ಥಾಣೆ, ಫೆ 3- ಪತಸಂಚಲನದ ವೇಳೆ ಕುಸಿದು ಬಿದ್ದು ಪೋಲಿಸ್ ಕಾನ್‍ಸ್ಟೇಬಲ್ ಸಾವನ್ನಪ್ಪಿದ್ದಾರೆ ಘಟನೆ ಇಲ್ಲಿ ನಡೆದಿದೆ ನಡೆದಿದೆ. ನಗರ ಪೊಲೀಸ್ ಕ್ವಿಕ್ ರೆಸ್ಪಾನ್ಸ್ ಟೀಮ್‍ನಲ್ಲಿ ಕಾರ್ಯನಿರ್ವಹಿಸುತ್ತದ್ದ ಮಹೇಶ ಮೋರೆ ಮೃತಪಟ್ಟ ಪೇದೆ.
ಇಂದು ಬೆಳಗ್ಗೆ 7.30ರ ಸುಮಾರಿಗೆ ಪರೇಡ್ ನಡೆಯುತ್ತಿದ್ದಾಗ ಕುಸಿದು ಬಿದ್ದಿದ್ದಾರೆ ತಕ್ಷಣ ಅವರನ್ನ ಥಾಣೆ ಸಿವಿಲ್ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅವರ ಸಾವಿನ ಕಾರಣ ಇನ್ನೂ ತಿಳಿದುಬಂದಿಲ್ಲ ಮತ್ತು ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ. ದಿನನಿತ್ಯ ಬೆಳಗಿನ ಪರೇಡ್ ನೆಡೆಯುವುದು ವಾಡಿಕೆ ಆದರಂತೆ ಇಂದು 7 ಗಂಟೆಗೆ ಸಿಬ್ಬಂ ಬಂದಿದ್ದರು ಕೆಲ ಹೊತ್ತಿನಲ್ಲೇ ಈ ಘಟನೆ ನಡೆದಿದೆ
