ಹಿರಿಯ ನಾಯಕ ಎಲ್.ಕೆ.ಅಡ್ವಾಣಿಗೆ ಹುಟ್ಟು ಹಬ್ಬದ ಶುಭ ಕೋರಿದ ಪ್ರಧಾನಿ

Social Share

ನವದೆಹಲಿ, ನ.8- ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಉಪಪ್ರಧಾನಿ ಎಲ್.ಕೆ.ಅಡ್ವಾಣಿ ಅವರ 95ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ಹಿರಿಯ ನಾಯಕರು ಶುಭ ಹಾರೈಸಿದ್ದಾರೆ.

ಬೆಳಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್‍ರೊಂದಿಗೆ ಅಡ್ವಾನಿ ಅವರ ಮನೆಗೆ ಭೇಟಿ ನೀಡಿದ ಪ್ರಧಾನಿ ಕೆಲ ಕಾಲ ಆತ್ಮೀಯ ಸಮಾಲೋಚನೆ ನಡೆಸಿದರು. ಇದೇ ವೇಳೆ ಟ್ವೀಟ್ ಮಾಡಿರುವ ಪ್ರಧಾನಿ ಬಿಜೆಪಿ ಇಂದು ದೇಶದಲ್ಲಿ ಪ್ರಬಲ ಶಕ್ತಿಯಾಗಿ ಹೊರ ಹೊಮ್ಮಲು ಅಡ್ವಾಣಿ ಪ್ರಧಾನ ಶಿಲ್ಪಿಯಾಗಿದ್ದಾರೆ ಎಂದು ಹೇಳಿದ್ದಾರೆ.

ಭಾರತದ ಬೆಳವಣಿಗೆಯಲ್ಲಿ ಅಡ್ವಾಣಿ ಅವರ ಪಾತ್ರ ಸ್ಮರಣೀಯ. ತಮ್ಮ ದೂರ ದೃಷ್ಟಿ ಹಾಗೂ ಬುದ್ದಿಶಕ್ತಿಯಿಂದ ಅಡ್ವಾಣಿ ಅವರು ದೇಶಾದ್ಯಂತ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಬಿಜೆಪಿಯನ್ನು ಶಕ್ತಿ ಶಾಲಿಯಾಗಿ ಬೆಳೆಸುವುದರಲ್ಲಿ ಅಡ್ವಾಣಿ ಅವರ ಪಾತ್ರಕ್ಕೆ ಬೇರೆ ಸಮರಿಲ್ಲ. ದೀರ್ಘ ಕಾಲ ಅವರು ಆರೋಗ್ಯಕರ ಜೀವನ ನಡೆಸಲಿ ಎಂದು ಹಾರೈಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್‍ಶಾ ಟ್ವೀಟ್ ಮಾಡಿದ್ದು, ಬಿಜೆಪಿ ಬೆಳೆಸಲು ಪಟ್ಟು ಬಿಡದ ಅವರ ಪರಿಶ್ರಮ ಮರೆಯಲಾಗುವುದಿಲ್ಲ. ಸರ್ಕಾರದ ಭಾಗವಾಗಿ ಅವರು ದೇಶದ ಅಭಿವೃದ್ದಿಗೆ ತೆಗೆದುಕೊಂಡ ಕ್ರಮಗಳು ಸ್ಮರಣೀಯ ಎಂದಿದ್ದಾರೆ.

ಸಿದ್ದರಾಮಯ್ಯನವರೇ ನಿಮ್ಮ ಕ್ಷೇತ್ರ ಅಂತಿಮಗೊಳಿಸಿ : ಸಿಎಂ ಬೊಮ್ಮಾಯಿ

ಕೇಂದ್ರ ಸಚಿವರಾದ ನಿತೀನ್ ಗಡ್ಕರಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿ ಅನೇಕ ಗಣ್ಯರು ಅಡ್ವಾಣಿ ಅವರಿಗೆ ಶುಭ ಹಾರೈಸಿದ್ದಾರೆ.

Articles You Might Like

Share This Article