ಕಾನ್ಪುರ್(ಉ.ಪ್ರ),ಆ.23- ಕಾನ್ಪುರ್ ಜಿಲ್ಲೆಯ ಪಶ್ಚಿಮ ವಲಯದ ಸ್ವರೂಪ್‍ನಗರದಲ್ಲಿ ಅಕ್ರಮವಾಗಿ ಹುಕ್ಕಾ ಬಾರ್ ನಡೆಸುತ್ತಿದ್ದ 12 ಮಂದಿಯನ್ನು ಕಾನ್ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಎರಡು ರೆಸ್ಟೋರೆಂಟ್‍ಗಳಲ್ಲಿ ಹುಕ್ಕಾ ನೀಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ ಎಸಿಪಿ ಬ್ರಿಜ್ ನಾರಾಯಣ್ ಸಿಂಗ್ ಅವರು ಸ್ವರೂಪ್ ನಗರ ಪೊಲೀಸ್ ಠಾಣೆಯ ತಂಡದೊಂದಿಗೆ ಈ ದಾಳಿ ನಡೆಸಿದ್ದಾರೆ.
ಅಲ್ಲದೆ ಆನ್‍ಲೈನ್ ಕೆಫೆ ಮತ್ತು ಫ್ಲೈಯಿಂಗ್ ಸಾಸರ್ ಬಾರ್ ಮತ್ತು ರೆಸ್ಟೋರೆಂಟ್‍ಗಳಲ್ಲೂ ಹುಕ್ಕಾ ಬಾರ್‍ಗಳು ನಡೆಸುತ್ತಿರುವುದು ಕಂಡುಬಂದಿದೆ. ದಾಳಿಯಿಂದ ಹುಕ್ಕಾ, ಅವುಗಳ ಸುವಾಸನೆಭರಿತ ವಸ್ತುಗಳು ಮತ್ತಿತರ ಸಾಮಾಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹುಕ್ಕಾ ನಿಷೇಧಿಸಲಾಗಿದೆ ಆದರೆ ನಗರದ ಅನೇಕ ಲಾಂಜ್‍ಗಳಲ್ಲಿ ಕಾನೂನುಬಾಹಿರವಾಗಿ ನಡೆಸಲಾಗುತ್ತಿದೆ. ಈ ವೇಳೆ 12 ಮಂದಿಯನ್ನು ಬಂಧಿಸಿ ದೊಡ್ಡ ಕ್ರಮ ಕೈಗೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಎಫ್‍ಐಆರ್‍ಗಳು ದಾಖಲಾಗಿವೆ ಎಂದು ಎಡಿಸಿಪಿ ಬ್ರಿಜೇಶ್ ಶ್ರೀವಾಸ್ತವ ತಿಳಿಸಿದ್ದಾರೆ.