ಪೋಲೀಸರ ಮೇಲೆ ಸುಳ್ಳು ಆರೋಪ ಮಾಡಿದರೆ ಕಠಿಣ ಕ್ರಮ

Social Share

ಬೆಂಗಳೂರು, ಫೆ.9- ನಗರದಲ್ಲಿ ದಾಖಲಾಗುವ ಒಟ್ಟು ಪ್ರಕರಣಗಳ ಪೈಕಿ ಶೇ. 20ರಿಂದ 25ರಷ್ಟು ಪ್ರಕರಣಗಳು ಸೈಬರ್ ಪ್ರಕರಣಗಳಾಗಿದ್ದು, ಅವುಗಳನ್ನು ಆದ್ಯತೆ ಮೇರೆಗೆ ಆದಷ್ಟು ಶೀಘ್ರದಲ್ಲಿ ಇತ್ಯರ್ಥಪಡಿಸುವುದಾಗಿ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಈ ಪ್ರಕರಣಗಳ ಗಂಭೀರತೆಯನ್ನು ಅರಿತು ಕ್ರಮ ಕೈಗೊಳ್ಳುತ್ತೇವೆ. ಸೈಬರ್ ಠಾಣೆಗಳನ್ನು ಬಲಪಡಿಸಲು ಚರ್ಚೆ ನಡೆಯುತ್ತಿದೆ. ಆದಷ್ಟು ಬೇಗ ರೀಆರ್ಗನೈಜೇಷನ್ ಮಾಡುತ್ತೇವೆ ಎಂದರು.

ಬೆಂಗಳೂರಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ 11 ಮೇಲ್ಸೇತುವೆ ನಿರ್ಮಾ

ಸಾರ್ವಜನಿಕರು ವಿನಾಃ ಕಾರಣ ಸುಳ್ಳು ಆರೋಪ ಮಾಡಿದರೆ ಗೊತ್ತಾಗುತ್ತದೆ. ತಪ್ಪಾಗಿ ನಮ್ಮ ವಿರುದ್ಧ ಇಲ್ಲ, ಸಲ್ಲದ ಆರೋಪ ಮಾಡಬೇಡಿ. ಇದರಿಂದ ಇಬ್ಬರು ಸಮಯವೂ ವ್ಯರ್ಥ. ಜನಸ್ನೇಹಿಯಾಗಿ ಕೆಲಸ ಮಾಡೋಣ ಎಂದು ಅವರು ತಿಳಿಸಿದರು.

ನಮ್ಮ ಪೊಲೀಸರು ಬಾಡಿ ಕ್ಯಾಮೆರಾ ಅಳವಡಿಸಿಕೊಂಡಿದ್ದಾರೆ. ಸುಳ್ಳು ಆರೋಪ ಮಾಡಿದರೆ ಗೊತ್ತಾಗುತ್ತದೆ. ವಿನಾಃಕಾರಣ ಸುಳ್ಳು ಆರೋಪ ಮಾಡಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.

ಜನಸಾಮಾನ್ಯರು ಹಿರಿಯ ಅಕಾರಿಗಳನ್ನು ಭೇಟಿ ಮಾಡುವ ಮುನ್ನ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿ. ನಾವು ಪೊಲೀಸರಿಗೆ ಪಾರದರ್ಶಕವಾಗಿ ದೂರು ತೆಗೆದುಕೊಳ್ಳಬೇಕೆಂದು ಸೂಚನೆ ನೀಡಿದ್ದೇವೆ ಎಂದರು.

ಬೆಂಗಳೂರು ನಗರದೊಳಗೆ ಟ್ರಾಕ್ಟರ್ ಸಂಚಾರ ನಿರ್ಬಂಧ ವಿರೋಧಿಸಿ ಬಾರಿ ಪ್ರತಿಭಟನೆ

ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕರೊಬ್ಬರು ದೂರು ನೀಡಲು ಹೋದಾಗ ದೂರು ಸ್ವೀಕರಿಸದ ಬಗ್ಗೆ ಗಂಭೀರವಾಗಿ ಪರಿಗಣಿಸಿದ್ದೇವೆ ಎಂದರು. ಸಾಮಾಜಿಕ ಜಾಲತಾಣದಲ್ಲಿ ದೂರುಗಳು ಬಂದರೆ ಆ ದೂರುಗಳನ್ನು ನಾವು ಆಯಾ ಆಯಾ ಠಾಣೆಗಳಿಗೆ ದೂರನ್ನು ವರ್ಗಾಯಿಸುತ್ತೇವೆ ಎಂದರು.

police, accusations, City Police, Commissioner, Pratap Reddy,

Articles You Might Like

Share This Article