ನವದೆಹಲಿ,ಜು.29-ಗುಜರಾತ್‍ನ ವಿಷಪೂರಿತ ಮದ್ಯ ಹಗರಣದಲ್ಲಿ 45 ಮಂದಿ ಮೃತಪಟ್ಟು 100ಕ್ಕೂ ಹೆಚ್ಚು ಮಂದಿ ಸಾವು-ಬದುಕಿನ ನಡುವೆ ಹೋರಾಟ ನಡೆಸಿರುವ ದುರಂತದ ಬಗ್ಗೆ ಪ್ರಧಾನಿ ನರೇಂದ್ರಮೋದಿ ಅವರು ಮೌನ ವಹಿಸಿರುವುದು ಏಕೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಎಐಸಿಸಿ ಕಚೇರಿಯಲ್ಲಿಂದು ಸಾಮಾಜಿಕ ಜಾಲತಾಣಗಳ ಮುಖ್ಯಸ್ಥ ಪವನ್ ಖೇರ ಮತ್ತು ರಾಜ್ಯಸಭಾ ಸದಸ್ಯರಾದ ಡಾ.ಅಮ್ಮಿಯಾಗ್ನಿ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಗುಜರಾತ್‍ನವರಾಗಿದ್ದಾರೆ. ಅಲ್ಲಿ ಮುಖ್ಯಮಂತ್ರಿ ಮತ್ತು ಗೃಹ ಸಚಿವರಾಗಿದ್ದರು.
ದುರಂತ ನಡೆದು ಇಷ್ಟು ದಿನಗಳಾದರೂ ಇಲ್ಲಿವರೆಗೂ ಪ್ರಧಾನಿ, ಗೃಹ ಸಚಿವರು ಸ್ಥಳಕ್ಕೆ ಭೇಟಿ ನೀಡಿಲ್ಲ. ಮೃತಪಟ್ಟವರ ಕುಟುಂಬದ ಸದಸ್ಯರನ್ನು ಸಂತೈಸುವ ಪ್ರಯತ್ನ ಮಾಡಿಲ್ಲ. ಕನಿಷ್ಠ ಒಂದು ಹೇಳಿಕೆ , ಟ್ವೀಟ್ ಕೂಡ ಮಾಡಿಲ್ಲ. ಈ ಮೌನ ಏಕೆ ಎಂದು ಪ್ರಶ್ನಿಸಿದ್ದಾರೆ.
ಗುಜರಾತ್‍ನ ಬೋಟಾಡ್ ಜಿಲ್ಲೆಯಲ್ಲಿ ದುರಂತಗಳು ನಡೆಯುತ್ತಿರುವುದು ಇದೇ ಮೊದಲಲ್ಲ. ರಾಜಕಾರಣಿಗಳ, ಪೊಲೀಸರ ಸಹಕಾರವಿಲ್ಲದೆ 15 ಸಾವಿರ ಕೋಟಿ ರೂ.ಗಳ ಅಕ್ರಮ ವ್ಯವಹಾರ ನಡೆಯಲು ಸಾಧ್ಯವಿಲ್ಲ.
ಮಿಥೇಲ್ ಆಲ್ಕೋಹಾಲ್ ಎಂಬ ರಾಸಾಯನಿಕ ಮಿಶ್ರಿತ ವಿಷಕಾರಿ ಮದ್ಯದ ಉತ್ಪಾದನೆ, ಮಾರಾಟ, ವಹಿವಾಟು ಎಲ್ಲವೂ ಸರ್ಕಾರದ
ಮೇಲ್ವಿಚಾರಣೆಯಲ್ಲೇ ನಡೆಯುತ್ತಿದೆ. ಇದು ಬಹಿರಂಗ ವ್ಯವಹಾರ. ವ್ಯಸನಿಗಳು ಕೂಡ ಬಹಿರಂಗವಾಗಿಯೇ ಸೇವನೆ ಮಾಡುತ್ತಿದ್ದಾರೆ, ಸಾವಿಗೀಡಾಗುತ್ತಿದ್ದಾರೆ. ಈವರೆಗೂ ಗುಜರಾತ್‍ನ ಮುಖ್ಯಮಂತ್ರಿಗಳಾಗಲಿ, ಗೃಹ ಸಚಿವರಾಗಲಿ ಸ್ಥಳಕ್ಕೆ ಭೇಟಿ ನೀಡುವ ಧೈರ್ಯ ತೋರಿಲ್ಲ ಎಂದು ಕಾಂಗ್ರೆಸ್ ಚಾಟಿ ಬೀಸಿದೆ.
