ಉತ್ತರ ಕರ್ನಾಟಕದಲ್ಲಿ ಮೋದಿ ಅಬ್ಬರ

Social Share

ಬೆಂಗಳೂರು,ಜ.12-ಮುಂಬರುವ ವಿಧಾನಸಭೆ ಚುನಾವಣೆಗೆ ಭರ್ಜರಿ ಬೂಸ್ಟ್ ನೀಡಲಿದೆ ಎಂದೇ ಹೇಳಲಾಗಿದ್ದ ಹುಬ್ಬಳ್ಳಿ ಯುವ ಜನೋತ್ಸವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮನದಿಂದ ಆಡಳಿತಾರೂಢ ಬಿಜೆಪಿಯಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿತು.

ನವದೆಹಲಿಯಿಂದ ವಾಣಿಜ್ಯ ನಗರಿ ಹುಬ್ಬಳ್ಳಿಗೆ ಆಗಮಿಸಿದ ಮೋದಿ ಅವರು, ವಿಮಾನ ನಿಲ್ದಾಣದಿಂದ ಸುಮಾರು ಆರು ಕಿ.ಮೀ. ರಸ್ತೆಯಲ್ಲಿ ತೆರೆದ ವಾಹನದ ಮೂಲಕ ಮೆರವಣಿಗೆ ನಡೆಸಿ ಯುವಜನತೆಯಲ್ಲಿ ಕಿಚ್ಚು ಹಚ್ಚಿಸಿದರು.

ಮಧ್ಯಾಹ್ನ 3.30ರಿಂದ ವಿಮಾನ ನಿಲ್ದಾಣದ ಮೂಲಕ ಆರಂಭವಾದ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಆದು ಬಂದಿತು. ಮೋದಿ ಅವರನ್ನು ನೋಡಲೆಂದೇ ಆಗಮಿಸಿದ್ದ ಹುಬ್ಬಳ್ಳಿ, ಧಾರವಾಡ, ಗದಗ, ಹಾವೇರಿ ಸೇರಿದಂತೆ ಮತ್ತಿತರ ನಗರಗಳಿಂದ ಭಾರೀ ಸಂಖ್ಯೆಯಲ್ಲಿ ಯುವಕರು, ಯುವತಿಯರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬಂದು ನೆರೆದಿದ್ದರು.

ಎಲ್ಲೆಡೆ ಮೋದಿ ಮೋದಿ ಎಂಬ ಜೈಕಾರದ ಘೋಷಣೆಗಳು ಮೊಳಗಿದವು. ನೆರೆದಿದ್ದ ಜನಸ್ತೋಮವನ್ನು ಕಂಡು ಪುಳಕಿತರಾದ ಪ್ರಧಾನಿ ಮೋದಿ, ಎರಡು ಕಡೆ ರಸ್ತೆಯ ಮಧ್ಯ ಭಾಗದಲ್ಲಿ ಇಳಿದು ನೆರೆದಿದ್ದ ಜನಸ್ತೋಮದತ್ತ ಕೈ ಬೀಸಿದರು.

ದಿಕ್ಕು ಕಾಣದ ರಾಜಕಾರಣಿ ಸಿದ್ದರಾಮಯ್ಯ :ಆಶೋಕ್ ಟೀಕೆ

ಈ ಸಂದರ್ಭದಲ್ಲಂತು ಅಭಿಮಾನಿಗಳು ಹಾಗೂ ಕಾರ್ಯಕರ್ತರ ಸಂತಸಕ್ಕೆ ಪಾರವೇ ಇರಲಿಲ್ಲ. ಒಂದು ರೀತಿ ವಿದ್ಯುತ್ ಸಂಚಾರವೇ ಉಂಟಾಯಿತು. ಮೆರವಣಿಗೆ ಮುಗಿದ ಬಳಿಕ ನೇರವಾಗಿ ಕಾರ್ಯಕ್ರಮ ನಡೆಯುವ ರೈಲ್ವೆ ಮೈದಾನಕ್ಕೆ ಆಗಮಿಸಿದರು.

ರಾಷ್ಟ್ರೀಯ ಯುವಜನೋತ್ಸವ ಅಂಗವಾಗಿ ರೈಲ್ವೇ ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗಿತ್ತು. 40 ಸಾವಿರದವರೆಗೆ ಆಸನಗಳ ವ್ಯವಸ್ಥೆ, ಜತೆಗೆ ಅಲ್ಲಲ್ಲಿ ಎಲ್‍ಇಡಿ ಸ್ಕ್ರೀನ್‍ನ್ ವ್ಯವಸ್ಥೆ ಮಾಡಲಾಗಿತ್ತು.

