ಪ್ರಧಾನಿ ಮೋದಿ ಮನ್ ಕೀ ಬಾತ್ ಕಾರ್ಯಕ್ರಮದ ಹೈಲೈಟ್ಸ್

Social Share

ನವದೆಹಲಿ,ಜ.29- ಯೋಗ ಮತ್ತು ಸಿರಿಧಾನ್ಯಬಳಕೆಯನ್ನು ತಮ್ಮ ಜೀವನಶೈಲಿಗೆ ಅಳವಡಿಸಿಕೊಳ್ಳಬೇಕು ಎಂದು ಜನತೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದಾರೆ. ಆಕಾಶವಾಣಿಯಲ್ಲಿ ಇಂದು ತಮ್ಮ 97ನೇ ಆವೃತ್ತಿಯ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಸಿರಿಧಾನ್ಯಗಳ ಮಹತ್ವ ,ಹವಾಮಾನ ಬದಲಾವಣೆ, ಇತ್ಯಾಜ್ಯ ಗಂಭೀರ ಸಮಸ್ಯೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ರಾಗಿ ಸೇರಿದಂತೆ ಸಿರಿಧಾನ್ಯಗಳು ಜನರ ಆರೋಗ್ಯ ಹೆಚ್ಚಿಸುತ್ತದೆ,ತಮ್ಮ ಆರೋಗ್ಯಪಾಲನೆಗೆ ಸಿರಿಧಾನ್ಯಗಳ ಸೇವನೆಗೆ ಹೆಚ್ಚು ಒತ್ತುಕೊಡಬೇಕು ಎಂದರು.

ಭಾರತದ ಮನವಿ ಮೇರೆಗೆ ವಿಶ್ವಸಂಸ್ಥೆಯು ಅಂತಾರಾಷ್ಟ್ರೀಯ ಯೋಗ ದಿನ ಮತ್ತು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷದ ಆಚರಣೆಯನ್ನು ಘೋಷಿಸಿದೆ ಎಂದು ಹೇಳಿದ ಅವರು , ದೇಶದ ವಿವಿಧೆಡೆ ಇರುವ ಸಿರಿಧಾನ್ಯ ಉದ್ಯಮಿಗಳ ಶ್ರಮವನ್ನು ಶ್ಲಾಘಿಸಿದರು. ಕಲಬುರ್ಗಿಯ ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಮಿಲೆಟï, ಬೀದರ್‍ನ ಹುಲ್ಸೂರು ಮಹಿಳಾ ಕಿಸಾನ್ ಮಿಲೆಟ್ ಕಂಪನಿಯ ಕಾರ್ಯಗಳನ್ನೂ ಪ್ರಸ್ತಾಪಿಸಿ ಹೊಗಳಿದರು.

ಹಾಗೆಯೇ, ಭಾರತದಲ್ಲಿ ನಡೆಯುತ್ತಿರುವ ಜಿ20 ಸಭೆ ಕಾರ್ಯಕ್ರಮಗಳಲ್ಲಿ ಸಿರಿಧಾನ್ಯಯುಕ್ತ ಆಹಾರಗಳನ್ನು ತಯಾರಿಸಿ ಕೊಡಲಾಗುತ್ತಿದೆ ಎಂದ ಅವರು ರಾಗಿ ಪಾಯಸ ಮೊದಲಾದ ಖಾದ್ಯಗಳನ್ನು ಉಲ್ಲೇಖಿಸಿದರು.

