ಲೈಂಗಿಕ ದೌರ್ಜನ್ಯ ಪ್ರಕರಣ : ಶ್ರೀಗಳಿಗೆ ಬಂಧನ ಭೀತಿ

Social Share

ಬೆಂಗಳೂರು,ಆ.28- ಲೈಂಗಿಕ ದೌರ್ಜನ್ಯ ಆರೋಪಕ್ಕೆ ಗುರಿಯಾಗಿರುವ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶಿವಶರಣ ಸ್ವಾಮೀಜಿಗಳಿಗೆ ಬಂಧನದ ಭೀತಿ ಎದುರಾಗಿದೆ. ಶ್ರೀಗಳ ವಿರುದ್ಧ ಆರೋಪ ಮಾಡಿರುವ ಇಬ್ಬರು ಬಾಲಕಿಯರನ್ನು ನಾಳೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತಿದೆ.

ವಿಚಾರಣೆ ಸಂದರ್ಭದಲ್ಲಿ ಬಾಲಕಿಯರು ಶ್ರೀಗಳ ವಿರುದ್ಧ ಹೇಳಿಕೆ ನೀಡಿದರೆ ಮುರುಘಾ ಶ್ರೀಗಳನ್ನು ಬಂಧಿಸಬೇಕಾದ ಅನಿವಾರ್ಯತೆ ಪೊಲೀಸರಿಗೆ ಎದುರಾಗುವ ಸಾಧ್ಯತೆಗಳಿವೆ. ನಾಳೆ ಜಿಲ್ಲಾ ನ್ಯಾಯಾೀಧಿಶರ ಮುಂದೆ ಬಾಲಕಿಯರನ್ನು ಹಾಜರುಪಡಿಸುವ ಸಾಧ್ಯತೆಯಿದ್ದು, ನ್ಯಾಯಾೀಧಿಶರು ಅವರಿಂದ ಹೇಳಿಕೆ ಪಡೆಯಲಿದ್ದಾರೆ.

ಒಂದು ವೇಳೆ ಮಠದಲ್ಲಿ ತಮಗೆ ಆರೋಪಿ ಸ್ಥಾನದಲ್ಲಿರುವ ಶ್ರೀಗಳು ಹಾಗೂ ಇತರರು ನಿರಂತರವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ನ್ಯಾಯಾೀಧಿಶರ ಮುಂದೆ ಬಾಲಕಿಯರು ಹೇಳಿಕೆ ದಾಖಲಿಸಿದರೆ ಶ್ರೀಗಳ ವಿರುದ್ಧ ಐಪಿಸಿ ಸೆಕ್ಷನ್ 164ರಡಿ ದೂರು ದಾಖಲಾದರೆ ಶ್ರೀಗಳಿಗೆ ಕಾನೂನಿನ ಕುಣಿಕೆ ಬಿಗಿಯಾಗುತ್ತದೆ.

ಇನ್ನು ಪ್ರಕರಣದ ಆರೋಪಿ ಸ್ಥಾನದಲ್ಲಿರುವ ಕೆಲವು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಸ್ಥಾನದಲ್ಲಿರುವ ಶ್ರೀಗಳು ಮಠದಲ್ಲೇ ಉಳಿದಿದ್ದಾರೆ.

ಹೇಳಿಕೆ ದಾಖಲು: ಮಕ್ಕಳ ಕಲ್ಯಾಣ ಸಮಿತಿಯ ನಿರ್ದೇಶಕರು ಹಾಗೂ ಚಿತ್ರದುರ್ಗ ಉಪವಿಭಾಗದ ಡಿವೈಎಸ್ಪಿ ಅವರು ಇಂದು ಸಾಂತ್ವಾನ ಕೇಂದ್ರಕ್ಕೆ ತೆರಳಿ ಸಂತ್ರಸ್ತರಿಂದ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿ ಹೇಳಿಕೆ ಪಡೆದುಕೊಂಡರು. ಬಾಲಕಿಯರ ಪ್ರತಿಯೊಂದು ಹೇಳಿಕೆಯನ್ನು ವಿಡಿಯೋ ರೆಕಾರ್ಡ್ ಮಾಡಿಕೊಳ್ಳಲಾಗಿದ್ದು, ಈ ಸಂದರ್ಭದಲ್ಲಿ ಬಾಲಕಿಯರ ಪೋಷಕರು ಕೂಡ ಸಾಂತ್ವಾನ ಕೇಂದ್ರದಲ್ಲಿದ್ದರು.

ಮಠಾೀಧಿಶರ ಬೆಂಬಲ: ಲೈಂಗಿಕ ಕಿರುಕುಳ ಆರೋಪಕ್ಕೆ ಗುರಿಯಾಗಿರುವ ಮುರುಘಾ ಶ್ರೀಗಳಿಗೆ ನಾಡಿನ ಹಲವಾರು ಮಠಾೀಧಿಶರು ಬೆಂಬಲ ಸೂಚಿಸಿದ್ದಾರೆ. ಮಠಕ್ಕೆ ಭೇಟಿ ನೀಡಿದ ಅನೇಕ ಸ್ವಾಮೀಜಿಗಳು ಮುರುಘಾ ಶ್ರೀಗಳಿಗೆ ನೈತಿಕ ಬೆಂಬಲ ಸೂಚಿಸಿ, ಮೇಲ್ನೋಟಕ್ಕೆ ಈ ಪ್ರಕರಣದಲ್ಲಿ ಪಿತೂರಿ ನಡೆಸಿರುವಂತೆ ಕಾಣುತ್ತಿರುವುದರಿಂದ ಘಟನೆಯ ಸತ್ಯಸತ್ಯತೆಗಾಗಿ ಕಾನೂನು ಹೋರಾಟ ಮಾಡೋಣ ಎಂದು ಶ್ರೀಗಳಿಗೆ ಸಲಹೆ ನೀಡಿದರು.

ಉಳಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸೇರಿದಂತೆ ಮತ್ತಿತರರು ಮುರುಘಾ ಶ್ರೀಗಳಿಗೆ ಬೆಂಬಲ ಸೂಚಿಸಿದ್ದಾರೆ. ಪೋಕ್ಸೋ ಕಾಯ್ದೆಯಡಿ ಶ್ರೀಗಳ ವಿರುದ್ಧ ದೂರು ದಾಖಲಾಗಿರುವುದು ಕೇಳಿ ನನಗೆ ಆಶ್ಚರ್ಯ ಉಂಟಾಗಿದೆ. ಆದಷ್ಟು ಬೇಗ ಶ್ರೀಗಳು ಆರೋಪ ಮುಕ್ತರಾಗಿ ಹೊರಬರಲಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Articles You Might Like

Share This Article