ಮೋದಿ ಸಂಚರಿಸುವ ಮಾರ್ಗದಲ್ಲಿ ಧೂಳು ಏಳದಂತೆ ರಸ್ತೆ ದುರಸ್ತಿ ಮಾಡಲಾಗಿತ್ತು. ಕಾಂಪೌಂಡ್, ರಸ್ತೆ ವಿಭಜಕಗಳಿಗೆ ಸುಣ್ಣ-ಬಣ್ಣ ಬಳಿದು ಸುಂಗರಿಸಲಾಗಿತ್ತು. ಅಕ್ಕಪಕ್ಕದ ಕಾಂಪೌಂಡ್‍ಗಳ ಮೇಲೆ ಸುಂದರವಾದ ಗೋಡೆ ಬರಹ, ಚಿತ್ರಗಳನ್ನು ಬರೆದು ಮೆರಗು ನೀಡಲಾಗಿತ್ತು.

ನಗರದ ಎಲ್ಲ ಸರ್ಕಾರಿ ಕಚೇರಿಗಳ ಕಟ್ಟಡಗಳನ್ನು ವಿದ್ಯುತ್ ದೀಪಾಲಂಕಾರದಿಂದ ಸಿಂಗರಿಸಿದ್ದಲ್ಲದೆ, ಅಲ್ಲಲ್ಲಿ ಬಿಜೆಪಿ ಮುಖಂಡರ ಕಟೌಟ್, ಮೋದಿ ಹಾಗೂ ವಿವೇಕಾನಂದರ ಬೃಹತ್ ಕಟೌಟ್‍ಗಳು ರಾರಾಜಿಸಿದವು.

ಇನ್ನು ಮೋದಿ ಆಗಮನದ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. 2,900 ಪೆÇಲೀಸರನ್ನು ನಿಯೋಜನೆ ಮಾಡಲಾಗಿತ್ತು. ನಗರದಲ್ಲಿ 7 ಎಸ್‍ಪಿ ದರ್ಜೆ ಅಧಿಕಾರಿಗಳು, 25 ಡಿಐಎಸ್‍ಪಿ ದರ್ಜೆ, 60 ಪಿಐ, 18 ಕೆಎಸ್‍ಆರ್‍ಪಿ ಗರುಡಾ, ಸಿಆರ್‍ಡಿಆರ್ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು. ಸುಗಮ ಸಂಚಾರಕ್ಕೆ ಬೆಂಗಳೂರಿನ ಟ್ರಾಫಿಕ್ ಸಿಬ್ಬಂದಿಯನ್ನು ಮೀಸಲಿಡಲಾಗಿತ್ತು. ಟ್ರಾಫಿಕ್ ನಿಯಂತ್ರಣಕ್ಕಾಗಿ ಪರ್ಯಾಯ ಮಾರ್ಗಕ್ಕೆ ಸೂಚನೆ ನೀಡಲಾಗಿತ್ತು.

ಪಥ ಸಂಚಲನ-5 ಕಲಾ ತಂಡ: ರೈಲ್ವೆ ಮೈದಾನದಲ್ಲಿ 70/40 ಅಡಿ ಅಳತೆಯ ಬೃಹತ್ ವೇದಿಕೆ ಸಿದ್ಧಪಡಿಸಲಾಗಿತ್ತು. ಉದ್ಘಾಟನಾ ಸಮಾರಂಭದಲ್ಲಿ ಜಾನಪದ ಲೋಕ ಕೂಡ ಅನಾವರಣಗೊಂಡಿದ್ದು ವಿಶೇಷ. ರಾಜ್ಯದ ಐದು ಕಲಾ ಮೇಳಗಳು ಸೇರಿ ವಿವಿಧ ತಂಡಗಳಿಂದ ಜಾನಪದ ಪಥ ಸಂಚಲನ ನಡೆಸಿದವು.

ಕೆಲಗೇರಿಯ ಶ್ರೀ ದುರ್ಗಾದೇವಿ ಜಾನಪದ ಜಗ್ಗಲಗಿ ಮೇಳ, ಸಾಗರದ ಬೂದಿಯಪ್ಪ ಡೊಳ್ಳಿನ ತಂಡ, ಶೇರೆವಾಡದ ವೆಂಕಪ್ಪ ಭಜಂತ್ರಿ ಕರಡಿ ಮಜಲು, ಉಡುಪಿಯ ಲಕ್ಷ್ಮಿ ನಾರಾಯಣ ಚಂಡೆ ಮದ್ದಳೆ, ಮೈಸೂರಿನ ನಗಾರಿ ತಂಡಗಳು ಪಥಸಂಚಲನದಲ್ಲಿ ಪಾಲ್ಗೊಂಡಿದ್ದವು.

ಮಹಾರಾಷ್ಟ್ರದ ಧ್ರುವಂ ಗ್ಲೋಬಲ್ ಶಾಲೆಯ ವಿದ್ಯಾರ್ಥಿಗಳು ಡಾನ್ಸ್ ಹಾಗೂ ಯೋಗ ಪ್ರದರ್ಶಿಸಿದರು. ಮಧ್ಯಪ್ರದೇಶದ ತಂಡವು ಮಲ್ಲಕಂಬ ಪ್ರದರ್ಶನ ನೀಡಿತು. ಈ ಎರಡೂ ಕಾರ್ಯಕ್ರಮಕ್ಕೆ ಪ್ರತ್ಯೇಕ ವೇದಿಕೆ ಸಿದ್ಧಪಡಿಸಲಾಗಿತ್ತು.

