ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾಬೆನ್ ಇನ್ನಿಲ್ಲ

Social Share

ನವದೆಹಲಿ,ಡಿ.30-ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಇಂದು ಮುಂಜಾನೆ ನಿಧನರಾಗಿದ್ದಾರೆ. 99 ವರ್ಷದ ಹೀರಾಬೆನ್ ಅವರು ಇಹಲೋಕ ತ್ಯಜಿಸುತ್ತಿದ್ದಂತೆ ಮೋದಿ ಅವರು ಟ್ವಿಟ್ ಮಾಡಿ ತಮ್ಮ ತಾಯಿಯ ಗುಣಗಾನ ಮಾಡಿದ್ದಾರೆ.

ನಿಸ್ವಾರ್ಥ ಕರ್ಮಯೋಗಿಯ ಸಂಕೇತ ಮತ್ತು ಮೌಲ್ಯಗಳಿಗೆ ಬದ್ಧವಾಗಿರುವ ಜೀವನವನ್ನು ಒಳಗೊಂಡಿರುವ ತ್ರಿಮೂರ್ತಿಗಳನ್ನು ನಾನು ಯಾವಾಗಲೂ ಧ್ಯಾನಿಸುತ್ತೇನೆ ಎಂದು ಪೋಸ್ಟ್ ಮಾಡಿ ತಮ್ಮ ತಾಯಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಬಂಗಾಳದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಬೇಕಿದ್ದ ಮೋದಿ ಅವರು ತಮ್ಮ ತಾಯಿಯ ನಿಧನ ವಾರ್ತೆ ತಿಳಿಯುತ್ತಿದ್ದಂತೆ ಗಾಂಧಿನಗರಕ್ಕೆ ಹಿಂತಿರುಗಿದ್ದಾರೆ. ಅಂತ್ಯಸಂಸ್ಕಾರ ಪೂರ್ಣಗೊಳ್ಳುತ್ತಿದ್ದಂತೆ ಪ್ರಧಾನಿಗಳು ವಿಡಯೋ ಕಾನರೆನ್ಸ್ ಮೂಲಕ ಬಂಗಾಳದ ನಿಗದಿತ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದಾರೆ ಎಂದು ಪಿಎಂಒ ಕಚೇರಿ ಟ್ವಿಟ್ ಮಾಡಿದೆ.

ತಾಯಿಯ ಪಾರ್ಥಿವ ಶರೀರ ಸಾಗಿಸಲು ಹೆಗಲು ಕೊಟ್ಟ 72 ಹರಯದ ಪ್ರಧಾನಿಗಳು ನಂತರ ಆಂಬ್ಯುಲೆನ್ಸ್‍ನಲ್ಲೇ ಅಂತ್ಯಸಂಸ್ಕಾರ ನೆರವೇರುವ ಸ್ಥಳಕ್ಕೆ ಆಗಮಿಸಿದರು.

ಈ ಕಷ್ಟದ ಸಮಯದಲ್ಲಿ ನಮ್ಮ ಜತೆಗೆ ನಿಂತ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಅಗಲಿದ ಆತ್ಮವನ್ನು ಅವರ ಆಲೋಚನೆಗಳಲ್ಲಿ ಇರಿಸಿಕೊಳ್ಳಲು ಮತ್ತು ಅವರ ಪೂರ್ವ ನಿರ್ಧಾರಿತ ವೇಳಾಪಟ್ಟಿ ಮತ್ತು ಬದ್ಧತೆಗಳೊಂದಿಗೆ ಮುಂದುವರಿಯಲು ತೀರ್ಮಾನಿಸುವ ಮೂಲಕ ಹೀರಾಬಾಗೆ ಸೂಕ್ತ ಗೌರವ ಸೂಚಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(30-12-2022)

