ಪೊಲೀಸರೊಂದಿಗೆ ಸಾರ್ವಜನಿಕರು ಸಹಕರಿಸಿದರೆ ಅಪರಾಧ ನಿಯಂತ್ರಣ ಸಾಧ್ಯ

Social Share

ಬೆಂಗಳೂರು, ಜ.28- ಸಾರ್ವಜನಿಕರು ನಮ್ಮೊಟ್ಟಿಗೆ ಸಹಕರಿಸಿದರೆ ಅಪರಾಧ ನಿಯಂತ್ರಿಸಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಬಹುದು ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಇಂದಿಲ್ಲಿ ತಿಳಿಸಿದರು.
ಪುಲಿಕೇಶಿ ನಗರ ಪೊಲೀಸ್ ಠಾಣೆ ವತಿಯಿಂದ ಹಮ್ಮಿ ಕೊಂಡಿದ್ದ ಸಾರ್ವಜನಿಕ ಸಂಪರ್ಕ ದಿವಸ್ ಕಾರ್ಯಕ್ರಮ
ದಲ್ಲಿ ಮಾತನಾಡಿದ ಅವರು, ಪೊಲೀಸರು 24 ಗಂಟೆಯೂ ಶ್ರಮಿಸಬೇಕು.

ಈಗ ತಂತ್ರಜ್ಞಾನ ಅಳವಡಿಸಿಕೊಂಡಿದ್ದೇವೆ. ನಮಗೆ ಸಾರ್ವಜನಿಕರ ಪ್ರತಿಯೊಂದು ಸಮಸ್ಯೆ ಬಗೆಹರಿಸುವುದು ಮುಖ್ಯ ಎಂದರು. ಮನೆ ಮುಂದೆ ಪಾರ್ಕಿಂಗ್, ಮತ್ತೊಂದೆಡೆ ತಡ ರಾತ್ರಿಯವರೆಗೂ ಬಾರ್ ತೆಗೆದಿರುವುದು, ಟ್ರಾಫಿಕ್ ಸಮಸ್ಯೆ ಹೀಗೆ ಒಬ್ಬೊಬ್ಬರದು ಒಂದೊಂದು ಸಮಸ್ಯೆ ಇರುತ್ತದೆ. ಎಲ್ಲರ ಸಮಸ್ಯೆಯೂ ಮುಖ್ಯ. ಹಾಗಾಗಿ ಸ್ಥಳೀಯವಾಗಿ ಸಭೆ ನಡೆಸುವ ಮೂಲಕ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುತ್ತೇವೆ. ನಿಮ್ಮ ಸಲಹೆ, ಸೂಚನೆಗಳನ್ನು ಪಡೆದುಕೊಂಡು ಬಗೆಹರಿಸುವುದಾಗಿ ತಿಳಿಸಿದರು.ಕೆಲವರು ದೂರು ನೀಡಲು ಆಯುಕ್ತರ ಕಚೇರಿಗೆ ಬರುತ್ತಾರೆ.

ಅಂತಹ ಸಂದರ್ಭದಲ್ಲಿ ಸ್ಥಳೀಯವಾಗಿ ಸಭೆ ನಡೆಸಿದರೆ ಸ್ಥಳೀಯ ಸಮಸ್ಯೆ, ಅನಿಸಿಕೆ ತಿಳಿದುಕೊಂಡು ಅಲ್ಲೇ ಅವರ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ನಾವು ಸಹ ಇನ್ನಷ್ಟು ಸಮರ್ಪಕವಾಗಿ ಕೆಲಸ ಮಾಡಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಪೊಲೀಸ್ ಇಲಾಖೆಯ ಮೂಲ ಉದ್ದೇಶ ಸಾರ್ವಜನಿಕರ ಒಟ್ಟಿಗೆ ಉತ್ತಮ ಬಾಂಧವ್ಯ ಸಾಧಿಸುವುದಾಗಿದೆ. ಒಬ್ಬೊಬ್ಬರು ಒಂದೊಂದು ರೀತಿ ಇರುತ್ತಾರೆ. ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಬಹಳಷ್ಟು ಕಷ್ಟ ಪಟ್ಟು ಕೆಲಸ ಮಾಡುತ್ತಿದ್ದಾರೆಂಬುವುದನ್ನು ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಎಂದರು.

