ರಾಧಸ್ವಾಮಿ ಸತ್ಸಂಗ್ ಬಿಯಾಸ್ ನಲ್ಲಿ ಪ್ರಧಾನಿ ಮೋದಿ

Social Share

ಅಮೃತಸರ,ನ.5- ಪ್ರಧಾನಿ ನರೇಂದ್ರಮೋದಿ ಶನಿವಾರ ಅಮೃತಸರದ ಸಮೀಪ ಇರುವ ರಾಧಸ್ವಾಮಿ ಸತ್ಸಂಗ್ ಬಿಯಾಸ್(ಆರ್‍ಎಸ್‍ಎಸ್‍ಬಿ) ಭೇಟಿ ನೀಡಿ ಪ್ರಮುಖ ಧಾರ್ಮಿಕ ಗುರು ಗುರಿಂದರ್ ಸಿಂಗ್ ದಿಲೋನ್‍ರನ್ನು ಭೇಟಿಯಾಗಿದ್ದಾರೆ.

ಬಳಿಕ ಡೇರಾ ಸಮುದಾಯ ಅಡುಗೆ ಮನೆಗೆ ಭೇಟಿ ನೀಡಿ ಅಲ್ಲಿ ಮಹಿಳೆಯರ ಜೊತೆ ಸಂವಾದ ನಡೆಸಿದ್ದು, ಚಪಾತಿ ಲಟ್ಟಿಸಿದ್ದಾರೆ. ತರಕಾರಿಗಳನ್ನು ಹಚ್ಚಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹುಲಿ ಎಂದೂ ಹುಲ್ಲು ತಿನ್ನಲ್ಲ : ಸ್ವಪಕ್ಷೀಯರ ವಿರುದ್ಧವೇ ರೆಡ್ಡಿ ಕೆಂಡಾಮಂಡಲ

ಆರ್‍ಎಸ್‍ಎಸ್‍ಬಿ ಪ್ರಧಾನಿಯವರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸಮಯ ಕಳೆದಿದ್ದಾರೆ. ನಿನ್ನೆ ಟ್ವೀಟ್ ಮಾಡಿದ ಪ್ರಧಾನಿಯವರು ಬಾಬ ಗುರಿಂದರ್ ಸಿಂಗ್ ಗಿಲೋನ್ ಅವರು ಆರ್‍ಎಸ್‍ಎಸ್‍ಬಿ ಮೂಲಕ ಸಮುದಾಯ ಸೇವೆಯಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸಂಸ್ಥೆಯ ಅನುಯಾಯಿಗಳು ರಾಷ್ಟ್ರಾದ್ಯಂತ ಇದ್ದು ಪಂಜಾಬ್, ಹರಿಯಾಣ, ಹಿಮಾಚಲಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಳೆದ ಫೆಬ್ರವರಿಯಲ್ಲಿ ದಿಲೋನ್ ಅವರು ದೆಹಲಿಯಲ್ಲಿ ಪ್ರಧಾನಿಯವರನ್ನು ಭೇಟಿ ಮಾಡಿದ್ದರು. ಪ್ರಧಾನಿ ಇಂದು ಹಿಮಾಚಲ ಪ್ರದೇಶಕ್ಕೆ ಹೋಗಿ ವಿಧಾನಸಭೆ ಚುನಾವಣೆಯ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ.

Articles You Might Like

Share This Article