10 ಲಕ್ಷ ಉದ್ಯೋಗ ಕಲ್ಪಿಸುವ ರೋಜಗಾರ್ ಮೇಳಕ್ಕೆ ಮೋದಿ ಚಾಲನೆ

Social Share

ನವದೆಹಲಿ,ಅ.22- ದೇಶದಲ್ಲಿ ನಿರುದ್ಯೋಗ ನಿವಾರಿಸಿ ಯುವಕರಿಗೆ 10 ಲಕ್ಷ ಉದ್ಯೋಗ ಕಲ್ಪಿಸುವ ಬಹುನಿರೀಕ್ಷಿತ ರೋಜಗಾರ್ ಮೇಳಕ್ಕೆ(ಉದ್ಯೋಗ ಮೇಳ) ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಿದ್ಯುಕ್ತವಾಗಿ ಚಾಲನೆ ನೀಡಿ ಮೊದಲ ಹಂತದಲ್ಲೇ 75 ಸಾವಿರ ಯುವಕರಿಗೆ ನೇರ ನೇಮಕಾತಿ ಆದೇಶ ಪತ್ರ ನೀಡಿದರು.

ಕೋವಿಡ್ ನಂತರ ಕೇಂದ್ರ ಸರ್ಕಾರವು ಏಕಕಾಲಕ್ಕೆ ನೇರ ನೇಮಕಾತಿ ನಡೆಸಿರುವ ಬಹುದೊಡ್ಡ ಪ್ರಕ್ರಿಯೆ ಇದಾಗಿದೆ. ಮುಂದಿನ ಒಂದು ವರ್ಷದೊಳಗೆ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ 10 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವ ಗುರಿ ಹೊಂದಲಾಗಿದೆ. ಪ್ರಾರಂಭಿಕವಾಗಿ ಮೊದಲ ಹಂತದಲ್ಲೇ 75 ಸಾವಿರ ಯುವಕರಿಗೆ ನೇರ ನೇಮಕಾತಿ ಆದೇಶ ಪತ್ರವನ್ನು ನೀಡಲಾಯಿತು.

ಶನಿವಾರ ವಿಡಿಯೋ ಕಾನರೆನ್ಸ್ ಮೂಲಕ ಉದ್ಯೋಗ ಮೇಳಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ, ಹೊಸದಾಗಿ ಉದ್ಯೋಗಕ್ಕೆ ಸೇರ್ಪಡೆಯಾದ ಯುವಕರಿಗೆ ಶುಭ ಕೋರಿ, ಯುವಕರಿಗೆ ಉದ್ಯೋಗ ನೀಡುವುದರ ಜತೆಗೆ ನಾಗರಿಕರ ಕಲ್ಯಾಣವನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಇದು ಪೂರಕವಾಗಿದೆ ಎಂದು ಹೇಳಿದರು.

ದೇಶದಾದ್ಯಂತ 38 ಸಚಿವಾಲಯಗಳ ಅಥವಾ ಇಲಾಖೆಗಳಿಗಾಗಿ ದೇಶದಾದ್ಯಂತ ನೇಮಕಾತಿ ನಡೆಸಲಾಗುತ್ತಿದೆ. ಸರ್ಕಾರದ ಗ್ರೂಪ್ ಎ ಶ್ರೇಣಿಯಿಂದ ಹುದ್ದೆಗಳಿಂದ ತೊಡಗಿ ಗ್ರೂಪ್ ಸಿ ಶ್ರೇಣಿಯ ಹುದ್ದೆಗಳ ವರೆಗೆ ನೇಮಕಾತಿ ನಡೆಯಲಿದೆ.

