ಗ್ರಾಮಸ್ಥರಿಂದ ಪೊಲೀಸರ ಮೇಲೆ ಹಲ್ಲೆ

Social Share

ತುಮಕೂರು,ಅ.13-ಚರಂಡಿ ನಿರ್ಮಾಣ ಕಾಮಗಾರಿ ವಿಚಾರವಾಗಿ ಜಗಳ ನಡೆದು ಗ್ರಾಮಸ್ಥರು ಸರ್ಕಲ್ ಇನ್ಸ್‍ಪೆಕ್ಟರ್ ಮತ್ತು ಮಹಿಳಾ ಸಿಬ್ಬಂದಿ ಮೇಲೆ ಹಲ್ಲೇ ನಡೆಸಿರುವ ಪ್ರಕರಣ ಪಾವಗಡದಲ್ಲಿ ನಡೆದಿದೆ.

ಪಾವಗಡ ತಾಲ್ಲೂಕಿನ ರಾಪ್ಟೆ ಗ್ರಾಮದ ಪರಿಶಿಷ್ಟರ ಕಾಲೋನಿಯಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ವಿಚಾರವಾಗಿ ವಿವಾದವುಂಟಾಗಿದ್ದು, ಚರಂಡಿ ನಿರ್ಮಾಣಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಶಿವರಾಜಯ್ಯ ಅವರು ಪೊಲೀಸ್ ಸಿಬ್ಬಂದಿಯೊಂದಿಗೆ ತೆರಳಿ ಕಾಮಗಾರಿ ನಡೆಸಲು ಮುಂದದಾಗ, ಜಗಳ ನಡೆದ ಗ್ರಾಮಸ್ಥರು ಸರ್ಕಲ್ ಇನ್ಸ್‍ಪೆಕ್ಟರ್ ಕಾಂತರೆಡ್ಡಿ, ಮಹಿಳಾ ಕಾನ್ ಸ್ಟೇಬಲ್ ರಂಜಿತಾ ಮೇಲೆ ಹಲ್ಲೇ ನಡೆಸಿದ್ದಾರೆ ಈ ಸಂಬಂಧ ಪಾವಗಡ ಗ್ರಾಮಾಂತರ ಠಾಣೆಯಲ್ಲಿ ರವೀಂದ್ರರೆಡ್ಡಿ ಮತ್ತು ಇತರರ ಮೇಲೆ ಪ್ರಕರಣ ದಾಖಲಾಗಿದೆ.

ಪ್ರಕರಣದ ಹಿನ್ನೆಲೆ: ಪರಿಶಿಷ್ಟರ ಕಾಲೋನಿಯ ಚರಂಡಿಯ ನೀರು ಹೊರ ಹೋಗಲು ಚರಂಡಿ ಕಾಮಗಾರಿಗೆ ಗ್ರಾಮಸ್ಥರು ಮೂರು ತಿಂಗಳ ಹಿಂದೆ ಅಡ್ಡಿಪಡಿಸಿದ್ದರು. ಈ ಸಂಬಂಧ ನ್ಯಾಯಾಲಯದಲ್ಲಿ ಕಾಮಗಾರಿಗೆ ತಡೆಯಾಜ್ಞೆಗಾಗಿ ದಾವೆ ಹೂಡಲಾಗಿದ್ದು, ಈಗಾಗಲೇ ಇರುವ ಸಿಸಿರಸ್ತೆಯನ್ನು ಒಡೆಯದೇ ಚರಂಡಿಯನ್ನು ನಿರ್ಮಿಸುವಂತೆ ಜಿಪಂ ಸಿಇಒ ಸೂಚನೆ ನೀಡಿದ್ದರು ಎನ್ನಲಾಗಿದೆ. ಗ್ರಾಮದ ಕೆಲವರು ಚರಂಡಿ ನಿರ್ಮಾಣಕ್ಕೆ ಅನಗತ್ಯವಾಗಿ ಅಡ್ಡಿಪಡಿಸಲಾಗುತ್ತಿದೆ ಎಂದು ಗ್ರಾಮದ ದಲಿತ ಮುಖಂಡರು ಆರೋಪಿಸಿದ್ದಾರೆ.

Articles You Might Like

Share This Article