ಪೊಲೀಸ್ ವಾಹನ ಡಿಕ್ಕಿ : ಮೂರು ಯುವಕರ ದುರ್ಮರಣ

Social Share

ಶರಣ್, ಅ.12- ಪೊಲೀಸ್ ವಾಹನ ಡಿಕ್ಕಿ ಹೊಡೆದು ದ್ವಿಚಕ್ರ ವಾಹನದ ಪೆಟ್ರೋಲ್ ಟ್ಯಾಂಕ್ ಸ್ಪೋಟಗೊಂಡಿದ್ದರಿಂದ ಮೂವರು ಯುವಕರ ಮೃತಪಟ್ಟ ಘಟನೆ ಬಿಹಾರ ಜಿಲ್ಲೆಯ ಶರಣ್ ಜಿಲ್ಲೆಯ ರೆವೆಲಗಂಜ್ ಸ್ಪೋಲೀಸ್ ಠಾಣೆ ವ್ಯಾಪ್ತಿಯ ಡಿಯೋರಿಯಾ ಗ್ರಾಮದಲ್ಲಿ ನಡೆದಿದೆ.

ಜಯಪ್ರಕಾಶ್ ನಾರಾಯಣ್ ಅವರ 120ನೇ ಜನ್ಮ ದಿನೋತ್ಸವದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗವಹಿಸಿದ್ದರು. ಆ ಕಾರ್ಯಕ್ರಮದ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಪೊಲೀಸರ ವಾಹನ ರಾಷ್ಟ್ರೀಯ ಹೆದ್ಧಾರಿ 531ರಲ್ಲಿ ವಾಪಾಸ್ ಬರುವಾಗ ದುರ್ಘಟನೆ ನಡೆದಿದೆ.

ಮೂವರು ಪ್ರಯಾಣಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಪೊಲೀಸ್ ವ್ಯಾನ್ ಡಿಕ್ಕಿ ಹೊಡೆದಿದ್ದು, ಕೆಲ ಮೀಟರ್‍ಗಳ ದೂರದ ವರೆಗು ಸವಾರರು ಮತ್ತು ದ್ವಿಚಕ್ರವಾಹನವನ್ನು ವಾನ್ ಎಳೆದುಕೊಂಡು ಹೋಗಿದೆ. ಇದರಿಂದ ಬೈಕ್‍ನ ಟ್ಯಾಂಕ್ ಸ್ಪೋಟಗೊಂಡಿದೆ. ಅಪಘಾತದಲ್ಲಿ ಕುಂದನ್ ಮಂಝಿ (22), ಬುಲ್‍ಬುಲ್ ಮಂಝಿ (25), ಕಿಶೋರ್ ಮಂಝಿ (24) ಎಂಬುವರು ಮೃತಪಟ್ಟಿದ್ದಾರೆ.

ಗಾಯಾಳುವೊಬ್ಬರು ಬೆಂಕಿಯಲ್ಲಿ ಹತ್ತಿ ಉರಿಯುತ್ತಿರುವುದನ್ನು ಪೊಲೀಸರು ದೂರದಲ್ಲಿ ನಿಂತು ನೋಡುತ್ತಿದ್ದರು ಎಂದು ಹೇಳಲಾಗಿದೆ. ಈ ಕುರಿತ ವಿಡಿಯೋಗಳು ಲಭ್ಯ ಇವೆ ಎನ್ನಲಾಗಿದ್ದು, ಅವರನ್ನು ಹಾಜರು ಪಡಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಕುಮಾರ್ ಮನವಿ ಮಾಡಿದ್ದಾರೆ.

ಅಪಘಾತಕ್ಕೆ ಸಂಬಂಧ ಪಟ್ಟಂತೆ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Articles You Might Like

Share This Article