ಭಾರತದಲ್ಲಿ ವಿವಾದ ಸೃಷ್ಟಿಸಿದ ಬಿಬಿಸಿ ಸಾಕ್ಷ್ಯ ಚಿತ್ರಗಳ ಸರಣಿ

ಅಹವಾಲು ಸಲ್ಲಿಕೆ:
ಕೆಲವು ರಸ್ತೆಗಳಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದ್ದು, ಅದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಅಹವಾಲು ಸಲ್ಲಿಸಿದರು. ಠಾಣೆಗಳಲ್ಲಿ ಅಕಾರಿಗಳು ಒಂದು ವರ್ಷ ಇರುವುದು ಕಷ್ಟವಾಗಿದೆ. ಸ್ಥಳೀಯ ಸಮಸ್ಯೆಗಳನ್ನು ಅರಿತು ಬಗೆಹರಿಸುವಷ್ಟರಲ್ಲಿ ಅವರ ವರ್ಗಾವಣೆಯಾಗುವುದರಿಂದ ಸಮಸ್ಯೆಗಳು ಹಾಗೆಯೇ ಉಳಿಯುತ್ತವೆ. ಹಾಗಾಗಿ ಒಬ್ಬ ಅಕಾರಿ ಎರಡು ವರ್ಷವಾದರೂ ಇರಬೇಕು ಎಂದು ಸಾರ್ವಜನಿಕರು ಮನವಿ ಮಾಡಿದರು.

ಪುಡಿರೌಡಿಗಳ ಮಟ್ಟ ಹಾಕಿ
ಗಾಂಜಾ ವೆಸನಿಗಳು ಹೆಚ್ಚಾಗುತ್ತಿದ್ದಾರೆ. ಕೆಲವು ಪುಡಿ ರೌಡಿಗಳು ರಾತ್ರಿ ಸಮಯದಲ್ಲಿ ಸಾರ್ವಜನಿಕರನ್ನು ಅಡ್ಡಗಟ್ಟಿ ಚಾಕು ತೋರಿಸಿ ಹಣ ದೋಚುತ್ತಿದ್ದಾರೆ. ಹಾಗಾಗಿ ಒಂಟಿಯಾಗಿ ಓಡಾಡುವುದು ಕಷ್ಟವಾಗುತ್ತಿದೆ. ಹೊಯ್ಸಳ ಪೆÇಲೀಸರಿಗೆ ಕರೆ ಮಾಡಿದರೆ ಅವರು ಸೈರನ್ ಹಾಕಿಕೊಂಡು ಬರುತ್ತಾರೆ. ಆ ಶಬ್ದಕ್ಕೆ ಕಳ್ಳರು ಓಡಿ ಹೋಗುತ್ತಾರೆ. ಸಿವಿಲ್ ಡ್ರೆಸ್‍ನಲ್ಲಿ ಪೆÇಲೀಸರು ಕಾರ್ಯಾಚರಣೆ ನಡೆಸಿದರೆ ಪುಡಿ ರೌಡಿಗಳನ್ನು ಮಟ್ಟ ಹಾಕುವುದರ ಜೊತೆಗೆ ಸಾರ್ವಜನಿಕರಿಗಾಗುವ ತೊಂದರೆಗಳನ್ನು ದೂರ ಮಾಡಬಹುದೆಂಬ ಮನವಿ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಸ್ಥಳೀಯರು ಆಯುಕ್ತರ ಗಮನ ಸೆಳೆದರು.

ಕಿತ್ತೂರು ಕರ್ನಾಟಕ ಬಿಜೆಪಿಯ ಭದ್ರಕೋಟೆ : ಸಿಎಂ ಬೊಮ್ಮಾಯಿ

ಆಯುಕ್ತರು ಸ್ಥಳೀಯರ ಅಹವಾಲುಗಳನ್ನು ಆಲಿಸಿ ಸಮಸ್ಯೆಗಳನ್ನು ಶೀಘ್ರದಲ್ಲೇ ಬಗೆಹರಿಸುವುದಾಗಿ ಭರವಸೆ ನೀಡಿದರು. ಜನಸಂಪರ್ಕ ಸಭೆಯಲ್ಲಿ ಪೂರ್ವ ವಿಭಾಗದ ಡಿಸಿಪಿ ಡಾ. ಭೀಮಾಶಂಕರ ಗುಳೇದ್, ಎಸಿಪಿ ವೆಂಕಟೇಶ್ ಪ್ರಸನ್ನ ಮತ್ತಿತರ ಸಿಬ್ಬಂದಿಗಳಿದ್ದರು.

Police Commissioner, Pratap Reddy, public, cooperates, police,

Articles You Might Like

Share This Article