ಆರ್‌ಆರ್‌ಆರ್‌ ಸಿನಿಮಾ ದೇಶದ ಹಿರಿಮೆ ಹೆಚ್ಚಿಸಿದೆ : ಮೋದಿ

Social Share

ನವದೆಹಲಿ, ಜ. 11- ವಿಶಿಷ್ಟ ಕಲ್ಪನೆ, ಕಲಾತ್ಮಕತೆ, ಅದ್ಧೂರಿತನದಿಂದ ಗಮನ ಸೆಳೆದು ಹಲವು ಪ್ರಶಸ್ತಿಗೆ ಭಾಜನರಾಗಿರುವ ಖ್ಯಾತ ನಿರ್ದೇಶಕ ರಾಜಮೌಳಿ ನಿರ್ದೇಶನದ ಆರ್‍ಆರ್‍ಆರ್ ಸಿನಿಮಾಕ್ಕೆ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್' ಪ್ರಶಸ್ತಿ ಸಂದಿರುವುದು ದೇಶದ ಹಿರಿಮೆಯನ್ನು ಹೆಚ್ಚಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುಣಗಾನ ಮಾಡಿದ್ದಾರೆ.

ಆರ್‌ಆರ್‌ಆರ್‌ ಸಿನಿಮಾದ ನಾಟು ನಾಟು ಗೀತೆಯ ನೃತ್ಯಕ್ಕೆ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್' ಪ್ರಶಸ್ತಿ ಸಂದಿರುವುದು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವ ಸಂಗತಿ ಆಗಿದೆ'. ಆರ್‌ಆರ್‌ಆರ್‌ ಅಂತಹ ಮಹೋನ್ನತ ಸಿನಿಮಾವನ್ನು ಭಾರತೀಯ ಚಿತ್ರರಂಗಕ್ಕೆ ಕೊಟ್ಟ ನಿರ್ದೇಶಕ ರಾಜಮೌಳಿ, ಇಂಪಾದ ಸಂಗೀತ ನೀಡಿರುವ ಎಂಎಂ ಕೀರಾವಾಣಿ, ಸಿನಿಮಾದ ಯಶಸ್ಸಿನ ಹಿಂದಿರುವ ಪ್ರೇಮ್ ರಕ್ಷಿತ್, ನೃತ್ಯ ಸಂಯೋಜಕರಾದ ಕಲಾ ಬೈರವ,

ಚಂದ್ರಬೋಸ್, ಗೀತರಚನಕಾರ ರಾಹುಲ್ ಸಿಪ್ಲಿಗುಂಜ್, ನಟರಾದ ಎನ್‍ಟಿಆರ್, ರಾಮ್‍ಚರಣ್ ತೇಜ, ಚಿತ್ರತಂಡಕ್ಕೆ ಧನ್ಯವಾದಗಳನ್ನು ತಿಳಿಸುತ್ತೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಟ್ವಿಟ್ಟರ್‍ನ ಗೋಡೆಯ ಮೇಲೆ ಬರೆದುಕೊಂಡು, ಸಿನಿಮಾದ ಸಾಧನೆಯನ್ನು ಶ್ಲಾಘಿಸಿದ್ದಾರೆ.

ಮೆಟ್ರೋ ಪಿಲ್ಲರ್ ದುರಂತ : NCC ಕಂಪೆನಿ, 7 ಮಂದಿ ವಿರುದ್ಧ FIR

ಆರ್‍ಆರ್‍ಆರ್ (ರಣಂ, ರುದ್ರಂ, ರುದಿರಂ) ಸಿನಿಮಾವು ಗೋಲ್ಡನ್ ಗ್ಲೋಬ್ ವಿಭಾಗದ ನೈಜ ಗೀತೆಯ ಸಾಲಿನಲ್ಲಿ ರಾಮ್‍ಚರಣ್ ತೇಜ ಹಾಗೂ ಜ್ಯೂನಿಯರ್ ಎನ್‍ಟಿಆರ್ ಅವರು ಪೈಪೋಟಿಗೆ ಬಿದ್ದಂತೆ ಭರ್ಜರಿ ಸ್ಟೆಪ್ಸ್ ಹಾಕಿದ್ದ ನಾಟು ನಾಟು' ಗೀತೆಗೆ ಪ್ರಶಸ್ತಿ ಸಂದಿದೆ. ನಾಟು ನಾಟು’ ಸಿನಿಮಾದ ಸಾಹಿತ್ಯ ವನ್ನು ಚಂದ್ರಬೋಸ್ ಬರೆದಿದ್ದು, ರಾಹುಲ್ ಸಿಪ್ಲಿಗುಂಜ್, ಕಲಾ ಬೈರವ ಅವರು ನೃತ್ಯ ಸಂಯೋಜನೆ ಮಾಡಿರುವ ಗೀತೆಗೆ, ಸಂಗೀತ ಸಾಮ್ರಾಟ ಎಂಎಂ ಕೀರಾವಾಣಿ ಅವರು ಇಂಪಾದ ರಾಗ ಸಂಯೋಜನೆ ಅಳವಡಿಸಿದ್ದರು.

ಕೇಂದ್ರ ಸಚಿವ ಡಾ.ಎಸ್. ಜೈಶಂಕರ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 2 ದಶಕದ ನಂತರ ಭಾರತೀಯ ಚಿತ್ರರಂಗವೊಂದು `ಗೋಲ್ಡನ್ ಗ್ಲೋಬ್’ ಪ್ರಶಸ್ತಿ ಗೆದ್ದ ಕೀರ್ತಿ ಆರ್‍ಆರ್‍ಆರ್ ಸಿನಿಮಾಕ್ಕೆ ಸಂದಿದೆ. 1988ರಲ್ಲಿ ಸಲಾಮ್ ಬಾಂಬೆ ಹಾಗೂ 2001 ರಲ್ಲಿ ಮಾನ್ಸೂನ್ ವೆಡ್ಡಿಂಗ್ ಎಂಬ ಸಿನಿಮಾಗಳು ನಾಮನಿರ್ದೇಶನ ಗೊಂಡಿದ್ದರೂ ಪ್ರಶಸ್ತಿ ಸುತ್ತಿನಲ್ಲಿ ಎಡವಿತ್ತು.

ನಾಳೆ ಹುಬ್ಬಳ್ಳಿಗೆ ಪ್ರಧಾನಿ ಮೋದಿ

ಪ್ಯಾನ್ ಇಂಡಿಯಾ ಚಿತ್ರವಾಗಿದ್ದ ಆರ್‍ಆರ್‍ಆರ್ 1200 ಕೋಟಿಗೂ ಹೆಚ್ಚು ಸಂಪಾದನೆ ಮಾಡಿದ್ದ ಆರ್‍ಆರ್‍ಆರ್ ಸಿನಿಮಾವು ರಾಜಮೌಳಿ ಕಲ್ಪನೆಯ ಮಹೋನ್ನತ ಚಿತ್ರವಾಗಿದ.್ದ, 1920 ರ ಬ್ರಿಟೀಷ್ ಆಕ್ರಮಿತ ಭಾರತದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಕೊಮರಂ ಭೀಮ್ ಮತ್ತು ಅಲ್ಲೂರಿ ಸೀತಾರಾಮರಾಜು ಅವರು ಆಂಗ್ಲರ ವಿರುದ್ಧ ಸಿಡಿದೆದ್ದ ಕಥೆಯನ್ನಾಧರಿಸಿ ಸಿನಿಮಾ ಮಾಡಲಾಗಿದೆ.

PM Narendra Modi, congratulates, RRR, Golden Globes, win,

Articles You Might Like

Share This Article