ಪೊಲೀಸ್ ಅಧಿಕಾರಿ ನಂದೀಶ್ ಸಾವಿನ ಕುರಿತು ಉನ್ನತ ಮಟ್ಟದ ತನಿಖೆಗೆ ಕಾಂಗ್ರೆಸ್ ಆಗ್ರಹ

Social Share

ಬೆಂಗಳೂರು,ಅ.30- ಕೆ.ಆರ್.ಪುರಂನ ಪೊಲೀಸ್ ಅಧಿಕಾರಿ ನಂದೀಶ್ ಸಾವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಪಕ್ಷ, ಸಚಿವ ಎಂ.ಟಿ.ಬಿ.ನಾಗರಾಜ್ ಅವರ ಹೇಳಿಕೆಯನ್ನು ತನಿಖೆಗೊಳಪಡಿಸುವಂತೆ ಒತ್ತಾಯಿಸಿದೆ.

ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಜಂಟಿ ಪತ್ರಿಕಾಗೋಷ್ಠಿ ನಡೆಸಿ, ನಂದೀಶ್ ಸಾವು ಪ್ರಕರಣದ ಘಟನಾವಳಿಗಳನ್ನು ವಿವರಿಸಿದ್ದಾರೆ.

ಖುದ್ದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಅವರೇ ಸರ್ಕಾರದ ಭ್ರಷ್ಟಾಚಾರವನ್ನು ಬಯಲಿಗೆ ತಂದಿದ್ದಾರೆ. ವರ್ಗಾವಣೆಗಾಗಿ 70ರಿಂದ 80 ಲಕ್ಷ ಹಣ ನೀಡಿ ಬಂದವನಿಗೆ ಹೃದಯಾಘಾತವಾಗದೆ ಇನ್ನೇನು ಆಗಲು ಸಾಧ್ಯ ಎಂದು ಪೊಲೀಸ್ ಆಯುಕ್ತರ ಜೊತೆ ಎಂಟಿಬಿ ಅವರು ನಡೆಸಿರುವ ಸಂಭಾಷಣೆಯ ದೃಶ್ಯಾವಳಿ ಭಾರೀ ವೈರಲ್ಲಾಗಿದೆ.

ರಾಜ್ಯ ಕಾಂಗ್ರೆಸಿಗರಿಗಿಂತಲೂ ಮೊದಲೇ ಹೈಕಮಾಂಡ್ ಈ ವಾದ ಕುರಿತು ಪ್ರತಿಕ್ರಿಯಿಸಿರುವುದು ಗಮನ ಸೆಳೆದಿದೆ. ನಿನ್ನೆ ರಣದೀಪ್ ಸಿಂಗ್ ಸುರ್ಜೆವಾಲ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಪೊಲೀಸ್ ಅಧಿಕಾರಿಯ ಸಾವು ಮತ್ತು ಪತ್ರಕರ್ತರಿಗೆ ಹಣದ ಆಮಿಷವೊಡ್ಡಿದ ಪ್ರಕರಣದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

CBI ತನಿಖೆಗೆ ವಹಿಸಿದ್ದ ಪ್ರಕರಣಗಳನ್ನು ಹಿಂಪಡೆದ ತೆಲಂಗಾಣ ಸರ್ಕಾರ

ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು. ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಲಾಗಿದೆ. ಅಷ್ಟಕ್ಕೇ ನಿಲ್ಲದ ಸುರ್ಜೆವಾಲ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಅವಧಿಯಲ್ಲಿನ ಭ್ರಷ್ಟಾಚಾರಗಳ ತನಿಖೆಗಾಗಿ ಆಯೋಗ ರಚಿಸಲಾಗುವುದು. ತಪ್ಪು ಮಾಡಿದವರನ್ನು ಕಂಬಿ ಹಿಂದೆ ಕಳುಹಿಸುವುದಾಗಿಯೂ ಗುಡುಗಿದ್ದರು.

ಪಾದಯಾತ್ರೆಯಲ್ಲಿ ಇದ್ದಕ್ಕಿದ್ದಂತೆ ಓಡಿದ ರಾಹುಲ್, ಭದ್ರತಾ ಸಿಬ್ಬಂದಿ ಕಕ್ಕಾಬಿಕ್ಕಿ

ಹೈಕಮಾಂಡ್ ಸೂಚನೆ ಮೇರೆಗೆ ಇಂದು ರಾಜ್ಯ ನಾಯಕರು ಜಂಟಿ ಪತ್ರಿಕಾಗೋಷ್ಠಿ ನಡೆಸಿ ಎರಡು ಪ್ರಕರಣಗಳ ಬಗ್ಗೆ ಮತ್ತಷ್ಟು ವಿವರಣೆ ನೀಡಿದ್ದು, ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು, ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.

Articles You Might Like

Share This Article