ಹೈದರಾಬಾದ್, ಡಿ .11-ರಾಜ್ಯಾದ್ಯಂತ ಪಾದಯಾತ್ರೆಗೆ ಅನುಮತಿ ನಿರಾಕರಿಸಿದ್ದನ್ನು ವಿರೋಧಿಸಿ ವೈಎಸ್‍ಆರ್ ತೆಲಂಗಾಣ ಪಕ್ಷದ ಅಧ್ಯಕ್ಷೆ ವೈಎಸ್ ಶರ್ಮಿಳಾ ಅವರ ಅನಿರ್ದಿಷ್ಟಾವ ಉಪವಾಸದ ತಡೆದ ಪೊಲೀಸರು ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.
ಶರ್ಮಿಳಾ ಶುಕ್ರವಾರ ಇಲ್ಲಿನ ಪಕ್ಷದ ಪ್ರಧಾನ ಕಚೇರಿಯಲ್ಲಿ ಅನಿರ್ದಿಷ್ಟಾವ ಉಪವಾಸ ಸತ್ಯಾಗ್ರಹ ಆರಂಭಿಸಿದ್ದು ಮುಂಜಾನೆ 1ಗಂಟೆ ಆಕೆಯ ಆರೋಗ್ಯ ಹದಗೆಟ್ಟಿದೆ ಎಂದು ತಿಳಿದ ತಕ್ಷಣ ಪೊಲೀಸರು ಬಲವಂತವಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದು ತಿಳಿದುಬಂದಿದೆ.
ಮಾಧ್ಯಮ ಸಿಬ್ಬಂದಿ, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ದೂರ ಸರಿಯುವಂತೆ ತಿಳಿಸಿ ಪೊಲೀಸರು ಏಕಾಏಕಿ ಆಂಬುಲೆನ್ಸ್ ಮೂಲಕ ಶರ್ಮಿಳಾ ಅವರನ್ನು ಆಸ್ಪತ್ರೆಗೆ ವರ್ಗಾಹಿಸಿದರು. ಶರ್ಮಿಳಾ ಅವರ ಆರೋಗ್ಯದ ಮೇಲೆ ನಿಗಾ ಇರಿಸಿರುವ ವೈದ್ಯರು, ಶರ್ಮಿಳಾ ಅವರ ರಕ್ತದೊತ್ತಡ ಮತ್ತು ಗ್ಲೂಕೋಸ್ ಮಟ್ಟವು ಅಪಾಯಕಾರಿ ಮಟ್ಟಕ್ಕೆ ಕುಸಿದಿದೆ ಎಂದು ಹೇಳಿದ್ದಾರೆ.
ಊಟದಲ್ಲಿ ಕೂದಲು ಸಿಕ್ಕಿದ್ದಕ್ಕೆ ಪತ್ನಿಗೆ ತಳಿಸಿ ತಲೆಬೋಳಿಸಿದ ಸೈಕೋ ಪತಿ
ಅವಿಭಜಿತ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈಎಸ್ ರಾಜಶೇಖರ ರೆಡ್ಡಿ ಅವರ ಪುತ್ರಿ ಶರ್ಮಿಳಾ ಶುಕ್ರವಾರ ಹುಸೇನ್ ಸಾಗರ ಕೆರೆ ಬಳಿಯ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪಾದಯಾತ್ರೆ ನಡೆಸಲು ಉದ್ದೇಶಿಸಿದದರು ಆದರೆ ಅವರ ಅನುಮತಿ ನಿರಾಕರಿಸಲಾಗಿತ್ತು ಇದನ್ನು ವಿರೋಧಿಸಿ ಲೋಟಸ್ ಪಾಂಡ್ ಪ್ರದೇಶದಲ್ಲಿರುವ ಪಕ್ಷದ ಕಚೇರಿ ಬಳಿ ಉಪವಾಸ ಆರಂಭಿಸಿದರು.
ಟೀ ಅಂಗಡಿಗೆ ನುಗ್ಗಿ ಹಲ್ಲೆ ಮಾಡಿದ್ದ ನಾಲ್ವರು ಪುಂಡರು ಅಂದರ್
Police, break, YS Sharmila, indefinite fast, shift, hospital,