ನವದೆಹಲಿ, ಫೆ.26- ಆನ್‍ಲೈನ್‍ನಲ್ಲಿ ವೈದ್ಯಕೀಯ ಸಮಾಲೋಚನೆಗಳನ್ನು ಸುಗಮಗೊಳಿಸುವ ಇ-ಸಂಜೀವಿನಿ ಆಪ್ಲಿಕೇಷನ್ ಭಾರತದ ಡಿಜಿಟಲ್ ಕ್ರಾಂತಿಯ ಪ್ರತಿಬಿಂಬ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.
ಮಾಸಿಕ ಮನ್ ಕಿ ಬಾತ್ ರೇಡಿಯೋ ಸರಣಿಯಲ್ಲಿ ಮಾತನಾಡಿದ ಮೋದಿ ಅವರು, ಸಂಜೀವಿನಿ ಆ್ಯಪ್ ಸಾಮಾನ್ಯ ಜನರು, ಮಧ್ಯಮ ವರ್ಗ ಅಥವಾ ದೂರದ ಪ್ರದೇಶಗಳಲ್ಲಿ ವಾಸಿಸುವವರಿಗೆ ಜೀವ ರಕ್ಷಣೆ ಅಪ್ಲಿಕೇಶನ್ ಆಗುತ್ತಿದೆ. ಇದು ಭಾರತದ ಡಿಜಿಟಲ್ ಕ್ರಾಂತಿಯ ಶಕ್ತಿಯಾಗಿದ್ದು, ಈವರೆಗೂ 10 ಕೋಟಿ ಜನ ಇದರ ಲಾಭ ಪಡೆದಿದ್ದಾರೆ ಎಂದರು.
ಭಾರತದ ಏಕೀಕೃತ ಪಾವತಿಗಳ ಇಂಟರ್ಫೇಸ್ (ಯುಪಿಐ) ಮತ್ತು ಸಿಂಗಾಪುರದ ಪೇ ನೌವ್ ನಡುವಿನ ಇತ್ತೀಚಿನ ಒಪ್ಪಂದದಿಂದದಾಗಿ ಎರಡು ದೇಶಗಳ ಜನರ ನಡುವೆ ಸುಲಭವಾದ ಹಣ ವರ್ಗಾವಣೆ ಸಾಧ್ಯವಾಗಲಿದೆ. ಡಿಜಿಟಲ್ ತಂತ್ರಜ್ಞಾನಗಳ ಅಳವಡಿಕೆಯಿಂz ಜೀವನ ಸೌಕರ್ಯದ ಉತ್ತೇಜನ ಹೆಚ್ಚುತ್ತಿದೆ ಎಂದು ಹೇಳಿದರು.
ವೈದ್ಯಕೀಯ ಸಮಾಲೋಚನೆಗಳನ್ನು ಒದಗಿಸುವಲ್ಲಿ ಅಪ್ಲಿಕೇಶನ್ ಎಷ್ಟು ಸಹಾಯಕವಾಗಿದೆ ಎಂಬ ಕುರಿತು ಪ್ರಧಾನ ಮಂತ್ರಿಗಳು ವೈದ್ಯರು ಮತ್ತು ರೋಗಿಯೊಂದಿಗೆ ಸಂವಾದ ನಡೆಸಿದರು. ಇದೊಂದು ದೊಡ್ಡ ಸಾಧನೆ. ಭಾರತದ ಜನರು ತಂತ್ರಜ್ಞಾನವನ್ನು ಹೇಗೆ ತಮ್ಮ ಜೀವನದ ಭಾಗವಾಗಿಸಿಕೊಂಡಿದ್ದಾರೆ ಎಂಬುದಕ್ಕೆ ಇದು ಜೀವಂತ ಉದಾಹರಣೆ. ಕರೋನಾ ಸಮಯದಲ್ಲಿ ಇ-ಸಂಜೀವನಿ ಅಪ್ಲಿಕೇಶನ್ ಒಂದು ದೊಡ್ಡ ವರವಾಗಿ ನೆರವಾಗಿದೆ ಎಂದು ಪ್ರತಿಪಾದಿಸಿದರು.
ಸ್ವಚ್ಛ ಭಾರತ ಒಂದು ಸಾಮೂಹಿಕ ಆಂದೋಲನವಾಗಿದೆ. ದೇಶದ ವಿವಿಧ ಭಾಗಗಳಲ್ಲಿ ಜನರು ಅದರಲ್ಲಿ ತೊಡಗಿಸಿಕೊಂಡಿದ್ದಾರೆ. ನಾವು ಸಂಕಲ್ಪ ಮಾಡಿದರೆ ಸ್ವಚ್ಛ ಭಾರತಕ್ಕೆ ಬಹುದೊಡ್ಡ ಕೊಡುಗೆ ನೀಡಲು ಸಾಧ್ಯವಿದೆ. ಭಾರತದ ಸಾಂಸ್ಕøತಿಕ ಪರಂಪರೆಯನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ಮಾಡಲಾಗುತ್ತಿರುವ ವಿವಿಧ ಪ್ರಯತ್ನಗಳನ್ನು ಮೋದಿ ಉಲ್ಲೇಖಿಸಿದರು.
ಸಮಾಜದ ಶಕ್ತಿಯೊಂದಿಗೆ ದೇಶದ ಶಕ್ತಿಯು ಹೆಚ್ಚಾಗುತ್ತಿದೆ. ಭಾರತೀಯ ಕ್ರೀಡೆಗಳು ಮತ್ತು ಆಟಿಕೆಗಳ ಬಗ್ಗೆ ಆಸಕ್ತಿ ಹೆಚ್ಚಾಗಿದೆ. ಭಾರತೀಯ ಆಟಿಕೆಗಳು ಎಷ್ಟು ಜನಪ್ರಿಯವಾಗಿವೆ ಎಂದರೆ, ಹೊರ ದೇಶಗಳಲ್ಲೂ ಅವುಗಳ ಬೇಡಿಕೆ ಹೆಚ್ಚಿದೆ ಎಂದರು.
ಸರ್ದಾರ್ ಪಟೇಲ್ ಅವರ ಜನ್ಮದಿನವನ್ನು ಏಕತಾ ದಿನವಾಗಿ ಆಚರಿಸಲಾಗುತ್ತದೆ, ಅಕ್ಟೋಬರ್ 31 ರಂದು ದೇಶಭಕ್ತಿ ಗೀತೆಗಳು, ಲಾಲಿ ಮತ್ತು ರಂಗೋಲಿಗಳಿಗೆ ಸಂಬಂಧಿಸಿದ ಮೂರು ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ. ಇದರಲ್ಲಿ 700 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಐದು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದಾರೆ.
ಮನ್‍ಕಿ ಬಾತ್‍ನಲ್ಲಿ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ ಸ್ವೀಕರಿಸಿದವರು ಸೇರಿದಂತೆ ಕೆಲವು ಪ್ರಶಸ್ತಿ ವಿಜೇತರ ಭಾವನೆಗಳನ್ನು ಪ್ರಧಾನಿ ಪ್ರಸ್ತಾಪಿಸಿದರು. ಈ ಎಲ್ಲಾ ಕಲಾವಿದರು ಪ್ರದರ್ಶನ ಕಲೆಗಳನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಕೆಳ ಮಟ್ಟದಲ್ಲಿ ಸೂರ್ತಿಯಾಗಿದ್ದಾರೆ ಎಂದರು.
#PMModi #MannKiBaat #NarendraModi