ನವದೆಹಲಿ, ಜು.18- ಬರ್ಮಿಂಗ್‍ಹ್ಯಾಮ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿರುವ ಭಾರತೀಯ ಕ್ರೀಡಾಪಟುಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಜುಲೈ 20 ರಂದು ಸಂವಾದ ನಡೆಸಲಿದ್ದಾರೆ. ಜುಲೈ 28ರಂದು ನಡೆಯಲಿರುವ ಕಾಮನ್ವೆಲ್ತ್ ಕ್ರೀಡಾಕೂಟ ದಲ್ಲಿ ಭಾರತದ 322 ಜನರ ತಂಡ ಭಾಗವಹಿಸಲಿದೆ. ಈ ಕ್ರೀಡಾಪಟುಗಳೊಂದಿಗೆ ಪ್ರಧಾನಿ ಮಾತುಕತೆ ನಡೆಸಲಿದ್ದಾರೆ.
ಈ ಬಾರಿ ಕ್ರೀಡಾಕೂಟದಲ್ಲಿ ಸುಮಾರು 15 ಕ್ರೀಡೆಗಳಲ್ಲಿ ಭಾರತ ಭಾಗವಹಿಸಲಿದ್ದು, ಕ್ರೀಡಾಪಟುಗಳನ್ನು ಹುರಿದುಂಬಿಸುವ ಸಲುವಾಗಿ ಪ್ರಧಾನಿ ಮೋದಿ ಸಂವಾದ ನಡೆಸಲಿದ್ದಾರೆ. ಬುಧವಾರ ಬೆಳಗ್ಗೆ 10 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯುವ ಸಂವಾದದಲ್ಲಿ ಕ್ರೀಡಾಪಟುಗಳು ಭಾಗವಹಿಸುವಂತೆ ಭಾರತೀಯ ಕ್ರೀಡಾ ಪ್ರಾಧಿಕಾರ ಇ-ಮೇಲ್ ಮೂಲಕ ತಿಳಿಸಿದೆ.
ಬರ್ಮಿಂಗ್‍ಹ್ಯಾಮ್ ಕಾಮನ್ವೆಲ್ತ್ ಗೇಮ್ಸï ಕ್ರೀಡಾಕೂಟ ಜುಲೈ 28ರಿಂದ ಆಗಸ್ಟ್ 08ರವರೆಗೆ ನಡೆಯಲಿದ್ದು, ಭಾರತೀಯ ಒಲಿಂಪಿP್ಸï ಅಸೋಸಿಯೇಷನ್ 322 ಜನರ ಭಾರತ ತಂಡವನ್ನು ಈಗಾಗಲೇ ಹೆಸರಿಸಿದೆ. ಇನ್ನು ಈ ತಂಡದಲ್ಲಿ 215 ಅಥ್ಲೀಟ್‍ಗಳು ಮತ್ತು 107 ಅಕಾರಿಗಳು, ಸಹಾಯಕ ಸಿಬ್ಬಂದಿ ಸೇರಿದ್ದಾರೆ.
ಈ ಬಾರಿಯ ಬರ್ಮಿಂಗ್‍ಹ್ಯಾಮ್ ಕ್ರೀಡಾಕೂಟದಲ್ಲಿ ಜÁವೆಲಿನ್ ಥ್ರೋ ಚಾಂಪಿಯನ್ ನೀರಜ್ ಚೋಪ್ರಾ, ವೇಟ್‍ಲಿಫ್ಟರ್ ಕನ್ನಡಿಗ ಗುರುರಾಜ್ ಪೂಜರಿ, ಒಲಿಂಪಿP್ಸï ಪದಕ ವಿಜೇತೆಯರಾದ ಮೀರಾ ಬಾಯಿ ಚಾನು, ಪಿ.ವಿ.ಸಿಂಧು, ಲೊವ್ಲೀನಾ ಬೋರ್ಗೊಹೈನ್, ಭಜರಂಗ್ ಪೂನಿಯಾ, ರವಿಕುಮಾರ್ ದಹಿಯಾ ಸೇರಿದಂತೆ ಅನೇಕ ಆಟಗಾರರು ಪದಕದ ಭೇಟೆ ಮಾಡಲಿದ್ದಾರೆ.