ಹೀರಾಬೆನ್ ಅವರು ಪ್ರಧಾನಿ ಮೋದಿಯವರ ಕಿರಿಯ ಸಹೋದರ ಪಂಕಜ್ ಮೋದಿ ಅವರೊಂದಿಗೆ ಗಾಂನಗರ ಬಳಿಯ ರೈಸನ್ ಗ್ರಾಮದಲ್ಲಿ ವಾಸಿಸುತ್ತಿದ್ದರು. ಪ್ರಧಾನಿಯವರು ತಮ್ಮ ಗುಜರಾತ್ ಭೇಟಿಗಳಲ್ಲಿ ನಿಯಮಿತವಾಗಿ ರೇಸನ್‍ಗೆ ಭೇಟಿ ನೀಡುತ್ತಿದ್ದರು ಮತ್ತು ಅವರ ತಾಯಿಯೊಂದಿಗೆ ಸಮಯ ಕಳೆಯುತ್ತಿದ್ದರು.

ಈ ವರ್ಷದ ಜೂನ್‍ನಲ್ಲಿ ಪ್ರಧಾನಿ ಮೋದಿ ತಮ್ಮ ತಾಯಿಯ 99 ನೇ ಹುಟ್ಟುಹಬ್ಬದಂದು ಬ್ಲಾಗ್‍ನಲ್ಲಿ ತಮ್ಮ ತಾಯಿಯ ಜೀವನದ ವಿವಿಧ ವಿಚಾರಗಳನ್ನು ಹಂಚಿಕೊಂಡಿದ್ದರು. ಮುಂದಿನ ವರ್ಷ ನಮ್ಮ ತಾಯಿಯ ಜನ್ಮ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ. ನನ್ನ ತಂದೆ ಬದುಕಿದ್ದರೆ, ಅವರೂ ಕಳೆದ ವಾರ ತಮ್ಮ 100 ನೇ ಹುಟ್ಟುಹಬ್ಬವನ್ನು ಆಚರಿಸಬೇಕಿತ್ತು ಎಂದು ಸ್ಮರಿಸಿಕೊಂಡಿದ್ದರು.

ನನಗಿಂತ ತನ್ನ ತಾಯಿಯ ಬಾಲ್ಯವು ಅತ್ಯಂತ ಕಷ್ಟಕರವಾಗಿತ್ತು ಎಂದು ಬ್ಲಾಗ್‍ನಲ್ಲಿ ಹೇಳಿರುವ ಪ್ರಧಾನಿ, ಅವರು ತಮ್ಮ ಜೀವನದ ಆರಂಭದಲ್ಲಿಯೇ ತಾಯಿಯನ್ನು ಕಳೆದುಕೊಂಡಿದ್ದ ನೋವು ನನ್ನ ತಾಯಿಯನ್ನು ನಿರಂತರವಾಗಿ ಕಾಡುತಿತ್ತು ಎಂದು ಮೋದಿ ಬರೆದುಕೊಂಡಿದ್ದಾರೆ.

ಮನೆ ಖರ್ಚುಗಳನ್ನು ನಿಭಾಯಿಸಲು ನನ್ನ ತಾಯಿ ಕೆಲವು ಮನೆಗಳಲ್ಲಿ ಪಾತ್ರೆಗಳನ್ನು ತೊಳೆಯುತ್ತಿದ್ದರು. ಉಳಿದ ಸಮಯದಲ್ಲಿ ನಮ್ಮ ಅಲ್ಪ ಆದಾಯಕ್ಕೆ ಪೂರಕವಾಗಿ ಚರಕ ತಿರುಗಿಸುತ್ತ ತಮ್ಮ ಕುಟುಂಬ ಸಲುಹುತ್ತಿದ್ದರು ಎಂದು ತಮ್ಮ ಕುಟುಂಬದ ಆರಂಭದ ಕಷ್ಟದ ದಿನಗಳನ್ನು ಮೋದಿ ಮೆಲುಕು ಹಾಕಿದ್ದಾರೆ.

#PMModim, #Mother, #HeerabenModi, #Heeraben, #ModiMother, #ModiWithMother, #ಹೀರಾಬೆನ್, #ಮೋದಿ,

Articles You Might Like

Share This Article