ವೇದಿಕೆ ಮೇಲೆ 24 ಮಂದಿ ಗಣ್ಯರು: ಪ್ರಧಾನಿ ನರೇಂದ್ರ ಮೋದಿ ಸೇರಿ ದಂತೆ 25 ಮಂದಿ ಗಣ್ಯರು ವೇದಿಕೆ ಅಲಂಕರಿಸಿದರು. ಮೊದಲ ಸಾಲಿನಲ್ಲಿ ಪ್ರಧಾನಿ ಮೊದಿ, ರಾಜ್ಯಪಾಲ ಥಾವರ್ ಚೆಂದ್ ಗೆಲ್ಹೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರು, ಸಚಿವರು ಸೇರಿ 11 ಮಂದಿ ಗಣ್ಯಾತಿಗಣ್ಯರು ಇದ್ದರೆ, ಎರಡನೇ ಸಾಲಿನಲ್ಲಿ ಸ್ಥಳೀಯ ಶಾಸಕರು, ಎಂಎಲ್ಸಿಗಳು, ಮೇಯರ್ ಸೇರಿ 14 ಮಂದಿ ಕುಳಿತುಕೊಂಡಿದ್ದರು. ಮಾಜಿ ಸಿಎಂ ಜಗದೀಶ ಶೆಟ್ಟರ್ ಮೊದಲ ಸಾಲಿನಲ್ಲೇ ಕುಳಿತುಕೊಂಡಿದ್ದರು.

ವಿವೇಕಾನಂದರ ಆಶಯದಂತೆ ರಾಷ್ಟ್ರೀಯ ಶಿಕ್ಷಣ ನೀತಿ: ಸಚಿವ ಅಶ್ವತ್ಥನಾರಾಯಣ

ಯುವ ಜನೋತ್ಸವ ಆಚರಣೆ ಹಿನ್ನೆಲೆ: ಸ್ವಾಮಿ ವಿವೇಕಾನಂದರ ಜನ್ಮದಿನವಾದ ಇಂದು (ಜ.12) ಕಳೆದ 25 ವರ್ಷಗಳಿಂದ ಕೇಂದ್ರ ಯುವಜನ ಸೇವೆ ಮತ್ತು ಕ್ರೀಡಾ ಸಚಿವಾಲಯದಿಂದ ರಾಷ್ಟ್ರೀಯ ಯುವಜನೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಯುವಕರಲ್ಲಿನ ಸಾಂಸ್ಕೃತಿಕ ಪ್ರತಿಭೆಗೆ ವೇದಿಕೆ ಒದಗಿಸುವ ಜತೆಗೆ ಅವರಲ್ಲಿ ರಾಷ್ಟ್ರೀಯ ಏಕತೆ, ಕೋಮುಸೌಹಾರ್ದತೆ, ಧೈರ್ಯ ಹಾಗೂ ಸಾಹಸ ಪರಿಕಲ್ಪನೆ ಮೂಡಿಸುವ ದೃಷ್ಟಿಯಿಂದ ಈ ಉತ್ಸವ ಆಚರಿಸಿಕೊಂಡು ಬರಲಾಗುತ್ತಿದೆ.

ಧಾರವಾಡದಲ್ಲಿ ಇದೀಗ 26ನೇ ಯುವಜನೋತ್ಸವ ನಡೆಯುತ್ತಿದ್ದು, ಐದು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಸ್ಪರ್ಧೆ, ಸಾಹಸಕ್ರೀಡೆಗಳು ಸೇರಿ ವಿವಿಧ ಕಾರ್ಯಕ್ರಮ ನಡೆಯಲಿವೆ.

ಕರ್ನಾಟಕ ಕಾಲೇಜು ಮುಖ್ಯ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದರೆ, ಇದೇ ಕಾಲೇಜು ಮೈದಾನದಲ್ಲಿ ಯುವ ಕ್ಲೆ ೈಂಬಿಂಗ್ ಕಾರಾರಯಗಾರ, ಯುವ ವಾಯುಯಾನ ಕಾರ್ಯಾಗಾರ, ಹುಬ್ಬಳ್ಳಿಯ ಈಜುಗೊಳದಲ್ಲಿ ಯುವ ಸ್ಕೂಬಾ ಡೈವಿಂಗ್, ಕವಿವಿಯಲ್ಲಿ ಮಟನ್ ಬೈಕಿಂಗ್, ಆರ್.ಎನ್. ಶೆಟ್ಟಿಕ್ರೀಡಾಂಗಣದಲ್ಲಿ ದೇಸಿ ಕ್ರೀಡೆಗಳು ನಡೆಯಲಿವೆ.

Articles You Might Like

Share This Article