ಚಾಮರಾಜಪೇಟೆಯಲ್ಲಿ RAF ಹಾಗೂ ಪೊಲೀಸರ ಪಥಸಂಚಲನ

Social Share

ಬೆಂಗಳೂರು, ಆ.30- ಗಣೇಶ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಯಾವುದೇ ಆತಂಕ ಇಲ್ಲದೆ ಆಚರಿಸಲು ಹಾಗೂ ಸಾರ್ವಜನಿಕರಲ್ಲಿ ಭರವಸೆ ಮೂಡಿಸುವ ನಿಟ್ಟಿನಲ್ಲಿ ಇಂದು ಚಾಮರಾಜಪೇಟೆಯಲ್ಲಿ ಕ್ಷಿಪ್ರಕಾರ್ಯಾಚಾರಣೆ ಪಡೆ (ಆರ್‍ಎಎಫ್) ಹಾಗೂ ಸ್ಥಳೀಯ ಪೊಲೀಸರು ಇಂದು ಪಥಸಂಚಲನ ನಡೆಸಿದರು.

ಚಾಮರಾಜಪೇಟೆಯ ಹಲವು ಬಡಾವಣೆಗಳಲ್ಲಿ ಇಂದು ಸಂಚರಿಸಿದ 120 ಆರ್‍ಎಎಫ್ ಸಿಬ್ಬಂದಿ ಮತ್ತು ಸ್ಥಳೀಯ 100ಕ್ಕೂ ಹೆಚ್ಚು ಪೊಲೀಸರು ಪಥ ಸಂಚಲನ ನಡೆಸುವ ಮೂಲಕ ಕಿಡಿಗೇಡಿಗಳಿಗೆ ಕಠಿಣ ಎಚ್ಚರಿಕೆ ರವಾನಿಸಿದರು.

ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿಯೂ ಸಂಚರಿಸಿದ ಈ ಪಥ ಸಂಚಲನದ ನೇತೃತ್ವವನ್ನು ಪಶ್ಚಿಮ ವಲಯ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ವಹಿಸಿದ್ದರು. ಡಿಸಿಪಿ ಲಕ್ಷ್ಮಣ್ ನಿಂಬರಗಿ ಸೇರಿದಂತೆ ಹಲವು ಅಕಾರಿಗಳು ಭಾಗಿಯಾಗಿದ್ದರು.

ಇಂದು ಹಲವು ಬಡಾವಣೆಗಳಲ್ಲಿ ಪಥಸಂಚಲನ ನಡೆಸಿದ್ದು, ಸಂಜೆ ವಾಲ್ಮೀಕಿ ನಗರದಲ್ಲೂ ಕೂಡ ಪಥ ಸಂಚಲನ ನಡೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ಸೂಕ್ಷ್ಮ ಪ್ರದೇಶವಾದ ಜೆಜೆ ನಗರದಲ್ಲಿ ಕೂಡ ಪೊಲೀಸರು ಪಥ ಸಂಚಲನ ಮಾಡಿದ್ದರು.

Articles You Might Like

Share This Article