ಗಣರಾಜ್ಯೋತ್ಸವ : ಫ್ರೆಂಚ್ ಪ್ರಧಾನಿ ಮ್ಯಾಕ್ರಾನ್ ಶುಭಾಶಯಕ್ಕೆ ಮೋದಿ ವಂದನೆ

Social Share

ನವದೆಹಲಿ, ಜ.27- ಫ್ರೆಂಚ್ ಪ್ರಧಾನಿ ಇಮ್ಯಾನ್ಯುಯೆಲ್ ಮ್ಯಾಕ್ರಾನ್ ಅವರು ಭಾರತಕ್ಕೆ ಗಣರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ವಂದನೆ ತಿಳಿಸಿದ್ದಾರೆ. ಭಾರತ ಮತ್ತು ಫ್ರಾನ್ಸ್‍ನ ಕಾರ್ಯತಂತ್ರ ಸಹಭಾಗಿತ್ವದ ವರ್ಧನೆಗೆ ಮತ್ತು ಮುಕ್ತ ಹಾಗೂ ಶಾಂತಿಯುತ ಇಂಡೋ-ಪೆಸಿಫಿಕ್ ಪ್ರಾಂತ್ಯ ನಿರ್ಮಾಣಕ್ಕೆ ಜಂಟಿ ಕಾರ್ಯನಿರ್ವಹಣೆಗೆ ಎದುರು ನೋಡುತ್ತಿರುವುದಾಗಿ ಮೋದಿ ಹೇಳಿದ್ದಾರೆ.
ಮ್ಯಾಕ್ರಾನ್ ಅವರು ಭಾರತದ 73ನೆ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಪ್ರಧಾನಿ ಮೋದಿ ಮತ್ತು ದೇಶದ ಜನತೆಗೆ ತಮ್ಮ ಫೇಸ್‍ಬುಕ್ ಪೇಜ್‍ನಲ್ಲಿ ಹಿಂದಿ ಭಾಷೆಯಲ್ಲಿ ಶುಭಾಶಯ ಸಂದೇಶ ಪೋಸ್ಟ್ ಮಾಡಿದ್ದರು. ಇಂಡೋ-ಪೆಸಿಫಿಕ್ ಆಶೋತ್ತರಗಳು ಮತ್ತು ಜಂಟಿ ಯೋಜನೆಗಳು ಮುಂದುವರೆಯುತ್ತದೆ ಎಂದು ಅವರು ಹೇಳಿದ್ದರು. ಮೋದಿ ಅವರು ಮ್ಯಾಕ್ರಾನ್ ಅವರ ಸಂದೇಶಕ್ಕೆ ಹಿಂದಿ ಭಾಷೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.

Articles You Might Like

Share This Article