ಮಕರ ಸಂಕ್ರಾಂತಿ, ಪ್ರಧಾನಿ ಮೋದಿ ಶುಭಾಶಯ

Social Share

ನವದೆಹಲಿ, ಜ.14- ಬೆಳೆಕೊಯ್ಲು ಋತು ಮತ್ತು ಸೂರ್ಯನ ಉತ್ತರಾಭಿಮುಖ ಪಯಣಕ್ಕೆ ಸಂಬಂಧಿಸಿದ ವಿವಿಧ ಹಬ್ಬಗಳ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರದ ಜನತೆಗೆ ಶುಭ ಕೋರಿದ್ದಾರೆ. ಭಾರತದಾದ್ಯಂತ ಜನತೆ ವಿವಿಧ ಹಬ್ಬಗಳನ್ನು ಆಚರಿಸುತ್ತಿದ್ದು, ದೇಶದ ಶ್ರೀಮಂತ ಸಾಂಸ್ಕøತಿಕ ವೈವಿಧ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದ್ದಾರೆ.
ಪೊ0ಗಲ್ ಹಬ್ಬವು ತಮಿಳುನಾಡಿನ ಸಾಂಸ್ಕøತಿಕ ವೈಭವದ ಪ್ರತೀಕವಾಗಿದೆ. ಈ ವಿಶೇಷ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಮತ್ತು ವಿಶೇಷವಾಗಿ ಜಗತ್ತಿನೆಲ್ಲೆಡೆ ಹರಡಿರುವ ತಮಿಳು ಜನತೆಗೆ ನನ್ನ ಶುಭಕಾಮನೆಗಳು. ಪ್ರಕೃತಿಯೊಂದಿಗೆ ನಮ್ಮ ಬಾಂಧವ್ಯ ಮತ್ತು ನಮ್ಮ ಸಮಾಜದಲ್ಲಿನ ಭ್ರಾತೃತ್ವದ ಸೂರ್ತಿ ಆಳವಾಗಲೆಂದು ಹಾರೈಸುವೆ ಎಂದು ಮೋದಿ ಟ್ವಿಟ್ ಮಾಡಿದ್ದಾರೆ.
ನಿಮ್ಮೆಲ್ಲರಿಗೂ ಮಾಘ ಬಿಹು ಶುಭಾಶಯಗಳು. ಈ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಈ ವಿಶೇಷ ಉತ್ಸವವು ನಮ್ಮ ಸಮಾಜದಲ್ಲಿ ಸಂತೋಷದ ಸೂರ್ತಿಯನ್ನು ಶ್ರೀಮಂತಗೊಳಿಸಲಿ. ನಮ್ಮ ಪ್ರಜೆಗಳಿಗೆ ಉತ್ತಮ ಆರೋಗ್ಯ ಮತ್ತು ಸುಖ-ಸಂತೋಷಗಳು ಲಭಿಸಲಿ ಎಂದು ನಾನು ಪ್ರಾರ್ಥನೆ ಮಾಡುತ್ತೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಮಕರ ಸಂಕ್ರಾಂತಿ ಮತ್ತು ಉತ್ತರಾಯಣ ಪುಣ್ಯಕಾಲದ ಸಂದರ್ಭದಲ್ಲಿಯೂ ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.

Articles You Might Like

Share This Article