ದೇಶದ ಹಲವೆಡೆ ವಿವಾದಾತ್ಮಕ ಬಿಬಿಸಿ ಸಾಕ್ಷ್ಯ ಚಿತ್ರ ಪ್ರದರ್ಶನಕ್ಕೆ ಪ್ರಯತ್ನ

ಪದ್ಮಪ್ರಶಸ್ತಿ ವಿಜೇತರಿಗೆ ಶುಭಾಶಯಗಳನ್ನು ತಿಳಿಸುವ ಜೊತೆಗೆ ಈ ಬಾರಿ ಹವಾಮಾನ ಬದಲಾವಣೆಯಿಂದ ಪರಸರದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮದ ಬಗ್ಗೆ ಜನಜಾಗೃತಿ ಅಗತ್ಯವಾಗಿದೆ ಪ್ರಕೃತಿಯನ್ನು ರಕ್ಷಿಸುವ ಜವಾಬ್ಬಾರಿ ಎಲ್ಲರ ಮೇಲಿದೆ ಎಂದರು ಭಾರತದಲ್ಲಿ ತಯಾರಾಗುತ್ತಿರುವ ಎಲೆಕ್ಟ್ರಾನಿಕ್ ತ್ಯಾಜ್ಯಗಳು ಪರಿಸರಕ್ಕೆ ಮಾರಕವಾಗಿದೆ, ಇವೇಸ್ಟ್ ,ರೀಸೈಕ್ಲಿಂಗ್ ಕಾರ್ಯಗಳಲ್ಲಿ ಬಹಳಷ್ಟು ಸಂಘ ಸಂಸ್ಥೆಗಳು ತೊಡಗಿಸಿಕೊಳ್ಳುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಪ್ರಜಾತಂತ್ರ ನಮ್ಮ ನರನಾಡಿಗಳಲ್ಲೇ ಇದೆ.

ನಮ್ಮ ಸಂಸ್ಕøತಿಯ ಭಾಗವಾಗಿದೆ. ಶತಮಾನಗಳ ಹಿಂದಿನಿಂದಲೂ ಪ್ರಜಾಪ್ರಭುತ್ವ ವ್ಯವಸ್ಥೆಯ ನಾಡು ಭಾರತವಾಗಿದೆ. ಸ್ವಾಭಾವಿಕವಾಗಿ ನಮ್ಮದು ಪ್ರಜಾಪ್ರಭುತ್ವದ ಸಮಾಜ ಎಂದು ದಿ ಮದರ್ ಆಫ್ ಡೆಮಾಕ್ರಸಿ ಪುಸ್ತಕದ ಬಗ್ಗೆ ,ಭಾರತದಲ್ಲಿ ಪ್ರಜಾತಂತ್ರದ ಭವ್ಯ ಇತಿಹಾಸದ ಬಗ್ಗೆ ಮಾತನಾಡಿದರು.

ಇದೇ ವೇಳೆ ಬಸವಣ್ಣರ ಅನುಭವ ಮಂಟಪವನ್ನೂಉ¯್ಲÉೀಖಿಸಿದರು. ಧರ್ಮೇಂದ್ರ ಪ್ರಧಾನ್ ಬರೆದಿರುವ ಇಂಡಿಯಾ: ದಿ ಮದರ್ ಆಫ್ ಡೆಮಾಕ್ರಸಿ ಪುಸ್ತಕವನ್ನು ಪ್ರತಿಯೊಬ್ಬ ಭಾರತೀಯರೂ ಓದಬೇಕು ಎಂದು ಕರೆ ನೀಡಿದರು.

ಗೋವಾರದಲ್ಲಿ ನಡೆದ ಪರ್ಪಲ್ ಫೆಸ್ಟಿವಲ್ ಅನ್ನು ಪ್ರಸ್ತಾಪಿಸಿ ದೇಶಾದ್ಯಂತ ಬಂದಿದ್ದ ವಿಕಲಚೇತನರು ವಿವಿಧ ಕ್ರೀಡೆ, ಮನರಂಜನೆಗಳಲ್ಲಿ ತೊಡಗಿಸಿಕೊಳ್ಳುವ ಅವಕಾಶ ಸಿಕ್ಕಿದ್ದನ್ನು ಮೋದಿ ಶ್ಲಾಘಿಸಿದರು.

#MannkiBaat, #PMModi, #innovators,

Articles You Might Like

Share This Article