ಕಾಂಗ್ರೆಸ್‍ನಲ್ಲೀಗ ಮೂರು ಶಕ್ತಿ ಕೇಂದ್ರಗಳಿವೆ : ಶೆಟ್ಟರ್ ವ್ಯಂಗ್ಯ

ಕೇಂದ್ರ ಸಶಸ್ತ್ರ ಪಡೆ ಸಿಬ್ಬಂದಿ, ಸಬ್-ಇನ್‍ಸ್ಪೆಕ್ಟರ್‍ಗಳು, ಕಾನ್‍ಸ್ಟೆಬಲ್‍ಗಳು, ಎಲ್‍ಡಿಸಿ, ಸ್ಟೆನೋ, ಪಿಎ, ಆದಾಯ ತೆರಿಗೆ ಇನ್ಸ್‍ಪೆಕ್ಟರ್‍ಗಳು ಮತ್ತು ಎಂಟಿಎಸ್ ಕೂಡ ನೇಮಕವಾಗುತ್ತಿರುವ ಹುದ್ದೆಗಳಲ್ಲಿ ಒಳಗೊಂಡಿವೆ. ಈ ನೇಮಕಾತಿಗಳಲ್ಲಿ ಕೆಲವನ್ನು ಸಚಿವಾಲಯಗಳು ಮತ್ತು ಇಲಾಖೆಗಳು ಸ್ವತಃ ಮಾಡಿಕೊಳ್ಳಲಿವೆ. ಉಳಿದವನ್ನು ಯುಪಿಎಸ್‍ಸಿ, ಎಸ್‍ಎಸ್‍ಸಿ ಮತ್ತು ರೈಲ್ವೆ ನೇಮಕಾತಿ ಮಂಡಳಿಯಂತಹ ನೇಮಕಾತಿ ಏಜೆನ್ಸಿಗಳ ಮೂಲಕ ಮಾಡಿಕೊಳ್ಳಲಾಗುತ್ತಿದೆ ಎಂದು ಅದು ತಿಳಿಸಿದೆ.

ಕೇಂದ್ರ ಸರ್ಕಾರವು ಬೃಹತ್ ಸಂಖ್ಯೆಯ ನಿರುದ್ಯೋಗಿ ಪ್ರಜೆಗಳಿಗೆ ಉದ್ಯೋಗ ಅವಕಾಶ ಒದಗಿಸುವ ಗುರಿಯೊಂದಿಗೆ 10 ಲಕ್ಷ ಅಭ್ಯರ್ಥಿಗಳಿಗೆ ಸಮಾರೋಪಾದಿಯಲ್ಲಿ ಉದ್ಯೋಗ ಕಲ್ಪಿಸಲು ತೀರ್ಮಾನಿಸಿದೆ. ಮುಂದಿನ ಒಂದೂವರೆ ವರ್ಷದಲ್ಲಿ 10 ಲಕ್ಷ ಉದ್ಯೋಗ ಸೃಜಿಸಲಾಗುವುದು ಎಂದು ಪ್ರಧಾನಿ ಮೋದಿ ಕಳೆದ ಜೂನ್‍ನಲ್ಲಿ ಘೋಷಣೆ ಮಾಡಿದ್ದರು.

ಕೇಂದ್ರ ಈ ಗುರಿ ಮುಟ್ಟಲು ದೇಶದ ವಿವಿಧ ನಗರಗಳಲ್ಲಿ ಉದ್ಯೋಗ ಮೇಳಗಳನ್ನು ಆಯೋಜಿಸಿದೆ. ನೇಮಕಾತಿ ಪ್ರಕ್ರಿಯೆಯನ್ನು ವೇಗವಾಗಿ ನಡೆಸಲು ಅನುಕೂಲವಾಗುವಂತೆ ಉತ್ತಮ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಸರಳಗೊಳಿಸಿಕೊಳ್ಳಲಾಗಿದೆ.

