ಬೆಂಗಳೂರು, ಜ.5- ಕಾಟನ್ಪೇಟೆ ಠಾಣೆ ಪೊಲೀಸರ ವಶದಲ್ಲಿದ್ದ ಯುವಕ ಸಾವನ್ನಪ್ಪಿದ್ದಾನೆ. ಜಾಲಿ ಮೊಹಲ್ಲಾದ ಕುರ್ಲಾ ಸ್ಟ್ಯಾಂಡ್ ಸಮೀಪದ ನಿವಾಸಿ ವಿನೋದ್(23) ಮೃತಪಟ್ಟಿರುವ ಯುವಕ.
ವಿನೋದ್ ಮೇಲೆ 2017ರಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಜಾಮೀನು ರಹಿತ ವಾರೆಂಟ್ (ಎನ್ಬಿಡಬ್ಲ್ಯೂ) ಜಾರಿಯಾ ಗಿತ್ತು. ಅಂದಿನಿಂದ ಆತ ತಲೆ ಮರೆಸಿಕೊಂಡಿದ್ದನು.
ಪೊಲೀಸರು ಈತನಿಗಾಗಿ ಹುಡುಕಾಡುತ್ತಿದ್ದರೂ ಸಿಕ್ಕಿರಲಿಲ್ಲ. ನಿನ್ನೆ ಸಂಜೆ ಪತ್ತೆಯಾದ ಈತನನ್ನು ಪೊಲೀಸರು ಠಾಣೆಗೆ ಕರೆತಂದಿದ್ದು, ರಾತ್ರಿ ಠಾಣೆಯಲ್ಲಿಯೇ ಮಲಗಿದ್ದನು. ಇಂದು ಬೆಳಗ್ಗೆ ವಿನೋದ್ನನ್ನು ನ್ಯಾಯಾಲಯ ಮುಂದೆ ಹಾಜರುಪಡಿಸಬೇಕಿತ್ತು.
ಬೆಳಗಿನ ಜಾವ 3.45ರ ಸುಮಾರಿಗೆ ರಾತ್ರಿ ಪಾಳಿಯ ಕರ್ತವ್ಯದಲ್ಲಿದ್ದ ಠಾಣಾಧಿಕಾರಿ ಹೋಗಿ ಎಬ್ಬಿಸಿದಾಗ ವಿನೋದ್ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಕಂಡು ಬಂದಿದೆ. ತಕ್ಷಣ ವಿಕ್ಟೋರಿಯಾ ಆಸ್ಪತ್ರೆಗೆ ವಿನೋದ್ ನನ್ನು ಕರೆದೊಯ್ದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಬೆಂಗಳೂರು-ಮೈಸೂರು ದಶಪಥ ಕಾಮಗಾರಿ ಮುಗಿದ ಬಳಿಕವೇ ಲೋಕಾರ್ಪಣೆ : ಸಿಎಂ
ಸಿಓಡಿ ತನಿಖೆ :ಪೊಲೀಸರ ವಶದಲ್ಲಿದ್ದ ಯುವಕ ಸಾವನ್ನಪ್ಪಿರುವ ಬಗ್ಗೆ ಮುಂದಿನ ತನಿಖೆಯನ್ನು ಸಿಒಡಿಗೆ ವಹಿಸಲಾಗಿದೆ. ಎನ್ಎಚ್ಆರ್ಸಿ ಗೈಡ್ ಲೈನ್ ಪ್ರಕಾರ ಮುಂದಿನ ಪ್ರಕ್ರಿಯೆ ಮಾಡಲಾಗುತ್ತದೆ.
police, custody,man died,