಳ ಪಾಲಾಗಿದೆ ಬಿಡಿಎಗೆ ಸೇರಿದ 1ಸಾವಿರ ಕೋಟಿ ಬೆಲೆಯ ಅಸ್ತಿ”
ನನ್ನ ಆತ್ಮೀಯ ಗೆಳೆಯರಾಗಿರುವ ಮಾಲ್ಡೀವ್ಸ್ ಅಧ್ಯಕ್ಷರಾದ ಇಬ್ರಾಹಿಂ ಮೊಹಮ್ಮದ್ ಅವರು ಅಪ್ಪಟ ಕ್ರಿಕೆಟ್ ಪ್ರೇಮಿಯಾಗಿದ್ದು ಅವರಿಗೆ ಅಂಡರ್ 19 ವಿಶ್ವಕಪ್ ಗೆದ್ದ ಆಟಗಾರರು ಸಹಿ ಮಾಡಿರುವ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಿದ್ದೇನೆ’ ಎಂದು ಟ್ವಿಟ್ ಮಾಡಿದ್ದರು.
ಪ್ರಧಾನಿ ಮೋದಿ ಅವರು ಕ್ರಿಕೆಟ್ ಅನ್ನು ರಾಜತಾಂತ್ರಿಕ ದೃಷ್ಟಿಯಿಂದವಲ್ಲದೆ ವಿದ್ಯಾರ್ಥಿಗಳಿಗೆ ಸೂರ್ತಿಯಾಗುವ ನುಡಿಗಳನ್ನು ಆಡಿದ್ದರು.
ಮೋದಿ ಅವರು ಅಧ್ಯಕ್ಷ ಇಬ್ರಾಹಿಂಗೆ ಬ್ಯಾಟ್ ಉಡುಗೊರೆ ನೀಡಿದ ನಂತರ ಮಾಲ್ಡೀವ್ಸ್ ಕೂಡ ತನ್ನದೇ ಸ್ವಂತ ತಂಡವನ್ನು ಕಟ್ಟಲು ಪ್ರೇರಣೆಯಾಗಿದ್ದು, ಇಂದು ವಿಶ್ವ ಮಟ್ಟದ ಕ್ರಿಕೆಟ್ ತಂಡಕ್ಕೆ ಪೈಪೆÇೀಟಿ ನೀಡುವ ಮಟ್ಟಕ್ಕೆ ಬೆಳೆದಿದೆ.
ದ್ರಾವಿಡ್, ಲಕ್ಷ್ಮಣ್ ಜೊತೆಯಾಟ ಸ್ಮರಿಸಿದ್ದ ಪ್ರಧಾನಿ:
2022ರ ಜನವರಿಯಲ್ಲಿ ವಿದ್ಯಾರ್ಥಿ ಗಳೊಂದಿಗೆ ಹಮ್ಮಿಕೊಂಡಿದ್ದ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿ,ಒಬ್ಬ ಬ್ಯಾಟ್ಸ್‍ಮನ್ ಕ್ರಿಕೆಟ್ ಕಡೆ ತಮ್ಮ ಗಮನ ಹರಿಸುವುದರಿದ ಉತ್ತಮ ಆಟವಾಡಲು ಸಹಕಾರಿಯಾಗಿ ಬೌಂಡರಿ, ಸಿಕ್ಸರ್ ಸುರಿಮಳೆ ಸುರಿಸುತ್ತಾರೆ, ಅದೇ ರೀತಿ ವಿದ್ಯಾರ್ಥಿಗಳು ಕೂಡ ತಮಗೆ ಎದುರಾಗುವ ಸಮಸ್ಯೆಗಳತ್ತ ಗಮನ ಹರಿಸದೆ ಓದಿನತ್ತಲೇ ಚಿತ್ತ ಹರಿಸಿದರೆ ಸುಲಭವಾಗಿ ಪರೀಕ್ಷೆಯಲ್ಲಿ ಉತ್ಕøಷ್ಟ ಅಂಕ ಗಳಿಸಬಹುದು' ಎಂದು ಕರೆ ನೀಡಿದ್ದರು.
2020ರಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲೂ ಕೂಡ ನರೇಂದ್ರ ಮೋದಿ ಅವರು ರಾಹುಲ್ ದ್ರಾವಿಡ್ ಹಾಗೂ ವಿವಿಎಸ್ ಲಕ್ಷಣ್‍ರವರ ದಾಖಲಾರ್ಹ ಜೊತೆಯಾಟ ಹಾಗೂ ಅನಿಲ್‍ಕುಂಬ್ಳೆ ಅವರು ದವಡೆಗೆ ಪೆಟ್ಟು ಬಿದ್ದರೂ ಕೂಡ ಆಡುವ ಮೂಲಕ ಕ್ರೀಡಾಸೂರ್ತಿ ಮೆರೆದಿದ್ದನ್ನು ಮೋದಿ ಸ್ಮರಿಸಿದ್ದರು.
ಮನಬಂದತೆ ನುಗ್ಗಿದ ಎಸ್‍ಯುವಿ ; ಇಬ್ಬರು ಸಾವು, 8 ಮಂದಿಗೆ ಗಾಯ
2001ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲುತ್ತಿದ್ದ ಪಂದ್ಯದಲ್ಲಿ ಕನ್ನಡಿಗ ರಾಹುಲ್ ದ್ರಾವಿಡ್ ಹಾಗೂ ವಿವಿಎಸ್ ಲಕ್ಷ್ಮಣ್ ಅವರು 376 ರನ್‍ಗಳ ಉಪಯುಕ್ತ ಜೊತೆಯಾಟವಾಡುವ ಮೂಲಕ ತಂಡವನ್ನು ಸೋಲಿನಿಂದ ಪಾರು ಮಾಡಿದ್ದರು ಎಂಬುದನ್ನು ಉದಾಹರಣೆ ನೀಡಿ, ಮಕ್ಕಳು ಕೂಡ ತಮ್ಮೊಳಗಿರುವ ಶಕ್ತಿಯನ್ನು ಹೊರಹೊಮ್ಮಿಸುವ ಮೂಲಕ ಪ್ರಗತಿ ಸಾಸಬೇಕೆಂದು’ ಕರೆ ನೀಡಿದ್ದರು.
ಕುಂಬ್ಳೆ ಕ್ರೀಡಾಸೂರ್ತಿಗೆ ಮೋದಿ ಸಲಾಂ:
2002ರಲ್ಲಿ ಅನಿಲ್‍ಕುಂಬ್ಳೆ , ಆಂಟಿಗುವಾದಲ್ಲಿ ವೆಸ್ಟ್‍ಇಂಡೀಸ್ ವಿರುದ್ಧ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ದವಡೆಗೆ ಗಾಯವಾಗಿದ್ದರೂ ಕೂಡ ಅದನ್ನು ಲೆಕ್ಕಿಸದೆ ಉತ್ತಮ ಬೌಲಿಂಗ್ ಸ್ಪೆಲ್ ಮಾಡಿ ಪಂದ್ಯದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದರು ಎಂದು ಕೊಂಡಾಡಿದ್ದರು.
PM Modi, uses, cricket, diplomacy, connect, students,