ಕೇಂದ್ರ ಸರ್ಕಾರದಡಿ ಬರುವ ಇಲಾಖೆಗಳಾದ ರೈಲ್ವೆ ಇಲಾಖೆ, ಅಂಚೆ ಇಲಾಖೆ, ರಕ್ಷಣಾ ಇಲಾಖೆ, ಗೃಹ ಇಲಾಖೆ, ಕಾರ್ಮಿಕ ಇಲಾಖೆ, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ, ಸಿಬಿಐ, ಕಸ್ಟಮ್ಸ್ ಇಲಾಖೆ, ಬ್ಯಾಂಕ್ ಕ್ಷೇತ್ರ, ಅರೆ ಸೇನಾಪಡೆ, ಸೇನಾಪಡೆ, ಯುಪಿಎಸ್‍ಸಿ, ಸಿಬ್ಬಂದಿ ನೇಮಕಾತಿ ಆಯೋಗ ಹುದ್ದೆಗಳು, ಎಸ್‍ಎಸ್‍ಸಿ ಆದಾಯ ತೆರಿಗೆ ಇಲಾಖೆ ಸೇರಿದಂತೆ ಒಟ್ಟು 38 ಇಲಾಖೆಗಳಲ್ಲಿ ಪತ್ರಾಂಕಿತ ಮತ್ತು ಪತ್ರಾಂಕಿತೇತರ ಹುದ್ದೆಗಳ ನೇಮಕಾತಿ ಮಾಡುವ ಗುರಿ ಹೊಂದಲಾಗಿದೆ.

ಪುನೀತ ಪರ್ವ ಕಾರ್ಯಕ್ರಮದಲ್ಲೇ ಅಪ್ಪು ಅಭಿಮಾನಿ ಸಾವು

ಇಂದು ದೆಹಲಿಯಲ್ಲಿ ಪ್ರಧಾನಿ ಮೋದಿ ಅವರು ಉದ್ಯೋಗ ಮೇಳಕ್ಕೆ ಚಾಲನೆ ಕೊಟ್ಟರೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮಿಳುನಾಡಿನಲ್ಲಿ, ಆರೋಗ್ಯ ಸಚಿವ ಮನಸುಖ್ ಮಾಂಡವೀಯ ಗುಜರಾತ್‍ನಲ್ಲಿ, ವಾರ್ತಾ ಸಚಿವ ಅನುರಾಗ್ ಠಾಕೂರ್ ಚಂಡೀಗಢದಲ್ಲಿ, ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮಹಾರಾಷ್ಟ್ರದಲ್ಲಿ, ಕೇಂದ್ರ ಸಚಿವರು ಚಾಲನೆ ನೀಡಿದರು.

ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಒಡಿಶಾದಲ್ಲಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರಾಜಸ್ಥಾನದಲ್ಲಿ, ಬೃಹತ್ ಕೈಗಾರಿಕೆ ಸಚಿವ ಮಹೇಂದ್ರ ಪಾಂಡೆ ಉತ್ತರ ಪ್ರದೇಶದಲ್ಲಿ, ಬುಡಕಟ್ಟು ಜನರ ಕಲ್ಯಾಣ ಸಚಿವ ಅರ್ಜುನ್ ಮುಂಡಾ ಜÁರ್ಖಂಡ್ ಹಾಗೂ ಪಂಚಾಯತ್ ರಾಜ್ ಸಚಿವ ಗಿರಿರಾಜ್ ಸಿಂಗ್ ಬಿಹಾರದಲ್ಲಿ ಚಾಲನೆ ಕೊಟ್ಟರು.

ಟ್ರಕ್‍ಗೆ ಬಸ್ ಡಿಕ್ಕಿ, 15 ಕಾರ್ಮಿಕರ ದುರ್ಮರಣ,ಮಧ್ಯಪ್ರದೇಶದಲ್ಲಿ ಘೋರ ದುರಂತ

ಉದ್ಯೋಗ ಸೃಷ್ಟಿ ನಿಟ್ಟಿನಲ್ಲಿ ಬಿಜೆಪಿ ಸರ್ಕಾರ ಏನೂ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಕಾಂಗ್ರೆಸ್, ಎಎಪಿ ಸೇರಿದಂತೆ ಪ್ರತಿಪಕ್ಷಗಳು ಹಲವು ಬಾರಿ ವಾಗ್ದಾಳಿ ನಡೆಸಿದ್ದವು. ಈ ಎಲ್ಲ ರಾಜಕೀಯ ವಿದ್ಯಮಾನಗಳ ನಡುವೆಯೇ ಬೃಹತ್ ಉದ್ಯೋಗ ಮೇಳಕ್ಕೆ ಪ್ರಧಾನಿ ಚಾಲನೆ ನೀಡಿದ್ದಾರೆ.

Articles You Might Like

Share This Article