ಪರಿಸರ ಸ್ನೇಹಿ ಧರಿಸಿನೊಂದಿಗೆ ಸಂಸತ್ ಕಲಾಪದಲ್ಲಿ ಪ್ರಧಾನಿ ಭಾಗಿ

Social Share

ನವದೆಹಲಿ,ಫೆ.8- ಸಂಸತ್ ಸುಗಮ ಕಲಾಪ ನಡುತ್ತಿರುವ ನಡುವೆ ರಾಷ್ಟ್ರಪತಿ ಅವರ ಭಾಷಣದ ಮೇಲೆ ನಡೆಯುತ್ತಿರುವ ಚರ್ಚೆಗೆ ಉತ್ತರಿಸಲು ಆಗಮಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಧರಿಸಿದ ಜಾಕೇಟ್ ಗಮನ ಸೆಳೆದಿದೆ.

ರಾಷ್ಟ್ರಪತಿಗಳು ಸಂಸತ್‍ನ ಉಭಯ ಸದನಗಳನ್ನು ಉದ್ದೇಶಿಸಿ ವರ್ಷದ ಆರಂಭದಲ್ಲಿ ನಡೆದ ಕಲಾಪದಲ್ಲಿ ಭಾಷಣ ಮಾಡಿದರು. ಅದರ ಮೇಲೆ ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್‍ಗಾಂಧಿ, ಡಿಎಂಕೆ ಸಂಸದರೆ ಕನ್ನಿಮೋಳಿ, ತೃಣಮೂಲ ಕಾಂಗ್ರೆಸ್‍ನ ಮಹುವಾ ಮಿತ್ರ ಚರ್ಚೆ ಮಾಡಿ ಕೇಂದ್ರ ಸರ್ಕಾರ ಮತ್ತು ಪ್ರಧಾನಿಯವರನ್ನು ಟೀಕಿಸಿದ್ದರು.

ಭಯೋತ್ಪಾದಕರ ಸುಳಿವು ನೀಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನ

ಸರ್ಕಾರದ ಪರವಾಗಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿದ್ದಾರೆ. ಒಟ್ಟು ಚರ್ಚೆಗೆ 12 ಗಂಟೆ ಮೀಸಲಿರಿಸಲಾಗಿತ್ತು. ಇದಕ್ಕೆ ಉತ್ತರಿಸಲು ಪ್ರಧಾನಿ ಇಂದು ಸಂಸತ್‍ಗೆ ಆಗಮಿಸಿದ್ದರು. ಆ ವೇಳೆ ಅವರು ಪರಿಸರ ಸ್ನೇಹಿ ಜಾಕೆಟ್ ಧರಿಸಿದ್ದರು.

ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಭಾರತೀಯ ಇಂಧನ ಸಪ್ತಾಹದಲ್ಲಿ ಪ್ರಧಾನಿ ಅವರು ಇಂಡಿಯನ್ ಆಯಿಲ್ ಕಂಪೆನಿ ಮರುಬಳಕೆಯ ಪ್ಲಾಸ್ಟಿಕ್ ಬಾಟಲ್‍ಗಳಲ್ಲಿ ತಯಾರಿಸಿದ ಉಡುಪನ್ನು ಬಿಡುಗಡೆ ಮಾಡಿದ್ದರು.

ಆ ಉಡುಪುಗಳು ಪರಿಸರ ಸ್ನೇಹಿಯಾಗಿದ್ದು ಇಂಡಿಯನ್ ಆಯಿಲ್ ಕಂಪೆನಿ ತನ್ನ ವಿತರಣಾ ಸೇವಾ ಸಿಬ್ಬಂದಿಯ ಬಳಕೆಗೆ ಪರಿಚಯಿಸಿದೆ. ಯುದ್ಧ ಕಾಲದಲ್ಲಿ ಅಲ್ಲದ ಸೇವೆಯಲ್ಲಿ ತೊಡಗಿರುವ ಸೇನೆಯ ಯೋಧರಿಗೂ ಈ ಸಮವಸ್ತ್ರಗಳನ್ನು ಬಳಸಲು ಪೂರೈಸಲಾಗುತ್ತಿದೆ. ಶಿಸೆ ರಹಿತ ಈ ಉಡುಪುಗಳು ಪರಿಸರ ಸ್ನೇಹಿ ಎಂದು ಹೇಳಲಾಗಿದೆ.

ಚುನಾವಣೆಗೆ ಬಿಜೆಪಿ ತಯಾರಿ: ಪ್ರಣಾಳಿಕೆ, ಪ್ರಚಾರಕ್ಕಾಗಿ ಉಸ್ತುವಾರಿಗಳ ನೇಮಕ

ನೀಲಿ ಬಣ್ಣದ ಪರಿಸರ ಸ್ನೇಹಿತ ಸದ್ರಿ ಜಾಕೆಟ್ ಅನ್ನು ಧರಿಸಿ ಇಂದು ಪ್ರಧಾನಿ ನರೇಂದ್ರ ಮೋದಿ ಧರಿಸಿ ಸಂಸತ್ ಕಲಾಪದಲ್ಲಿ ಭಾಗಿಯಾಗಿದ್ದರು.

PM Modi, wears, jacket, made, recycling, plastic, bottles,

Articles You Might Like

Share This Article