ಪ್ರಧಾನಿಯವರು ಗುಜರಾತ್‍ನಲ್ಲಿ ಕೆಲವು ದಿನಗಳನ್ನು ಕಳೆಯಬೇಕು. ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಿ ಹೋಗುವಾಗ ಯಾವ ಸ್ಥಿತಿಯಲ್ಲಿ ಗುಜರಾತ್‍ನ್ನು ಬಿಟ್ಟಿದ್ದರೋ ಅದೇ ವ್ಯವಸ್ಥೆ ಈಗಲೂ ಇದೆ. ನಕಲಿ ಮತ್ತು ವಿಷಪೂರಿತ ಮದ್ಯ ಸೇವಿಸಿ ಜನ ಸಾವಿಗೀಡಾಗುತ್ತಿದ್ದಾರೆ. ಸರ್ಕಾರ ಉದ್ದೇಶಪೂರ್ವಕವಾಗಿ ಕುರುಡಾಗಿ ವರ್ತಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಮಹಾತ್ಮ ಗಾಂಧಿ ಮತ್ತು ಸರ್ದಾರ್ ವಲ್ಲಭಭಾಯ್ ಪಟೇಲ್ ಹುಟ್ಟಿದ ನಾಡು ಗುಜರಾತ್‍ನಲ್ಲಿ ವಿಷಪೂರಿತ ಮದ್ಯ ವಹಿವಾಟು ಯಾವುದೇ ಆತಂಕಗಳಿಲ್ಲದೆ ನಡೆಯುತ್ತಿದೆ. ಒಂದು ಕಾಲದಲ್ಲಿ ದೇಶಕ್ಕೆ ಗುಜರಾತ್ ನೀಡಿದ ಕೊಡುಗೆ ಮತ್ತು ಮಾದರಿ ಬೇರೆಯದ್ದಾಗಿತ್ತು. ಈಗ ಅದೇ ಗುಜರಾತ್‍ನಲ್ಲಿ 45 ಜನ ಸಾವನ್ನಪ್ಪಿದ್ದಾರೆ.
ವಿಷಪೂರಿತ ಮದ್ಯ ವಹಿವಾಟನ್ನು ಹೈಕೋರ್ಟ್‍ನ ನ್ಯಾಯಾೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ಕೊಡಬೇಕು, ಕಣ್ಣು, ಕಿಡ್ನಿ ಕಳೆದುಕೊಂಡು ಘಾಸಿಗೊಳಗಾಗಿರುವವರಿಗೆ ಉಚಿತ ಚಿಕಿತ್ಸೆ ಕೊಡಿಸಬೇಕು, ಮಾದಕವಸ್ತು ಮಾಫಿಯಾವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
2009ರಲ್ಲೂ ಇಂಥದ್ದೇ ಘಟನೆ ನಡೆದಿತ್ತು. ಆಗ ಮುಖ್ಯ ನ್ಯಾಯಮೂರ್ತಿ ರಾಧಾಕೃಷ್ಣನ್ ಅವರು ಸ್ವಯಂಪ್ರೇರಿತ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದರು. ಕಠಿಣ ಎಚ್ಚರಿಕೆ ನೀಡಿದ ಪರಿಣಾಮ ಕಾನೂನುಗಳು ಬಿಗಿಗೊಂಡವು. ಆದರೆ ಈವರೆಗೂ ಯಾವುದೇ ಆರೋಪ ಸಾಬೀತಾಗಿಲ್ಲ. ಯಾರಿಗೂ ಶಿಕ್ಷೆಯಾಗಿಲ್ಲ.
2009ರಿಂದ 2013ರ ನಡುವಿನ ವರದಿ ಮತ್ತು ದಾಖಲೆಗಳು ಗುಜರಾತ್‍ನಲ್ಲಿ ಏನಾಗುತ್ತಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತದೆ. ದೇಶದ ಪ್ರಧಾನಿಗಳು ಮೌನ ಮುರಿದು ಮಾದಕವಸ್ತು ಮಾಫಿಯಾವನ್ನು ಮಟ್ಟ ಹಾಕಲು ಕಠಿಣ ಕ್ರಮ ಕೈಗೊಳ್ಳಬೇಕು. ಗೃಹ ಸಚಿವರು ಉದ್ದೇಶಪೂರ್ವಕ ನಿರ್ಲಕ್ಷತನವನ್ನು ಬಿಟ್ಟು ಕೆಲಸ ಮಾಡಬೇಕು ಎಂದು ಆಗ್ರಹಿಸಿದೆ.
ಗುಜರಾತ್‍ನಲ್ಲಿ ಮನೆ ಮಗ, ಪತಿ, ಅಣ್ಣ ತಮ್ಮಂದಿರನ್ನು ಕಳೆದುಕೊಂಡು ಸಹೋದರಿಯರನ್ನು ಪ್ರಧಾನಿ ಮೋದಿ ಭೇಟಿಯಾಗಿ ಸಾಂತ್ವಾನ ಹೇಳಲು ಸಾಧ್ಯವೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.