ಮೈಸೂರು, ಜ. 14- ಸ್ಯಾಂಟ್ರೋ ರವಿಯನ್ನು ನಗರ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿ ಹಲವು ಮಹತ್ವದ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ.ಗುಜರಾತ್ನಲ್ಲಿ ಸೆರೆ ಸಿಕ್ಕಿದ ನಂತರ ವಿಮಾನದಲ್ಲಿ ರಾತ್ರಿ ಸ್ಯಾಂಟ್ರೋ ರವಿಯನ್ನು ಬೆಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಬಂದು ನಂತರ ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ರಸ್ತೆ ಮಾರ್ಗವಾಗಿ ಮೈಸೂರಿಗೆ ಕರೆ ತರಲಾಯಿತು.
ಸಿನಿಮೀಯ ರೀತಿಯಲ್ಲಿ ಕೆ.ಎಸ್.ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋರವಿ(51)ಯನ್ನು ಪೊಲೀಸರು ನಿನ್ನೆ ಗುಜರಾತ್ ನಲ್ಲಿ ಬಂಸಿದ್ದಾರೆ.ನಿನ್ನೆ ಮಧ್ಯ ರಾತ್ರಿಯಲ್ಲೇ ಸ್ಯಾಂಟ್ರೋ ರವಿಯನ್ನು ಮೈಸೂರಿಗೆ ಕರೆ ತಂದ ಪೊಲೀಸರು ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ,ವಿಚಾರಣೆ ನಂತರ ತನಿಖಾಕಾರಿಯಾಗಿರುವ ಎನ್ಆರ್ ವಿಭಾಗದ ಎಸಿಪಿ ಶಿವಶಂಕರ್ ನೇತೃತ್ವದಲ್ಲಿ ನ್ಯಾಯಾೀಶರ ಮುಂದೆ ಸ್ಯಾಂಟ್ರೋ ರವಿಯನ್ನು ಹಾಜರುಪಡಿಸಲಿದ್ದಾರೆ.
ಗುಜರಾತ್ನ ಅಹಮದಾಬಾದ್ನಲ್ಲಿ ಅಡಗಿ ಕುಳಿತಿದ್ದ ಮಂಜುನಾಥ್ ಕೆ. ಎಸ್ ಅಲಿಯಾಸ್ ಸ್ಯಾಂಟ್ರೋ ರವಿ(51) ಮತ್ತು ಈತನ ಸಹಚರರಾದ ರಾಮ್ ಜೀ(45), ಸತೀಶ್ ಕುಮಾರ್(35) ಹಾಗೂ ಮಧುಸೂದನ್ ಅಲಿಯಾಸ್ ಮಧು ಎಂಬುವರನ್ನು ಬಂಸಲಾಗಿದೆ.
ಜನರ ನಿರೀಕ್ಷೆಗೆ ತಕ್ಕಂತೆ ಸರ್ಕಾರ ನಡೆಸದಿದ್ರೆ ಜೆಡಿಎಸ್ ಪಕ್ಷ ವಿಸರ್ಜಿಸುತ್ತೇನೆ : ಹೆಚ್ಡಿಕೆ
ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಸ್ಯಾಂಟ್ರೋ ರವಿ ನಾಪತ್ತೆಯಾಗಿದ್ದ ಈತನ ಬಂಧನಕ್ಕೆ 11 ವಿಶೇಷ ತಂಡಗಳನ್ನು ರಚಿಸಲಾಗಿತ್ತು. ರಾಜ್ಯದ ಎಲ್ಲಾ ಜಿಲ್ಲಾ ಪೊಲೀಸರು ಈತನಿಗಾಗಿ ಶೋಧ ನಡೆಸುತ್ತಿದ್ದರು.
