ಸಿಖ್ ಧುರೀಣರಿಗೆ ಮೋದಿ ಔತಣ

Social Share

ನವದೆಹಲಿ,ಫೆ.18- ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮ್ಮ ನಿವಾಸದಲ್ಲಿ ಸಿಖ್ ಸಮುದಾಯದ ಹಲವಾರು ಧುರೀಣರಿಗೆ ಔತಣಕೂಟ ಏರ್ಪಡಿಸಿದ್ದರು. ಪಂಜಾಬ್‍ನಲ್ಲಿ ಇನ್ನೆರಡು ದಿನಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿದ್ದು ಬಿಜೆಪಿಯ ಸಿಖ್ ಸಮುದಾಯದ ಮತಗಳನ್ನು ಸೆಳೆಯಲು ಸರ್ವ ಪ್ರಯತ್ನ ನಡೆಸುತ್ತಿದೆ.
ಮಾಜಿ ಮುಖ್ಯಮಂತ್ರಿ ಅಮರಿಂದರ್‍ಸಿಂಗ್ ಅವರ ಪಂಜಾಬ್ ಲೋಕ ಕಾಂಗ್ರೆಸ್ ಮತ್ತು ಅಕಾಲಿ ದಳದ ಸುಖ್‍ದೇವ್ ಸಿಂಗ್ ದಿಂಢ್ಸಾ ಬಣದೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಪ್ರಬಲ ಪ್ರದಶರ್ಶನ ತೋರುವ ನಿರೀಕ್ಷೆ ಹೊಂದಿದೆ. ಈ ಹಿನ್ನೆಲೆಯಲ್ಲಿ ಈ ಔತಣಕೂಟ ಮಹತ್ವ ಪಡೆದುಕೊಂಡಿದೆ.
ಮೋದಿ ಅವರೊಂದಿಗೆ ನಡೆದ ಸಭೆಯಲ್ಲಿ ಸಿಖ್ ಸಮುದಾಯದ ಪ್ರಮುಖ ಮುಖಂಡರೆಂದರೆ ದೆಹಲಿ ಗುರುದ್ವಾರ ಸಮಿತಿ ಅಧ್ಯಕ್ಷ ಹರ್‍ಮೀತ್ ಸಿಂಗ್ ಕಾಲ್ಕಾ, ಪದ್ಮಶ್ರೀ ಪ್ರಶಸ್ತಿ ಪುರಸ್ಕøತ ಬಾಬಾ ಬಲ್ಜೀರ್‍ಸಿಂಗ ಜೀ, ಡೇರಾ ಬಾಬಾದ ಜೋಗಾ ಸಿಂಗ್, ಸೇವಾಪಂಯಮುನಾನಗರದ ಸೇವಾಪಂಥಿಯ ಮಹಂತ್ ಪರಪ್‍ಜಿತ್‍ಸಿಂಗ್, ಕರ್ನಾಲ್‍ನಲ್ಲಿನ ಜಂಗ್‍ಸಿಂಗ್, ಮುಖಿ ಡೇರಾ ಬಾಬಾದ ಸಂತ ಬಾಬಾ ಮೇಜರ್ ಸಿಂಗ್ ವಾ, ಅಮೃತಸರದಲ್ಲಿನ ತಾರಾ ಸಿಂಗ್ ವಾ ಪಾಲ್ಗೊಂಡಿದ್ದರು ಎಂದು ಅಕೃತ ಮೂಲಗಳು ತಿಳಿಸಿವೆ.

Articles You Might Like

Share This Article