1137 ಕಾನ್‍ಸ್ಟೆಬಲ್‍ಗಳ ನೇಮಕಾತಿಗೆ ಅಧಿಸೂಚನೆ

Social Share

ಬೆಂಗಳೂರು,ಅ.13- ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 1137 ಪೊಲೀಸ್ ಕಾನ್‍ಸ್ಟೆಬಲ್ (ಸಿವಿಲ್) ನೇಮಕಾತಿಗೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ತೃತೀಯ ಲಿಂಗಿಗಳಿಗೂ ಅವಕಾಶ ಕಲ್ಪಿಸಲಾಗಿದೆ.

ಒಟ್ಟು 1137 ಪೊಲೀಸ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಪುರುಷರಿಗೆ 683, ಮಹಿಳೆಯರಿಗೆ 229, ತೃತೀಯ ಲಿಂಗಿ(ಪುರುಷ)ಗಳಿಗೆ 22, ತೃತೀಯ ಲಿಂಗಿ(ಮಹಿಳೆ)ಗಳಿಗೆ 10, ಸೇವಾ ನಿರತ ಪೊಲೀಸರಿಗೆ(ಪುರುಷ) 134, ಸೇವಾ ನಿರತ ಪೊಲೀಸರಿಗೆ(ಮಹಿಳೆ) 57, ಸೇವಾ ನಿರತ ಪೊಲೀಸ್ ಕಾನ್‍ಸ್ಟೆಬಲ್( ಪುರುಷ) ತೃತೀಯ ಲಿಂಗಿ 1 ಮತ್ತು ಸೇವಾ ನಿರತ ಪೊಲೀಸ್ ಕಾನ್‍ಸ್ಟೆಬಲ್( ಮಹಿಳೆ) ತೃತೀಯ ಲಿಂಗಿ 1 ಹುದ್ದೆಗಳಿಗೆ ಆಹ್ವಾನಿಸಲಾಗಿದೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಅಭ್ಯರ್ಥಿಗಳಿಗೆ 27 ವರ್ಷ, ಇತರೆ ಅಭ್ಯರ್ಥಿಗಳಿಗೆ 25, ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಬುಡಕಟ್ಟು ಅಭ್ಯರ್ಥಿಗಳಿಗೆ 30 ವರ್ಷ ವಯೋಮಾನವನ್ನು ನಿಗದಪಡಿಸಲಾಗಿದೆ.
ಅರ್ಜಿಯನ್ನು ಸೇವಾನಿರತ ಅಭ್ಯರ್ಥಿಗಳು 21-11-2022ಕ್ಕೆ ಎಸ್ಸಿ-ಎಸ್ಟಿ ಹಾಗೂ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 33 ವರ್ಷ ಹಾಗೂ ಇತರೆ ಅಭ್ಯರ್ಥಿಗಳಿಗೆ 31 ವರ್ಷ ವಯೋಮಾನ ಮೀರುವಂತಿಲ್ಲ.

ಅಕ್ಟೋಬರ್ 20ರಿಂದ ಅರ್ಜಿ ಸಲ್ಲಿಸಲು ಅವಕಾಶವಿದ್ದು, ನ.21 ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಕೊನೆಯ ದಿನವಾಗಿದೆ. ಆನ್‍ಲೈನ್, ಅಧಿಕೃತ ಬ್ಯಾಂಕ್ ಶಾಖೆಗಳು, ಸ್ಥಳೀಯ ಅಂಚೆ ಕಚೇರಿಯಲ್ಲಿ ಶುಲ್ಕ ಪಾವತಿಸಲು ನ.23 ಕೊನೆಯ ದಿನ.

ಆನ್‍ಲೈನ್‍ನಲ್ಲಿ ಅರ್ಜಿಗಳನ್ನು ಭರ್ತಿ ಮಾಡಲು ತಾಂತ್ರಿಕ ಸಮಸ್ಯೆ ಎದುರಾದರೆ ಸಹಾಯವಾಣಿ 080-22943346 ಸಹಾಯವನ್ನು ಪಡೆಯಲು ಅನುವು ಮಾಡಿಕೊಡಲಾಗಿದೆ.

ಸಾಮಾನ್ಯ ಅರ್ಹತೆ ಇರುವ ಪ್ರವರ್ಗ 2(ಎ), 2(ಬಿ), 3(ಎ), 3(ಬಿ) ಅಭ್ಯರ್ಥಿಗಳಿಗೆ 400 ರೂ. ಹಾಗೂ ಎಸ್ಸಿ-ಎಸ್ಟಿ ಪ್ರವರ್ಗ-1ಕ್ಕೆ ಸೇರಿದ ಅಭ್ಯರ್ಥಿಗಳಿಗೆ 200 ರೂ. ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ.

Articles You Might Like

Share This Article