ಈತ ಮೈಸೂರಿನಿಂದ ಕೊಚ್ಚಿ, ಪುಣೆ, ಮಂತ್ರಾಲಯ ಮಾರ್ಗವಾಗಿ ಗುಜರಾತ್ಗೆ ಪ್ರಯಾಣಿಸಿದ್ದ. ಪೊಲೀಸರಿಗೆ ಸಿಗಬಾರದೆಂದು ಮೀಸೆ, ಗಡ್ಡ ಬೋಳಿಸಿ ವಿಗ್ ತೆಗೆದು ವೇಷ ಬದಲಿಸಿಕೊಂಡು ತಿರುಗಾಡುತ್ತಿದ್ದ. ಅಲ್ಲದೆ, ಸಿಮ್ ಕಾರ್ಡ್ ಬದಲಾಯಿಸಿದ್ದರಿಂದ ಬಂಧನ ವಿಳಂಬವಾಗಿತ್ತು. ಪೊಲೀಸರು ಸ್ಯಾಂಟ್ರೋ ರವಿಯ ಸಹಚರರನ್ನು ವಿಚಾರಣೆಗೊಳಪಡಿಸಿ ಮಾಹಿತಿ ಪಡೆದು ಗುಜರಾತ್ನಲ್ಲಿ ಆತನನ್ನು ಖೆಡ್ಡಾಕ್ಕೆ ಬೀಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈತನಕ ಈ ಪ್ರಕರಣದಲ್ಲಿ ನಾಲ್ವರನ್ನು ಬಂಸಿರುವ ಪೊಲೀಸರು ಉಳಿದವರಿಗಾಗಿ ಶೋಧ ನಡೆಸುತ್ತಿದ್ದಾರೆ.
ರವಿ ವಿರುದ್ಧ 21 ಪ್ರಕರಣ
ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ಮೇಲೆ ಒಟ್ಟು 21 ಪ್ರಕರಣಗಳಿವೆ ಎಂದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಾದ ಅಲೋಕ್ ಕುಮಾರ್ ತಿಳಿಸಿದರು.ಈ ಸಂಜೆಯೊಂದಿಗೆ ಮಾತನಾಡಿದ ಅವರು, ಬೆಂಗಳೂರು-ಮೈಸೂರಿನಲ್ಲಿ ಈತನ ಮೇಲೆ ಅಪಹರಣ, ಹಲ್ಲೆ , ಲೈಂಗಿಕ ದೌರ್ಜನ್ಯ ಇತ್ಯಾದಿ ಪ್ರಕರಣಗಳು ದಾಖಲಾಗಿವೆ ಎಂದರು.
2005ರಲ್ಲಿ ಸ್ಯಾಂಟ್ರೋ ರವಿಯನ್ನು ಮೈಸೂರು ಪೊಲೀಸರು ಬಂಸಿದ್ದರು. 11 ತಿಂಗಳು ಜೈಲಿನಲ್ಲಿದ್ದ ಈತ ಹೊರ ಬಂದ ನಂತರ ತನ್ನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದನು.
ಜ.2ರಂದು ಈತನ 2ನೆ ಪತ್ನಿ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ ನಂತರ ತಲೆಮರೆಸಿಕೊಂಡಿದ್ದ. ಇದೀಗ ಆತನನ್ನು ಬಂಸಿದ್ದೇವೆ. ವಿಜಯನಗರ ಠಾಣೆಯಲ್ಲಿ ದಾಖಲಾದ ಪ್ರಕರಣದ ಬಗ್ಗೆ ಮಾತ್ರ ಈಗ ವಿಚಾರಣೆ ಮಾಡುತ್ತಿದ್ದೇವೆ. ನಂತರ ವಿಚಾರಣೆಯಲ್ಲಿ ಈತ ನೀಡುವ ಹೇಳಿಕೆಗಳ ಆಧಾರದ ಮೇಲೆ ಮುಂದಿನ ತನಿಖೆ ಮಾಡುತ್ತೇವೆ ಎಂದು ಅವರು ಹೇಳಿದರು.
#SantroRavi, #Mysuru,